ಮಕ್ಕಳಿಗೆ ದೇಶಭಕ್ತಿ ಜಾಗೃತಿ ಅಗತ್ಯ

 ಕನಕಪುರ ಮರಳೆಗವಿ ಮಠದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ಎಚ್.ಎಂ.ವೆಂಕಟಪ್ಪ ಅವರನ್ನು ಸನ್ನಾನಿಸಲಾಯಿತು. ಡಾ. ಶ್ರೀ ಮುಮ್ಮಡಿ ಶಿವರುದ್ರ ಸ್ವಾಮೀಜಿ, ಪ್ರಾಂಶುಪಾಲರಾದ ಪ್ರಭುಸ್ವಾಮಿ, ಅನಿಲ್‌ಕುಮಾರ್, ಮುಖ್ಯ ಶಿಕ್ಷಕ ಗೊವಿಂದನಾಯ್ಕ, ಸಂಸ್ಕೃತ ಶಾಲಾ ಮುಖ್ಯ ಶಿಕ್ಷಕ ಹುಚ್ಚೀರಯ್ಯ, ಮುಖ್ಯಶಿಕ್ಷರಾದ ಲೋಕಯ್ಯ, ಚಂದ್ರಕಲಾಇದ್ದರು.

Published on

ಕನಕಪುರ :

ಮನೆಯೇ ಮೊದಲ ಪಾಠಶಾಲೆ ಎಂಬಂತೆ ಮಕ್ಕಳಿಗೆ ಮನೆ ಮತ್ತು ಶಾಲೆಯಲ್ಲಿಯೇ ದೇಶಭಕ್ತಿಯ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ ಎಂದು ಡಾ. ಶ್ರೀ ಮುಮ್ಮಡಿ ಶಿವರುದ್ರ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಮರಳೆಗವಿ ಮಠದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 80 ವರ್ಷಗಳು ಸಂದಿವೆ, ಸ್ವಾತಂತ್ರ್ಯ ಸೇನಾನಿಗಳು ತಮ್ಮ ಜೀವನವನ್ನೇ ಮುಡುಪಾಗಿಟ್ಟು ನಮ್ಮ ದೇಶಕ್ಕೆ ಸ್ವಾಂತಂತ್ರ್ಯ ಒದಗಿಸಿಕೊಟ್ಟಿದ್ದಾರೆ ಎಂದರು.
ಕಣ್ವ ಡಯೋಗ್ನೋಸ್ಟಿಕ್ ಸೆಂಟರ್ (ರೋಗ ನಿರ್ಣಯ ಕೇಂದ್ರ) ಮುಖ್ಯಸ್ಥ ಡಾ.ಎಚ್.ಎಂ.ವೆಂಕಟಪ್ಪ ಮಾತನಾಡಿ,
ಯುವ ಜನತೆಯಲ್ಲಿ ದೇಶಪ್ರೇಮದ ಭಾವನೆಗಳು ಗಟ್ಟಿಯಾಗಬೇಕಿದೆ. ದೇಶದ ಬಗ್ಗೆ ಜವಾಬ್ದಾರಿ ಮತ್ತು ರಾಷ್ಟ್ರಾಭಿಮಾನವನ್ನು ಯಾರೂ ಮರೆಯಬಾರದು ಎಂದರು.

ಕ ಕೇಂದ್ರಗಳಷ್ಟೇ ಅಲ್ಲದೇ, ಶಿಕ್ಷಣ, ಆರೋಗ್ಯ, ಅನ್ನದಾನ ಮತ್ತು ಸಂಸ್ಕೃತಿ ಉಳಿಸುವ ಮೂಲಕ ಸಮಾಜ ಮುಖಿ ಸೇವೆಯಲ್ಲಿ ಅನನ್ಯ ಪಾತ್ರ ವಹಿಸಿದೆ. ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಗಳು ಮಾಡಲಾಗದ ಸಮಾಜ ಸುಧಾರಣೆಯನ್ನು ಮಠಗಳು ನಿರಂತರವಾಗಿ ಮಾಡುತ್ತಾ ಬಂದಿವೆ. ಈ ಹಾದಿಯಲ್ಲಿಯೇ ಮರಳೇಗವಿ ಮಠವು ತನ್ನ ತ್ರಿವಿಧ ದಾಸೋಹಗಳನ್ನು ನಡೆಸಿಕೊಂಡು ಸಮಾಜದ ಕೊರತೆ ನೀಗಿಸುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net