ಎಸ್​ಐಟಿನಲ್ಲಿ ಇಂಡಕ್ಷನ್​ ಕಾರ್ಯಕ್ರಮ

ಕಲಬುರಗಿ ಎಸ್​ಐಟಿನಲ್ಲಿ ಇತ್ತೀಚೆಗೆ ನಡೆದ ಇಂಡಕ್ಷನ್​ ಕಾರ್ಯಕ್ರಮದಲ್ಲಿ ಪಾಸಿಟಿವ್​ ಸೈಕಾಲಜಿಸ್ಟ್​ ಜಿ.ಸಿ.ಕವಿತಾ, ಸಿಯುಕೆ ಪ್ರಾಧ್ಯಾಪಕ ಡಾ.ರವೀಂದ್ರ ಹೆಗಡಿ, ಸಂಸ್ಥೆ ನಿರ್ದೇಶಕ ಅನಿರುದ್ಧ ಶೆಟ್ಟಿ, ಶ್ವೇತಾ ಶೆಟ್ಟಿ, ಅಮೂಲ್ಯ ಶೆಟ್ಟಿ, ಸಿದ್ಧಾರ್ಥ ಶೆಟ್ಟಿ ಇದ್ದರು.
ಕಲಬುರಗಿ ಎಸ್​ಐಟಿನಲ್ಲಿ ಇತ್ತೀಚೆಗೆ ನಡೆದ ಇಂಡಕ್ಷನ್​ ಕಾರ್ಯಕ್ರಮದಲ್ಲಿ ಪಾಸಿಟಿವ್​ ಸೈಕಾಲಜಿಸ್ಟ್​ ಜಿ.ಸಿ.ಕವಿತಾ, ಸಿಯುಕೆ ಪ್ರಾಧ್ಯಾಪಕ ಡಾ.ರವೀಂದ್ರ ಹೆಗಡಿ, ಸಂಸ್ಥೆ ನಿರ್ದೇಶಕ ಅನಿರುದ್ಧ ಶೆಟ್ಟಿ, ಶ್ವೇತಾ ಶೆಟ್ಟಿ, ಅಮೂಲ್ಯ ಶೆಟ್ಟಿ, ಸಿದ್ಧಾರ್ಥ ಶೆಟ್ಟಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳ ಪ್ರಾಯೋಗಿಕ ಕೌಶಲ ಪ್ರದರ್ಶನ
  • ಇಂಜಿನಿಯರಿಂಗ್​ ಶಿಕ್ಷಣ ಸಂಸ್ಥೆ ದೃಷ್ಟಿಕೋನ
ಕಲಬುರಗಿ: ನಗರದ ಶೆಟ್ಟಿ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿಯಲ್ಲಿ 2026-27ರ ಪ್ರಥಮ ವರ್ಷದ ವಿದ್ಯಾರ್ಥಿಗಳ ಇಂಡಕ್ಷನ್​ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಈ ಕಾರ್ಯಕ್ರಮ ಆ.17ರವರೆಗೆ ನಡೆಯಲಿದೆ.
ಶೈಕ್ಷಣಿಕ ಮಾರ್ಗದರ್ಶನ, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ, ರೋಬಾಟಿಕ್ಸ್​, ಕೃತಕ ಬುದ್ಧಿಮತ್ತೆ (ಎಐ), ಉದ್ಯಮಶೀಲತೆ ಹಾಗೂ ವೃತ್ತಿ ಸಿದ್ಧತೆ ಸೇರಿ ವಿವಿಧ ಚಟುವಟಿಕೆ ಮೂಲಕ ಇಂಜಿನಿಯರಿಂಗ್​ ಶಿಕ್ಷಣದ ಆರಂಭದಲ್ಲೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಜೀವನದ ಜತೆ ವಿವಿಧ ಕೌಶಲ, ಅವಕಾಶ ಮತ್ತು ಅನುಭವಗಳ ಪರಿಚಯ ಮಾಡಿಸುವುದು ಕಾರ್ಯಕ್ರಮದ ಉದ್ದೇಶ.
ಪಾಸಿಟಿವ್​ ಸೈಕಾಲಜಿಸ್ಟ್​ ಜಿ.ಸಿ. ಕವಿತಾ ಹಾಗೂ ಕರ್ನಾಟಕ ಕೇಂದ್ರೀಯ ವಿವಿ ಕಂಪ್ಯೂಟರ್​ ಸೈನ್ಸ್​ ವಿಭಾಗದ ಪ್ರಾಧ್ಯಾಪಕ ಡಾ.ರವೀಂದ್ರ ಹೆಗಡಿ ಸಂವಾದ ನಡೆಸಿ ಶೈಕ್ಷಣಿಕ ಸಾಧನೆ, ನಾವೀನ್ಯತೆ, ಕೌಶಲಾಭಿವೃದ್ಧಿ ಹಾಗೂ ಕಾಲೇಜಿನಲ್ಲಿ ದೊರೆಯುವ ಅವಕಾಶದ ಸದ್ಬಳಕೆ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಸಂಸ್ಥೆ ನಿರ್ದೇಶಕ ಅನಿರುದ್ಧ ಶೆಟ್ಟಿ, ಶ್ವೇತಾ ಶೆಟ್ಟಿ, ಅಮೂಲ್ಯ ಶೆಟ್ಟಿ ಹಾಗೂ ಸಿದ್ಧಾರ್ಥ ಶೆಟ್ಟಿ ಅವರು ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ ಇಂಜಿನಿಯರಿಂಗ್​ ಶಿಕ್ಷಣದ ಕುರಿತ ಸಂಸ್ಥೆಯ ಮುಂದಿನ ದೃಷ್ಟಿಕೋನ ಹಂಚಿಕೊಂಡರು.
