JEE Advanced Result: ರಾಜ್ಯಕ್ಕೆ ಆರ್ಯನ್ ಟಾಪರ್

ಆರ್ಯನ್ ರಘುಪತಿ ರಾಜ್ಯದ ಟಾಪರ್
ಆರ್ಯನ್ ರಘುಪತಿ ರಾಜ್ಯದ ಟಾಪರ್
Published on

ಪ್ರಮುಖ ಮುಖ್ಯಾಂಶಗಳು

  • ಐಐಟಿ ಬಾಂಬೆ ವಲಯದ ಆರ್ಯನ್ ರಘುಪತಿ ಅಖಿಲ ಭಾರತ ಮಟ್ಟದಲ್ಲಿ 12ನೇ ಸ್ಥಾನ (Rank) ಗಳಿಸಿದ್ದಾರೆ. ಆರ್ಯನ್ ಬೆಂಗಳೂರಿನ ಎಮೆರಾಲ್ಡ್ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ 12ನೇ ತರಗತಿ ವ್ಯಾಸಂಗ
  • ಬೆಂಗಳೂರಿನ ಸಹಕಾರ ನಗರದ ನಾರಾಯಣ ಒಲಿಂಪಿಯಾಡ್ ಸ್ಕೂಲ್‌ನ ಮನು ಪರಮೇಶ್ವರನ್ ಅವರು ಅಖಿಲ ಭಾರತ ಮಟ್ಟದಲ್ಲಿ 13ನೇ ಸ್ಥಾನ
  • ಚೈತನ್ಯ ಟೆಕ್ನೋ ಮಾರತ್ತಹಳ್ಳಿ ಶಾಖೆಯ ಆದಿತ್ಯ ಸಿಂಗ್ ಅಖಿಲ ಭಾರತ ಮಟ್ಟದಲ್ಲಿ 37ನೇ ಸ್ಥಾನ, ಅದೇ ಶಾಲೆಯ ತನ್ಮಯ್ ಎಚ್.ಜಿ. 67ನೇ ಸ್ಥಾನ
ಬೆಂಗಳೂರು: ಭಾರತೀಯ ತಂತ್ರಜ್ಞಾನ ಸಂಸ್ಥೆ ಸೇರಿ ಇತರೆ ಪ್ರತಿಷ್ಠಿತ ಇಂಜಿನಿಯರಿಂಗ್ ಸಂಸ್ಥೆಗಳ ಪ್ರವೇಶಕ್ಕಾಗಿ ಐಐಟಿ ರೂರ್ಕಿ ನಡೆಸಿದ ಜೆಇಇ ಅಡ್ವಾನ್ಸ್ಡ್ ಫಲಿತಾಂಶವು ಸೋಮವಾರ ಪ್ರಕಟವಾಗಿದ್ದು, ಅಲೆನ್ ಇನ್‌ಸ್ಟಿಟ್ಯೂಟ್‌ನ ಆರ್ಯನ್ ರಘುಪತಿ ರಾಜ್ಯದ ಟಾಪರ್ ಆಗಿದ್ದಾರೆ.
ಐಐಟಿ ಬಾಂಬೆ ವಲಯದ ಆರ್ಯನ್ ರಘುಪತಿ ಅಖಿಲ ಭಾರತ ಮಟ್ಟದಲ್ಲಿ 12ನೇ ಸ್ಥಾನ (Rank) ಗಳಿಸಿದ್ದಾರೆ. ಆರ್ಯನ್ ಬೆಂಗಳೂರಿನ ಎಮೆರಾಲ್ಡ್ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ 12ನೇ ತರಗತಿ ವ್ಯಾಸಂಗ ಮಾಡಿದ್ದಾರೆ. ಬೆಂಗಳೂರಿನ ಸಹಕಾರ ನಗರದ ನಾರಾಯಣ ಒಲಿಂಪಿಯಾಡ್ ಸ್ಕೂಲ್‌ನ ಮನು ಪರಮೇಶ್ವರನ್ ಅವರು ಅಖಿಲ ಭಾರತ ಮಟ್ಟದಲ್ಲಿ 13ನೇ ಸ್ಥಾನ ಪಡೆದಿದ್ದಾರೆ. ಚೈತನ್ಯ ಟೆಕ್ನೋ ಮಾರತ್ತಹಳ್ಳಿ ಶಾಖೆಯ ಆದಿತ್ಯ ಸಿಂಗ್ ಅಖಿಲ ಭಾರತ ಮಟ್ಟದಲ್ಲಿ 37ನೇ ಸ್ಥಾನ, ಅದೇ ಶಾಲೆಯ ತನ್ಮಯ್ ಎಚ್.ಜಿ. 67ನೇ ಸ್ಥಾನ ಪಡೆದಿದ್ದಾರೆ.
ಆರ್ಯನ್ ರಘುಪತಿ ಕುಟುಂಬವು ಇಂಜಿನಿಯರ್ಸ್ ಕುಟುಂಬವಾಗಿದೆ. ತಂದೆ, ತಾಯಿ, ಹಿರಿಯ ಅಣ್ಣ ಮೂರು ಮಂದಿ ಇಂಜಿನಿಯರ್‌ಗಳಾಗಿರುವುದೇ ಆರ್ಯನ್‌ಗೆ ಸ್ಫೂರ್ತಿದಾಯಕವಾಗಿದೆ. ಆದ್ದರಿಂದ ಆರ್ಯನ್ ಕೂಡ ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಇಂಜಿನಿಯರಿಂಗ್ ಮಾಡುವ ಗುರಿ ಹೊಂದಿದ್ದಾರೆ.
ಅದೇ ರೀತಿ ಮನು ಪರಮೇಶ್ವರನ್ ಅವರ ತಂದೆ-ತಾಯಿ ಕೂಡ ಇಂಜಿನಿಯರ್ಸ್ ಆಗಿದ್ದಾರೆ. ಮನು ಕೂಡ ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಮುಂದುವರಿಯುವ ಹಂಬಲ ಹೊಂದಿದ್ದಾರೆ. ಆರ್ಯನ್ ರಘುಪತಿ 360ಕ್ಕೆ ಇಬ್ಬರೂ 310 ಅಂಕಗಳನ್ನು ಪಡೆದಿದ್ದಾರೆ.
"

ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯು ತುಂಬಾ ಕಠಿಣವಾಗಿತ್ತು. ಆದರೆ, ಐಐಟಿ ಬಾಂಬೆಯಲ್ಲಿ ಓದುವುದು ನನ್ನ ಬಾಲ್ಯದ ಕನಸಾಗಿತ್ತು. ಅದಕ್ಕೆ ತಕ್ಕಂತೆ ಮಾರ್ಗದರ್ಶನ ನೀಡಿದ ಅಲೆನ್ ಸಂಸ್ಥೆಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಪ್ರತಿದಿನ 6ರಿಂದ 7ಗಂಟೆ ವ್ಯಾಸಂಗ ಮಾಡುತ್ತಿದ್ದೆ. ಕ್ರಿಕೆಟ್ ಆಡುವುದು ಮತ್ತು ಒಟಿಟಿಯಲ್ಲಿ ಸಿನಿಮಾಗಳನ್ನು ನೋಡುವುದು ನನ್ನ ಹವ್ಯಾಸ.

— - ಆರ್ಯನ್ ರಘುಪತಿ, ಕರ್ನಾಟಕ ಟಾಪರ್


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net