ಈ ವೇಳೆ 10 ಕಲಾವಿದರಿಗೆ ಕಲಾ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡೋಹರ್ ಕಕ್ಕಯ್ಯ ಪ್ರಶಸ್ತಿ ಪುರಸತ ಗಂಗಾಧರ ಹುಲಕಲ್ ಮತ್ತು ಆರಾಧ್ಯ ವಾಣಿ ದಿನಪತ್ರಿಕೆ ಸಂಪಾದಕ ರಲಿಂಗಯ್ಯ ಹಿರೇಮಠಗೆ ವಿಶೇಷವಾಗಿ ಸನ್ಮಾನಿಸಲಾಯಿತು. ಯುವ ಮುಖಂಡ ಶಂಕರನಾಯಕ ಅಧ್ಯಕ್ಷತೆ ವಹಿಸಿದ್ದರು. ದೇವಪ್ಪ ಪೂಜಾರಿ, ಮಾಳಪ್ಪ ಪೂಜಾರಿ ಸಾನ್ನಿಧ್ಯ ವಹಿಸಿದ್ದರು. ಬಲಭೀಮ ನಾಯಕ ಬೈರಿಮರಡ್ಡಿ, ಶರಣು ನಾಯಕ ಬೈರಿಮರಡ್ಡಿ, ಸಂದ ಅಧ್ಯಕ್ಷ ರವಿ ನಾಯಕ ಬೈರಿಮರಡ್ಡಿ, ಮಲ್ಲೇಶಿ ಕವಿ ಸೇರಿ ಇನ್ನಿತರರು ವೇದಿಕೆಯಲ್ಲಿದ್ದರು. ಪ್ರಮುಖರಾದ ವೆಂಕಟೇಶ ನಾಯಕ ಬೈರಿಮಡ್ಡಿ ಸ್ವಾಗತಿಸಿದರು. ರೇಣುಕಾ ಶೆಳ್ಳಗಿ ಪ್ರಾರ್ಥಿಸಿದರು. ಮಲ್ಲು ಬಾದ್ಯಾಪುರ ನಿರೂಪಿಸಿ ವಂದಿಸಿದರು.