ಹುಮನಾಬಾದ್ ಟೀಚರ್ಸ್ ಕಾಲನಿಯಲ್ಲಿರುವ ಕಲಾವಿದ ಸಿದ್ದಾರ್ಥ ಪರಸನೂರ ಮನೆಗೆ ಗುರುವಾರ ಮಾಜಿ ಸಚಿವ ರಾಜಶೇಖರ ಪಾಟೀಲ ಭೇಟಿ ನೀಡಿ ಸಾಂತ್ವಾನ ಹೇಳಿ ಧೈರ್ಯ ತುಂಬಿದರು. ವಿಧಾನ ಪರಿಷತ್ ಸದಸ್ಯರಾದ ಡಾ. ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್ ಇತರರಿದ್ದರು.
ಪರಸಾನೋರ ಕುಟುಂಬಕ್ಕೆ ಮಾಜಿ ಸಚಿವ ರಾಜಶೇಖರ ಪಾಟೀಲ್ ಸಾಂತ್ವನ
ಹುಮನಾಬಾದ್: ಸಂಶಯಾಸ್ಪದ ರೀತಿಯಲ್ಲಿರುವ ಮೃತಪಟ್ಟಿರುವ ಪಟ್ಟಣದ ಟೀಚರ್ಸ್ ಕಾಲನಿಯ ನಿವಾಸಿ ಹಾಗೂ ಕಾಮಿಡಿ ಕಿಲಾಡಿ ಶೋ ಕಲಾವಿದ ಸಿದ್ಧಾರ್ಥ ನರಸಪ್ಪ ಪರಸಾನೋರ ನಿವಾಸಕ್ಕೆ ಗುರುವಾರ ಮಾಜಿ ಸಚಿವ ರಾಜಶೇಖರ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ನೋವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸಿ ಧೈರ್ಯ ತುಂಬಿದರು.
ಸಿದ್ದಾರ್ಥ ಪರಸನೂತರ ಪ್ರತಿಭಾವಂತ ಹಾಸ್ಯ ಕಲಾವಿದರಾಗಿದ್ದು, ಅನೇಕ ಧಾರಾವಾಹಿ, ಚಲನಚಿತ್ರ ಹಾಗೂ ರಿಯಾಲಿಟಿ ಶೋಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರ ಅಕಾಲಿಕ ಹಾಗೂ ಅನುಮಾನಾಸ್ಪದ ಸಾವು ಕಲಾ ೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಪ್ರಕರಣದ ಕುರಿತು ಸಮಗ್ರ ಮತ್ತು ನಿಷ್ಪಪಾತ ತನಿಖೆ ನಡೆಸಿ ಸತ್ಯಾಂಶ ಹೊರತರಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.