ಇಂಟರ್​ ನ್ಯಾಷನಲ್​ ಮಹಿಳಾ ಐಟಿಎಫ್​ ಪಂದ್ಯಾವಳಿ

ಕಲಬುರಗಿಯಲ್ಲಿ ನಡೆಯಲಿರುವ ಇಂಟರ್​ ನ್ಯಾಷನಲ್​ ಮಹಿಳಾ ಐಟಿಎಫ್​ ಪಂದ್ಯಾವಳಿಗೆ ಸಂಬಂಧಿಸಿದಂತೆ ಡಿಸಿ ಕಚೇರಿಯಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್​ ಮಾತನಾಡಿದರು. ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟೆ ಇದ್ದರು.
ಕಲಬುರಗಿಯಲ್ಲಿ ನಡೆಯಲಿರುವ ಇಂಟರ್​ ನ್ಯಾಷನಲ್​ ಮಹಿಳಾ ಐಟಿಎಫ್​ ಪಂದ್ಯಾವಳಿಗೆ ಸಂಬಂಧಿಸಿದಂತೆ ಡಿಸಿ ಕಚೇರಿಯಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್​ ಮಾತನಾಡಿದರು. ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟೆ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್​ ಹೇಳಿಕೆ
  • ಕಲಬುರಗಿಯಲ್ಲಿ ಮಾರ್ಚ್​ 1ರಿಂದ 8ರವರೆಗೆ
ಕಲಬುರಗಿ: ನಗರದ ಚಂದ್ರಶೇಖರ್​ ಪಾಟೀಲ್​ ಜಿಲ್ಲಾ ಕ್ರೀಡಾಂಗಣದಲ್ಲಿ ಇಂಟರ್​ ನ್ಯಾಷನಲ್​ ಮಹಿಳಾ ಐಟಿಎಫ್​&2026 ಪಂದ್ಯಾವಳಿ ಮಾರ್ಚ್​ 1ರಿಂದ 8ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್​ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಪೂರ್ವಬಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಇಂಟರ್​ ನ್ಯಾಷನಲ್​ ಮಹಿಳಾ ಐ.ಟಿ.ಎಫ್​ ಪಂದ್ಯಾವಳಿ ಹಮ್ಮಿಕೊಳ್ಳಲಾಗುತ್ತಿದ್ದು, ಆಯೋಜನೆಗೆ ಸಂಬಂಧಿಸಿದಂತೆ ಹಾಗೂ ಯಶಸ್ವಿಯಾಗಿ ಆಯೋಜಿಸಲು ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದರು.
ಪ್ರತಿದಿನ ಒಬ್ಬೊಬ್ಬ ಅಧಿಕಾರಿಯನ್ನು ನಿಯೋಜಿಸಿ ಸಂಪೂರ್ಣ ದಿನದ ಜವಬ್ದಾರಿ ವಹಿಸಿಕೊಳ್ಳಬೇಕು. ಕಲಬುರಗಿಯಲ್ಲಿ ಮೊದಲ ಬಾರಿಗೆ ಮಹಿಳಾ ಕ್ರೀಡಾಕೂಟ ಹಮ್ಮಿಕೊಳ್ಳಲಾಗುತ್ತಿದ್ದು, ಸ್ಥಳಿಯ ಮಹಿಳಾ ಆಟಗಾರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ.
ಕಳೆದ ವರ್ಷದ ಲೆಕ್ಕಚಾರ ಪರಿಶೀಲಿಸಿ, ಈ ಬಾರಿ ಕಲಬುರಗಿ ನೆಕ್ಸ್​$್ಟ ಅಡಿಯಲ್ಲಿ ಆಯೋಜಿಸಲಾಗುವುದು, ಅಗತ್ಯ ಅನುದಾನದ ಜತೆಗೆ ಸ್ಥಳಿಯ ದಾನಿಗಳ ಮೂಲಕ ಕೊಡುಗೆ ಪಡೆಯಬಹುದಾಗಿದೆ ಎಂದರು.
ಬ್ರಾಂಡಿಂಗ್​ ಬಗ್ಗೆ ಯೋಜಿಸಿ, ಪ್ರಯೋಜಕರನ್ನು ಹುಡುಕಬೇಕು, ಎಷ್ಟು ಆಟಗಾರರು ನಮ್ಮ ದೇಶದವರು ಹಾಗೂ ಹೊರ ದೇಶದವರು ಎಂದು ಗುರುತಿಸಿ ಊಟದ ಮೆನು ಸಿದ್ದಪಡಿಸಬೇಕು. ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ನಿಗಾ ಇರಲಿ, ಆಟಗಾರರು ಅಥವಾ ಯಾರೇ ಸಾರ್ವಜನಿಕರಿಗೆ ತೊಂದರೆಯಾದಲ್ಲಿ ಸ್ಥಳದಲ್ಲಿ ವೈದ್ಯಕಿಯ ತಂಡಗಳೊಂದಿಗೆ ಆಂಬುಲೆನ್ಸ್​ ಇರಬೇಕು ಎಂದು ಸೂಚಿಸಿದರು.
ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್​ ಶಿಂಧೆ, ಸಹಾಯಕ ಆಯುಕ್ತ ಸಾಹಿತ್ಯ ಆಲದಕಟ್ಟೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಇತರರಿದ್ದರು.
"

ಮಹಿಳಾ ಕ್ರೀಡಾಕೂಟವಾಗಿರುವ ಕಾರಣ ಹೆಚ್ಚಿನ ಭದ್ರತೆ ಒದಗಿಸಬೇಕು. ಯಾವುದೇ ಅವಡಗಳಾಗದಂತೆ ನೋಡಿಕೊಳ್ಳಬೇಕು. ಸ್ಥಳದಲ್ಲಿ ಕುಡಿಯುವ ನೀರು, ವಸತಿ ವ್ಯವಸ್ಥೆ ಚೆನ್ನಾಗಿರಬೇಕು. ಯಾರಿಗೂ ಯಾವುದೇ ತೊಂದರೆಯಾಗದಂತೆ ನಿಗಾವಹಿಸಬೇಕು.

ಬಿ.ಫೌಜಿಯಾ ತರನ್ನುಮ್​,

ಜಿಲ್ಲಾಧಿಕಾರಿ, ಕಲಬುರಗಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net