ಜಗನ್ನಾಥ ವಿಠ್ಠಲ ಪ್ರಶಸ್ತಿ ಪ್ರದಾನ ಫೆ.1ರಂದು

ಕಲಬುರಗಿ ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿ ಅಧ್ಯಕ್ಷ ಪಂ.ಗೋಪಾಲಾಚಾರ್ಯ ಅಕಮಂಚಿ ವಾಹಿನಿಯ ರಜತ ಮಹೋತ್ಸವ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದರು. ವ್ಯಾಸರಾಜ ಸಂತೆಕೆಲ್ಲೂರ್​, ಭೆಂಕಿ ಭೀಮಣ್ಣ ಇದ್ದರು.
ಕಲಬುರಗಿ ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿ ಅಧ್ಯಕ್ಷ ಪಂ.ಗೋಪಾಲಾಚಾರ್ಯ ಅಕಮಂಚಿ ವಾಹಿನಿಯ ರಜತ ಮಹೋತ್ಸವ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದರು. ವ್ಯಾಸರಾಜ ಸಂತೆಕೆಲ್ಲೂರ್​, ಭೆಂಕಿ ಭೀಮಣ್ಣ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿಯ ರಜತ ಮಹೋತ್ಸವ
  • ಫೆ.28ರಿಂದ ಶ್ರೀ ಸತ್ಯಾತ್ಮತಿರ್ಥರ ಅಮೃತೋಪದೇಶ
ಕಲಬುರಗಿ: ವಿಶ್ವ ಮಧ್ವ ಮಹಾಪರಿಷತ್ತಿನ ಅಂಗ ಸಂಸ್ಥೆ ಹರಿದಾಸ ಸಾಹಿತ್ಯ ಪ್ರಚಾರವಾಹಿನಿ ರಜತ ಮಹೋತ್ಸವ ಸಂಭ್ರದಲ್ಲಿದ್ದು, ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತಿರ್ಥ ಶ್ರೀಪಾದಂಗಳವರ ಸಾನ್ನಿಧ್ಯದಲ್ಲಿ ಸಮಾರಂಭ ಅದ್ದೂರಿಯಾಗಿ ಜರುಗಲಿದ್ದು, ಫೆಬ್ರವರಿ 1ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಾಹಿನಿಯ ಅಧ್ಯ ಪಂ.ಗೋಪಾಲಾಚಾರ್ಯ ಅಕಮಂಚಿ ಹೇಳಿದರು.
ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸಮಾರಂಭದ ವಿವರ ನೀಡಿದ ಅವರು, ಈ ನಿಮಿತ್ತ ವಿವಿಧ ಕಾರ್ಯಕ್ರಮಗಳು ಈಗಾಗಲೇ ಪ್ರಾರಂಭವಾಗಿವೆ. ಜನವರಿ 8ರಿಂದ 12ರವರೆಗೆ ಬ್ರಹ್ಮಪುರದ ಉತ್ತರಾದಿ ಮಠ ಶ್ರೀ ರುಕ್ಮಿಣಿ ವಿಠ್ಠಲ ಮಂದಿರದಲ್ಲಿ ಹುಬ್ಬಳ್ಳಿಯ ಪಂ. ಪ್ರದ್ಯುಮ್ನಾಚಾರ್ಯ ಜೋಶಿ ಅವರಿಂದ ದಾಸರ ದೃಷ್ಟಿಯಲ್ಲಿ ಭಗವಂತನ ಮಹಿಮೆ ಕುರಿತು, ಜ.13ರಿಂದ 17ರವರೆಗೆ ನ್ಯೂ ರಾವೇಂದ್ರ ಕಾಲನಿಯ ವೆಂಕಟೇಶ್ವರ ದೇವಸ್ಥಾನದಲ್ಲಿ ಮುಂಬಯಿ ಪಂ.ರೂತ್ತಮಾಚಾರ್ಯ ಮೊಕಾಶಿ ಅವರಿಂದ ದಾಸರ ದೃಷ್ಟಿಯಲ್ಲಿ ಭಗವಂತನ ಕಾರುಣ್ಯ ಕುರಿತು ಪ್ರವಚನ ಜರುಗಿದೆ ಎಂದು ವಿವರಿಸಿದರು.
ಜನವರಿ 22ರಿಂದ 26ರವರೆಗೆ ಆದೋನಿಯ ಸುಸ್ವರಂ ನಾಗರಾಜಾಚಾರ್ಯ ಇವರಿಂದ ಜೇವರ್ಗಿ ಕಾಲನಿಯ ರಾಯರ ಮಠದಲ್ಲಿ ಹರಿದಾಸರ ಸಾರಸ್ವತ ಲೋಕ ಕುರಿತು ಪ್ರಚನ ಜರುಗಲಿದೆ. 27ರಂದು ಮಳಖೇಡ ಉತ್ತರಾದಿ ಮಠ ಜಯತೀರ್ಥರ ಮೂಲ ಸನ್ನಿಧಾನದಲ್ಲಿ ಉತ್ತರಾದಿ ಮಠದ ಶ್ರೀ ಸತ್ಯಾತ್ಮತಿರ್ಥ ಶ್ರೀಪಾದಂಗಳವರ ನೇತೃತ್ವದಲ್ಲಿ ಮಧ್ವನವಮಿ ಉತ್ಸವ ಆಚರಿಸಲಾಗುವುದು ಎಂದರು.
ಜನವರಿ 18ರಿಂದ 21ರವರೆಗೆ ನಿತ್ಯ ಸಂಜೆ 6ಕ್ಕೆ ವಿವಿಧ ಸಾಂಸತಿಕ ಹಾಗೂ ಸಂಗೀತ ಕಾರ್ಯಕ್ರಮ ಜರುಗಿವೆ. 28ರಿಂದ ಫೆಬ್ರವರಿ 1ರವರೆಗೆ ಶ್ರೀ ಸತ್ಯಾತ್ಮತಿರ್ಥ ಶ್ರೀಪಾದರು ನೂತನ ವಿದ್ಯಾಲಯ ಸಂಸ್ಥೆಯ ಶ್ರೀ ಸತ್ಯಪ್ರಮೋದತೀರ್ಥ ಸಭಾಮಂಟಪದಲ್ಲಿ ಅಮೃತೋಪದೇಶ ನೀಡಲಿದ್ದಾರೆ. ಫೆಬ್ರವರಿ 1ರಂದು ವಿವಿಧ ೇತ್ರಗಳ ಸಾಧಕರಿಗೆ ಶ್ರೀಗಳಿಂದ ಜಗನ್ನಾಥ ವಿಠ್ಠಲ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ವಿವಿಧ ೇತ್ರಗಳಲ್ಲಿ ಸಾಧನೆ ಮಾಡಿದ ಅನೇಕ ಸಾಧಕರನ್ನು ಗುರುತಿಸಿ ಜಗನ್ನಾಥ ವಿಠ್ಠಲ ಪ್ರಶಸ್ತಿ ಪ್ರದಾನ ಮಾಡಿ ಪ್ರೋತ್ಸಾಹಿಸಲಾಗಿದೆ ಎಂದರು.

