ಜಮಖಂಡಿ ಉಪ ಕಾರಾಗೃಹದಲ್ಲಿ ಇರುವ ವಿಚಾರಣಾಧಿನ ಖೈದಿಗಳ ನಡುವೆ ಭಾನುವಾರ ಸಂಜೆ ಬೀಗ ಮುದ್ರೆ ಮಾಡುವ ವೇಳೆ ಎರಡು ಕಡೆಯವರ ನಡುವೆ ಮಾತಿನ ಚಕುಮಕಿ ನಡೆದು, ಅದು ತಾರಕಕ್ಕೆ ಹೋಗಿ ನಾಲ್ವರು ಸೇರಿಕೊಂಡು ಇನ್ನಿಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ. ಆಗ ಉಪಕಾರಾಗೃಹದ ಅಽಕ್ಷಿಕ ವಿ.ಡಿ.ಕುಂಬಾರ ಅವರು ಜಗಳ ಬಿಡಿಸಲು ಮುಂದಾಗಿ, ಹೊಡೆಯುತ್ತಿದ್ದವರನ್ನು ಹಿಡಿದುಕೊಂಡಿದ್ದಾರೆ. ಆಗ ಗಲಾಟೆ ನಿಲ್ಲಿಸಿದ ಆರೋಪಿಗಳು ತಮ್ಮನ್ನು ಹಿಡಿದುಕೊಂಡಿದ್ದ ಅಽಕಾರಿಗೂ ಹೊಡೆದಿದ್ದಾರೆ. ಇದರಿಂದ ಅವರ ಎಡಗೈ ಮೂಳೆ ಮುರಿದಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡೆಸಿದ್ದಾರೆ. ಸದ್ಯ ಅವರು ಸುಧಾರಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.