ಪ್ರಸ್ತುತ ಸರಕಾರಿ ವಸ್ತುಸಂಗ್ರಹಾಲಯವು ನವೀಕರಣದ ಹಂತದಲ್ಲಿರುವುದರಿಂದ, ಈ ಶಾಸನವು ಸಾರ್ವಜನಿಕರ/ಇತಿಹಾಸ ಪ್ರಿಯರ ವೀಕ್ಷಣೆಗೆ ಲಭ್ಯವಿರುವುದಿಲ್ಲ. ಒಂದು ವಾರ ಪೂರ್ತಿ ನಡೆಯುವ ಈ ಪ್ರದರ್ಶನದ ಮೂಲಕ ಹಲ್ಮಿಡಿ ಶಾಸನವನ್ನು ಹತ್ತಿರದಿಂದ ವೀಕ್ಷಿಸುವ ಅವಕಾಶವಿರುತ್ತದೆ. ಹೀಗಾಗಿ, ವಿದ್ಯಾರ್ಥಿಗಳು, ಸಂಶೋಧಕರು, ಇತಿಹಾಸ ಆಸಕ್ತರು, ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ರಾಜ್ಯ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ (ವಸ್ತು ಸಂಗ್ರಹಾಲಯಗಳು) ನಿರ್ದೇಶಕಿ ಡಾ. ಸ್ಮಿತಾ ರೆಡ್ಡಿ ಕೋರಿದ್ದಾರೆ.