ಕಲಬುರಗಿ ಅಪ್ಪ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಶಾಲಾ ಸಂಸತ್ತಿನ ಪದಗ್ರಹಣ ಸಮಾರಂಭಕ್ಕೆ ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ ಚಾಲನೆ ನೀಡಿದರು. ಶಂಕರಗೌಡ ಪಾಟೀಲ್, ವಿಜು ಕಲ್ಲರ್ ಜೋಸ್, ಆಶಾರಾಣಿ ಪಾಟೀಲ್, ಜೋಸೆಫ್ ವರ್ಗೀಸ್ ಇತರರಿದ್ದರು.
ಕಲಬುರಗಿ: ಉತ್ತಮ ಅಂಕ ಗಳಿಸುವುದರ ಜತೆಗೆ ಉತ್ತಮ ನಾಗರಿಕರಾಗುವುದು ಅಷ್ಟೇ ಮುಖ್ಯ ಎಂದು ಕಲಬುರಗಿ ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ ಹೇಳಿದರು.
ವಿದ್ಯಾರ್ಥಿಗಳಲ್ಲಿ ನಾಯಕತ್ವ, ಜವಾಬ್ದಾರಿ ಹಾಗೂ ಸೇವಾ ಮನೋಭಾವ ಬೆಳೆಸುವ ಉದ್ದೇಶದಿಂದ ನಗರದ ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ 2026&27ನೇ ಶೈಣಿಕ ಸಾಲಿನ ಶಾಲಾ ಸಂಸತ್ತಿನ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ತಮ್ಮ ಜೀವನಾನುಭವ ಹಂಚಿಕೊಂಡ ಅವರು, ಒಳ್ಳೆಯ ನಾಯಕನಾಗಲು ತಂಡದ ಸದಸ್ಯರ ಮೇಲೆ ದೃಢ ನಂಬಿಕೆ, ನಿರಂತರ ಅಭ್ಯಾಸ ಹಾಗೂ ಪ್ರಾಮಾಣಿಕ ಪ್ರಯತ್ನ ಅಗತ್ಯ. ಬ್ಯಾಡ್ಜ್ ಎನ್ನುವುದು ಕೇವಲ ಅಲಂಕಾರವಲ್ಲ, ಶಾಲೆಯು ನಿಮ್ಮ ಮೇಲೆ ಇಟ್ಟಿರುವ ನಂಬಿಕೆ ಮತ್ತು ಜವಾಬ್ದಾರಿಯ ಸಂಕೇತ ಎಂದರು.
ಪ್ರಾಸ್ತಾವಿಕ ಮಾತನಾಡಿದ ಪ್ರಾಂಶುಪಾಲ ಶಂಕರಗೌಡ ಹೊಸಮನಿ, ವಿದ್ಯಾರ್ಥಿಗಳಿಗೆ ಜವಾಬ್ದಾರಿಯ ಮಹತ್ವ ತಿಳಿಸಿ, ನಿಮಗೆ ನೀಡಿರುವ ಜವಾಬ್ದಾರಿ ನಿರ್ವಹಿಸುವುದು ಮಾತ್ರವಲ್ಲ, ಸವಾಲಿನ ಸಂದರ್ಭಗಳಲ್ಲಿಯೂ ಅದನ್ನು ಸಮರ್ಥವಾಗಿ ನಿಭಾಯಿಸುವುದೇ ನಿಜವಾದ ನಾಯಕತ್ವ ಎಂದು ಹೇಳಿದರು.
ಉಪಪ್ರಾಂಶುಪಾಲ ವಿಜು ಕಲ್ಲರ್ ಜೋಸ್ ಸ್ವಾಗತಿಸಿದರು. ವಿಭಾಗ ಸಂಯೋಜಕಿ ಆಶಾರಾಣಿ ಪಾಟೀಲ್, ಜೋಸೆಫ್ ವರ್ಗೀಸ್ ಇತರರಿದ್ದರು. ನಾಗವೇಣಿ ನರೋಣಿ ಅತಿಥಿ ಪರಿಚಯ ಮಾಡಿದರು. ಆಯುಷ್ ಸೂಗುರ್, ಭೂಮಿಕಾ ರಡ್ಡಿ ನಿರೂಪಿಸಿದರು. ಪದಗ್ರಹಣ ಕಾರ್ಯಕ್ರಮದ ನಿರೂಪಣೆಯನ್ನು ವರ್ಷಾ ಹಣಮಶೆಟ್ಟಿ ಹಾಗೂ ಆರ್ಶೀಮಾ ಪ್ರಸಾದ್ ನಿರ್ವಹಿಸಿದರು.
ಶಾಲಾ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪದಗ್ರಹಣ ಮಾಡಿಸಿದ ಪ್ರಾಂಶುಪಾಲರು ಪ್ರಮಾಣವಚನ ಬೋಧಿಸಿದರು. ಸಮರ್ಥ ಎಂ.ದೇಸಾಯಿ ಶಾಲಾ ನಾಯಕನಾಗಿ ಹಾಗೂ ಆಶ್ರಿತಾ ವಾಲಿ ಶಾಲಾ ನಾಯಕಿಯಾಗಿ ಆಯ್ಕೆಯಾದರು. ವಿಷಯವಾರು ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಒಟ್ಟು 96 ವಿದ್ಯಾರ್ಥಿಗಳು ಶಾಲಾ ಸಂಸತ್ತಿಗೆ ಆಯ್ಕೆಯಾಗಿದ್ದಾರೆ.
ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಅಧ್ಯಕ್ಷೆ ಮಾತೋಶ್ರೀ ಡಾ.ದಾಾಯಣಿ ಅವ್ವಾಜಿ ಅವರು, ವಿದ್ಯಾರ್ಥಿಗಳ ಪ್ರತಿಭೆ ಮತ್ತು ಸಾಧನೆಗೆ ಹರ್ಷ ವ್ಯಕ್ತಪಡಿಸಿದರು.