ಗುರುಮಠಕಲ್ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡ ಕ್ಷಯಮುಕ್ತ ಭಾರತ ಅಭಿಯಾನಕ್ಕೆ ಶಾಸಕ ಶರಣಗೌಡ ಕಂದಕೂರ ಚಾಲನೆ ನೀಡಿದರು. ಟಿಎಹ್ಒ ಹಣಮಂತ ರೆಡ್ಡಿ, ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ವೈದ್ಯಾಧಿಕಾರಿ ಮಹೇಶ್ ಸಜ್ಜನ್, ಡಾ.ನೀಲಾಂಬಿಕಾ, ಮುಖ್ಯಾಧಿಕಾರಿ ಶರಣಪ್ಪ ಎಂ.ಕಿಶನ್ಂ ರಾಠೋಡ ಇತರರಿದ್ದರು.
ಗುರುಮಠಕಲ್: ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದರ ಜತೆಗೆ ಕ್ಷಮುಕ್ತ ಭಾರತಕ್ಕೆ ಕೈಜೋಡಿಸಬೇಕು ಎಂದು ಶಾಸಕ ಶರಣಗೌಡ ಕಂದಕೂರ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಧಾನಮಂತ್ರಿ ಕ್ಷಯಮುಕ್ತ ಭಾರತ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಯಮುಕ್ತವಾಗಿ ಸೂಕ್ತ ಚಿಕಿತ್ಸೆ ಪಡೆದು ರೋಗದಿಂದ ಮುಕ್ತಿ ಪಡೆಯಬಹುದು, ಈ ನಿಟ್ಟಿನಲ್ಲಿ ಕ್ಷಯ ರೋಗಿಯು ಕೂಡ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ರೋಗ ಉಲ್ಬಣಗೊಂಡು ಕುಟುಂಬದವರಿಗೆ ಹರಡುವ ಮುನ್ನ ಜಾಗೃತಿ ವಹಿಸಬೇಕು. ಜಿಲ್ಲೆಯಲ್ಲಿ 1178 ರೋಗಿಗಳು ಪತ್ತೆಯಾಗಿದ್ದು, ವಾಸಿಯಾಗಲಾರದ ರೋಗವಂತು ಅಲ್ಲ. ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ ಆಸ್ಪತ್ರೆಗೆ ಭೇಟಿ ನೀಡಬೇಕು. ತಕ್ಷಣ ಚಿಕಿತ್ಸೆ ಪಡೆದರೆ ಬೇಗ ಗುಣಮುಖರಾಗಲು ಸಾಧ್ಯ. ಕೇಂದ್ರ ಸರ್ಕಾರ ಜನರ ಆರೋಗ್ಯ ದೃಷ್ಟಿಯಿಂದ ಇಂತಹ ಕಾರ್ಯಕ್ರಮ ರೂಪಿಸಿದೆ. ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಪ್ರತಿ ಮನೆ ಬಾಗಿಲಿಗೆ ತಲುಪಿಸಬೇಕು ಎಂದು ಹೇಳಿದರು.
ಕಾರ್ಯಕ್ರಮ ಅಧಿಕಾರಿ ಡಾ.ಸಂಜೀವ ಕುಮಾರ್ ರಾಯಚೂರಕರ್ ಮಾತನಾಡಿ, ಸಮಾಜದ ಪಾಲ್ಗೊಳ್ಳುವಿಗೆಯಿಂದ ರೋಗಮುಕ್ತ ಮಾಡಲು ಅವಕಾಶವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು. ಕ್ಷಯಮುಕ್ತ ಮಾಡಲು ಶಾಸಕರು ವೈಯಕ್ತಿಕವಾಗಿ ರೋಗಿಗಳಿಗೆ ಪೌಷ್ಟಿಕ 50 ಕಿಟ್ ವಿತರಿಸಿದರು.
ಮಾಜಿ ಶಾಸಕ ದಿ.ನಾಗನಗೌಡ ಕಂದಕೂರ ಹಾಗೂ ಶಾಸಕ ಶರಣಗೌಡ ಕಂದಕೂರ ಅವರು ಸಹ ಕಾಳಜಿ ಹೊಂದಿದ್ದಾರೆ. ರೋಗಿಗಳು ಔಷಧ ಜತೆಗೆ ಪೌಷ್ಟಿಕಾಂಶ ಆಹಾರ ಸೇವನೆ ಮಾಡಬೇಕು. ಬೇಳೆಕಾಳು ಸೇವನೆ ಅಗತ್ಯ. ಹಣ್ಣು ಹಂಪಲು, ಹಾಲು ಸೇವಿಸಬೇಕು ಎಂದು ಸಲಹೆ ನೀಡಿದರು.
ಡಿಹೆಚ್ಒ ಡಾ.ಮಹೇಶ ಬಿರಾದಾರ ಮಾತನಾಡಿದರು. ಈ ವೇಳೆ ಟಿಎಹ್ಒ ಹಣಮಂತ ರೆಡ್ಡಿ, ತಹಸೀಲ್ದಾರ್ ಚನ್ನಮಲ್ಲಪ್ಪ ಂಟಿ, ವೈದ್ಯಾಧಿಕಾರಿ ಮಹೇಶ್ ಸಜ್ಜನ್, ಡಾ. ನೀಲಾಂಬಿಕಾ, ಮುಖ್ಯಾಧಿಕಾರಿ ಶರಣಪ್ಪ ಎಂ., ಕಿಶನ್ ರಾಠೋಡ ಇತರರಿದ್ದರು.