ಬೆಂಗಳೂರು: ಮಲ್ಲೇಶ್ವರದ ಕೇಂದ್ರಿಯ ವಿದ್ಯಾಲಯ ಶಾಲೆಯ ವಿದ್ಯಾರ್ಥಿ ಜತಿನ್ ಆನಂದ್, ರಾಜ್ಯ ರೋಲ್ ಬಾಲ್ ತಂಡದ ಅಂಡರ್–11 ವಿಭಾಗಕ್ಕೆ ಆಯ್ಕೆಯಾಗಿದ್ದಾರೆ.
ಫೆಬ್ರವರಿ 20ರಿಂದ ಫೆ.24ರವರೆಗೆ ತಮಿಳುನಾಡಿನ ಎಸ್ಎಐ ರೋಲ್ ಬಾಲ್ ಮೈದಾನದಲ್ಲಿ ನಡೆಯುವ ಮಿನಿ ರಾಷ್ಟ್ರೀಯ ರೋಲ್ ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಗಂಡು ಮಕ್ಕಳ ತಂಡದಲ್ಲಿ ಜತಿನ್ ಆನಂದ್, ಜಿ.ಪಿ.ದಿವಿತ್, ಎಸ್.ಚಿರಾಗ್, ವಿಹಾನ್ ಎಂ.ಕುಮಾರ್, ಎನ್.ಎಚ್. ಪುನರ್ವ್, ಎಸ್.ಜೀವನ್ ಕುಮಾರ್, ಎ.ಚಿರಂತ್, ಎಸ್.ವಿ.ಚರ್ವಿಕ್, ಎ.ಕುವಲ್ ರೆಡ್ಡಿ, ಎಚ್.ಎ. ಆರ್ಯನ್ ಗೌಡ, ಎಂ.ಹರ್ಷವರ್ಧನ್, ಎಸ್.ಅದವನ್ ಇದ್ದಾರೆ.
ನಿರಂತರ ಅಭ್ಯಾಸದ ಮೂಲಕ ರಾಜ್ಯ ತಂಡಕ್ಕೆ ಆಯ್ಕೆಯಾಗಿರುವುದು ಅವರ ಪ್ರತಿಭೆ, ಪರಿಶ್ರಮ ಮತ್ತು ಶಿಸ್ತಿನ ಫಲವಾಗಿದೆ. ಅವರ ಸಾಧನೆಗೆ ಕೋಚ್ ಎಸ್. ರವಿ ಮಾರ್ಗದರ್ಶನ ಮಹತ್ವದ ಪಾತ್ರವಹಿಸಿದೆ.
ಈ ಸಾಧನೆಯಿಂದ ಕುಟುಂಬ, ಶಾಲೆ, ಹೆಮ್ಮೆಯ ವಾತಾವರಣ ನಿರ್ಮಾಣವಾಗಿದೆ. ಮುಂದಿನ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ರಾಜ್ಯಕ್ಕೆ ಮತ್ತು ದೇಶಕ್ಕೆ ಕೀರ್ತಿ ತರಲಿ ಎಂದು ಜನರು ಹಾರೈಸಿದ್ದಾರೆ.