

ಮಾಗಡಿ
ತಾಲೂಕಿನಾದ್ಯಂತ ತಡವಾಗಿಯಾದರೂ ಮಳೆ ಕೃಪೆ ತೋರಿರುವುದರಿಂದ ಕೃಷಿಕರು ಕೊನೆಗೂ ನಿಟ್ಟುಸಿರು ಬಿಟ್ಟು, ರಾಗಿ ಬಿತ್ತನೆಯಲ್ಲಿ ಸಕ್ರಿಯವಾಗಿದ್ದಾರೆ. ಆದರೆ, ಬೆಳೆ ಮಾಡಬೇಕಿದ್ದ ನಿಗದಿತ ಸಮಯಕ್ಕಿಂತ ಒಂದು ತಿಂಗಳು ತಡವಾಗಿ ಮಳೆ ಬಂದಿರುವುದು ಕೃಷಿ ೇತ್ರದ ಮೇಲೆ ಪರಿಣಾಮ ಬೀರಲಿದೆ.
ಇಲಾಖೆ ಸಲಹೆ
ಒಂದು ತಿಂಗಳು ಸಮಯ ಮೀರಿ ಹೋಗಿರುವುದರಿಂದ ಸಾಂಪ್ರದಾಯಿಕ ರಾಗಿ ಬೆಳೆಯುವುದು ನಷ್ಟಕ್ಕೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ ಪ್ರಸ್ತುತ ಪರಿಸ್ಥಿತಿಯಲ್ಲಿ ಕಡಿಮೆ ಅವಧಿಯಲ್ಲಿ ಕೊಯ್ಲಿಗೆ ಬರುವ ಅಲ್ಪಾವಧಿ ರಾಗಿ ತಳಿ ಜಿಪಿ 28 ಹಾಗೂ ಎಂಡಿಎಲ್ 365 ರಾಗಿ ಬಿತ್ತನೆ ತಳಿ ಮಾತ್ರ ಬಿತ್ತನೆ ಮಾಡುವಂತೆ ಕೃಷಿ ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಈ ಅಲ್ಪಾವಧಿ ತಳಿಗಳ ಬಿತ್ತನೆ ಬೀಜಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದ್ದು, ಕೃಷಿಕರು ಬಳಸಿಕೊಂಡು ಬಿತ್ತನೆ ಮಾಡಲು ಮನವಿ ಮಾಡಿದ್ದಾರೆ.
ತಾಲೂಕಿನಲ್ಲಿ ತೀವ್ರ ಮಳೆ ಅಭಾವದಿಂದ ಅನ್ನದಾತರು ಕಂಗಾಲಾಗಿದ್ದಾರೆ. ಸರ್ಕಾರ ಮಧ್ಯಪ್ರವೇಶಿಸಿ, ಅನುಕೂಲವಾಗುವ ವಿಶೇಷ ಆರ್ಥಿಕ ಹಾಗೂ ಕೃಷಿ ಯೋಜನೆ ಅನುಷ್ಠಾನಗೊಳಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ತಾಲೂಕಿನ ರೈತರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಲಿದೆ.
— ಆರ್.ದಿನೇಶ್, ಯುವ ಅಧ್ಯಕ , ಕೆಂಪೇಗೌಡ ರೈತಸಂ
ಸಮಯಕ್ಕೆ ಸರಿಯಾಗಿ ಮಳೆಯಾಗದ ಕಾರಣ ರೈತರು ನಷ್ಟ ತಪ್ಪಿಸಿಕೊಳ್ಳಲು ಅಲ್ಪಾವಧಿ ತಳಿಗಳ ಬಿತ್ತನೆಗೆ ಆದ್ಯತೆ ನೀಡಬೇಕು. ಇಲಾಖೆಯಲ್ಲಿ ರೈತರಿಗೆ ಅಗತ್ಯವಿರುವ ಅಲ್ಪಾವಧಿ ತಳಿ ದಾಸ್ತಾನು ಮಾಡಲಾಗಿದೆ. ಅದರೊಂದಿಗೆ ಬರಗಾಲದ ಭೀತಿಯಿಂದಾಗುವ ಆರ್ಥಿಕ ನಷ್ಟದಿಂದ ರಕ್ಷಣೆ ಪಡೆಯಲು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆ ಕಡ್ಡಾಯ ಮಾಡಿಸಿಕೊಳ್ಳಬೇಕು.
— ವಿಜಯ ಸವಣೂರು, ಸಹಾಯಕ ಕೃಷಿ ನಿರ್ದೇಶಕಿ ಮಾಗಡಿ