ಪ್ರಶಸ್ತಿ ಪುರಸತರು

ರಾವೇಂದ್ರ ನಾಡಗೌಡ, ವಾಸುದೇವರಾವ ನಾಲತವಾಡ,ರಾವೇಂದ್ರ ಶಿರವಾಳ, ಪ್ರಭಾಕರ ಜೋಶಿ ಅವರಿಗೆ ಪ್ರಸಕ್ತ ಸಾಲಿನ ಜಗನ್ನಾಥ ವಿಠ್ಠಲ ಪ್ರಶಸ್ತಿ ಪ್ರದಾನ ಮಡಲಾಗುವುದು. ಗಿರೀಶಾಚಾರ್ಯ ಆಡಕಿ, ಶ್ರೀನಿವಾಸ ಶರ್ಮಾ ಕಾನರೆಡ್ಡಿ ಅವರಿಗೆ ವಿಪ್ರಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.

ಮಹಿಳಾ ಸಾಧಕರಿಗೆ ಸತ್ಕಾರ

ವಿವಿಧ ಭಜನಾ ಮಂಡಳಿ ಸದಸ್ಯೆಯರಾದ ಪ್ರಭಾವತಿ ಕುಲಕರ್ಣಿ, ಜಯಶ್ರೀ ಖಜೂರಿ, ನಂದಾ ತಾವರಗೇರಿ, ಅನಿತಾ ಕುಲಕರ್ಣಿ, ವಾಣಿ ಜೋಶಿ, ಲತಾ ಪಾಟೀಲ್​, ಅರುಣಾ ಭೆಂಕಿ, ವನಮಾಲಾ ಕುಲಕರ್ಣಿ, ಸುಧಾ ಓಂಕಾರ್​, ಪ್ರತಿಭಾ ಅಫಜಲಪುರಕರ್​, ಮೀನಾಕ್ಷಿ ಕುಲಕರ್ಣಿ, ಚಂದ್ರಕಲಾ ಜಹಾಗೀರದಾರ್​, ರೇಖಾ ಕೊರಳ್ಳಿ, ಪದ್ಮಜಾ ಕುಲಕರ್ಣಿ, ಜಯಶ್ರೀ ಕುಲಕರ್ಣಿ, ಜ್ಯೋತಿ ಅಫಜಲಪುರಕರ್​, ವಿದ್ಯಾ ಕುಲಕರ್ಣಿ, ಶರದಾ ನವಲಿಯವರನ್ನು ಈ ಸಂದರ್ಭದಲ್ಲಿ ಸತ್ಕರಿಸಲಾಗುತ್ತಿದೆ ಎಂದು ಹೇಳಿದರು.
ವಾಹಿನಿಯ ಉಪಾಧ್ಯ ವ್ಯಾಸರಾಜ ಸಂತೆಕೆಲ್ಲೂರ, ಸಂಚಾಲಕ ಬೆಂಕಿ ಭೀಮಣ್ಣ ಇದ್ದರು.
"

ಪ್ರತಿ ತಿಂಗಳಿಗೊಮ್ಮೆ ಏಕಾದಶಿಯಂದು ವಿವಿಧ ಮಹಿಳಾ ಭಜನಾ ಮಂಡಳಿಗಳ ಸದಸ್ಯರಿಂದ ನಗರ ಸಂಕೀರ್ತನೆ ಆಯೋಜನೆ ಮಾಡುವ ಮೂಲಕ ದಾಸರ ಸಂದೇಶ ಮನೆ ಮನಗಳಿಗೆ ತಲುಪಿಸುವ ಕಾರ್ಯ ವಾಹಿನಿ ನಿರಂತರ ಮಾಡುತ್ತಿದೆ.

ಪಂ.ಗೋಪಾಲಾಚಾರ್ಯ ಅಕಮಂಚಿ,

ಅಧ್ಯಕ್ಷ, ಹರಿದಾಸ ಸಾಹಿತ್ಯ ಪ್ರಚಾರ ವಾಹಿನಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net