ಬಾಗಲಕೋಟೆ ಜಿಲ್ಲಾಽಕಾರಿಗಳ ಕಚೇರಿಯಲ್ಲಿ ಶುಕ್ರವಾರ ಜಿಲ್ಲೆಯಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಗತಿ ಕುರಿತು ವಿವಿಧ ರಾಜಕೀಯ ಪ್ರತಿನಿಽಗಳೊಂದಿಗೆ ಜಿಲ್ಲಾಽಕಾರಿ ಸಂಗಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಬಾಗಲಕೋಟೆ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಅಂಗವಾಗಿ ಜಿಲ್ಲಾದ್ಯಂತ ನಡೆದ ಅಭಿಯಾನವನ್ನು ಚುರುಕುಗೊಳಿಸಿ ಪ್ರಗತಿ ಸಾಽಸುವಂತೆ ಜಿಲ್ಲಾಽಕಾರಿ ಆಗಿರುವ ಜಿಲ್ಲಾ ಚುನಾವಣಾಽಕಾರಿ ಸಂಗಪ್ಪ ಅವರು ಅಽಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಽಕಾರಿಗಳ ಕಚೇರಿಯಲ್ಲಿ ಶುಕ್ರವಾರ ಜಿಲ್ಲೆಯಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಗತಿ ಕುರಿತು ವಿವಿಧ ರಾಜಕೀಯ ಪ್ರತಿನಿಽಗಳೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೂತ ಮಟ್ಟದ ಅಽಕಾರಿಗಳು, ಮೇಲ್ವಿಚಾರಕರನ್ನೊಳಗೊಂಡ ತಂಡ ಈಗಾಗಲೇ ಮನೆ ಮನೆಗೆ ತೆರಳಿ ಶೇ.೯೫ ರಷ್ಟು ಎನ್ಯೂಮರೇಷನ್ ಫರ‍್ಮಗಳನ್ನು ವಿತರಣೆ ಮಾಡಿದ್ದಾರೆ. ಈ ಪೈಕಿ ಶೇ.೧೭.೮೫ ರಷ್ಟು ಡಿಜಿಟೈಜೇಷನ್ ಮಾಡಲಾಗಿದೆ. ಡಿಜಿಟೈಜೇಷನ್ ಪ್ರಗತಿಗೆ ಚುರುಕು ನೀಡುವಂತೆ ಅಽಕಾರಿಗಳಿಗೆ ನಿರ್ದೇಶಿಸಿದರು.
ಈ ವಿಶೇಷ ಅಭಿಯಾನದಲ್ಲಿ ಬೂತ ಮಟ್ಟದ ಅಽಕಾರಿಗಳು, ಗ್ರಾಮ ಲೆಕ್ಕಾಽಕಾರಿಗಳು, ಕಂದಾಯ ನಿರೀಕ್ಷಕರು, ಪಂಚಾಯಿತಿ ಅಭಿವೃದ್ಧಿ ಅಽಕಾರಿಗಳು, ತಾಲೂಕಾ ಪಂಚಾಯಿತಿ ಕಾರ್ಯನಿರ್ವಾಹಕ ಅಽಕಾರಿಗಳು, ನೋಡಲ್ ಅಽಕಾರಿಗಳು ಶನಿವಾರ ಮತ್ತು ಭಾನುವಾರ ರಜೆ ಎಂದು ಭಾವಿಸದೇ ಹೆಚ್ಚಿನ ಪ್ರಗತಿ ಸಾಽಸಲು ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ನಿರ್ಲಕ್ಷ ತೋರುವ ಅಽಕಾರಿಗಳ ವಿರುದ್ದ ಸೂಕ್ತ ಶಿಸ್ತುಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಎನ್ಯೂಮರೇಷನ್ ಫರ‍್ಮಗಳು ಆಯಾ ಮತಕ್ಷೇತ್ರದಲ್ಲಿ ಶೇ.೯೦ ಕ್ಕಿಂತ ಹೆಚ್ಚು ವಿತರಣೆಯಾಗಿವೆ. ಆದರೆ, ಡಿಜಿಟೈಜೇಷನ್‌ದಲ್ಲಿ ಬಹಳ ಕಡಿಮೆಯಾಗಿದ್ದು, ಡಿಜಿಟೈಜೇಷನ್‌ಗೆ ಹೆಚ್ಚಿನ ಒತ್ತುಕೊಟ್ಟು ಈ ಕಾರ್ಯ ಪೂರ್ಣಗೊಳಿಸಬೇಕು. ಕಡಿಮೆ ಪ್ರಗತಿ ಸಾಽಸಿದ ತಾಲೂಕುಗಳಿಗೆ ಹೆಚ್ಚಿನ ಮುತುವರ್ಜಿ ವಹಿಸಿ ಪ್ರಗತಿಗೆ ಕ್ರಮಕೈಗೊಳ್ಳುವಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಽಗಳು ಜಿಲ್ಲಾಽಕಾರಿಗಳಲ್ಲಿ ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಽಕಾರಿಗಳು ಚುನಾವಣಾ ಆಯೋಗದ ಮಾರ್ಗಸೂಚಿಗಳ ಅನುಸಾರ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ತಹಸೀಲ್ದಾರ ವಾಸುದೇವ ಸ್ವಾಮಿ, ಚುನಾವಣಾ ವಿಭಾಗದ ಶಿರಸ್ತೇದಾರ ಮಹೇಶ ಪಾಂಡವ ಸೇರಿದಂತೆ ವಿವಿಧ ರಾಜಕೀಯ ಪ್ರತಿನಿಽಗಳಾದ ನಾಗರಾಜ ಹದ್ಲಿ, ಮಹಾಂತೇಶ ಮಾವಿನಮರದ, ಪ್ರಭು ಹಳ್ಳೂರ, ಉಮೇಶ, ಹಂಚನಾಳ, ಎಂ.ಎA.ಮುತ್ತಪ್ಪನವರ, ಶ್ರೀಧರ ನಾಗರಬೆಟ್ಟ, ಮನಮಂತ ಮಾದರ ಇತರರು ಉಪಸ್ಥಿತರಿದ್ದರು.