ಪಿಯು ಹಾಗೂ ಎಸ್​ಐಟಿ ಟಾಪರ್​ಗಳನ್ನು ಸತ್ಕರಿಸಲಾಯಿತು. ಜತೆಗೆ ವಿದ್ಯಾರ್ಥಿಗಳು ಪ್ರಾಜೆಕ್ಟ್​ ಪ್ರದರ್ಶನ, ಗೇಮಿಂಗ್​ ಸ್ಟಾಲ್​ ಹಾಗೂ ಫುಡ್​ ಸ್ಟಾಲ್​ ಮೂಲಕ ತಮ್ಮ ಸೃಜನಶೀಲತೆ, ತಂಡದ ಕೆಲಸ ಮತ್ತು ಪ್ರಾಯೋಗಿಕ ಕೌಶಲ ಪ್ರದರ್ಶಿಸಿದರು. ಇಂಡನ್​ ಕಾರ್ಯಕ್ರಮವು ವಿದ್ಯಾರ್ಥಿಗಳು ಶಾಲಾ ಹಂತದಿಂದ ಉನ್ನತ ಶಿಣಕ್ಕೆ ಸುಗಮವಾಗಿ ಹೊಂದಿಕೊಳ್ಳಲು ಹಾಗೂ ಸಾಂಪ್ರದಾಯಿಕ ತರಗತಿ ಕಲಿಕೆ ಹೊರತಾಗಿ ವಿವಿಧ ಕ್ಷೇತ್ರದ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗುವಂತೆ ರೂಪಿಸಲಾಗಿದೆ.
ಗುರುವಾರ ಎನ್​ಎಸ್​ಎಸ್​ನಿಂದ ಹೆಣ್ಣುಮಕ್ಕಳ ಶಿಕ್ಷಣ ಕುರಿತ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮ ಹಾಗೂ ಹೈದರಾಬಾದ್​ನ ಟಿ-ಹಬ್​ನಿಂದ ಉದ್ಯಮಶೀಲತೆ ಕುರಿತು ಅಧಿವೇಶನ, ಶುಕ್ರವಾರ ಧಾರವಾಡ ಐಐಐಟಿ ಡಾ.ಕೊಂಗೆಂಗ್ಬಮ್​ ಆನಂದ ಅವರು ಕೃತಕ ಬುದ್ಧಿಮತ್ತೆ ಕುರಿತು ವಿಶೇಷ ಅಧಿವೇಶನ ನಡೆಸಲಿದ್ದು, ವಿಡಿಯೋ ಮೇಕಿಂಗ್​, ಫೇಸ್​ ಪೇಂಟಿಂಗ್​ ಹಾಗೂ ಪ್ರತಿಭಾ ಪ್ರದರ್ಶನ ಚಟುವಟಿಕೆ ಜರುಗಲಿವೆ.
ಆ.17ರಂದು ಎಸ್​ಐಟಿ ವಿವಿಧ ವಿಭಾಗಗಳ ಮುಖ್ಯಸ್ಥರು ತಮ್ಮ ವಿಭಾಗಗಳ ಕುರಿತು ವಿದ್ಯಾರ್ಥಿಗಳಿಗೆ ಪರಿಚಯಿಸುವರು. ನಂತರ ತರಬೇತಿ ಮತ್ತು ಉದ್ಯೋಗ ವಿಭಾಗದಿಂದ ಪ್ಲೇಸ್​ಮೆಂಟ್​ ನೋಂದಣಿ ಮತ್ತು ಮಾರ್ಗದರ್ಶನದೊಂದಿಗೆ ಇಂಡನ್​ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
ಸಂಸ್ಥೆ ನಿರ್ದೇಶಕಿ ಶ್ವೇತಾ ಶೆಟ್ಟಿ ಮಾತನಾಡಿ, ಕಲಬುರಗಿ ಹಾಗೂ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಈ ರೀತಿಯ ಅವಕಾಶಗಳನ್ನು ಅವರ ಸ್ವಂತ ಪ್ರದೇಶದಲ್ಲಿಯೇ ದೊರಕಿಸುವುದು ನಮ್ಮ ಪ್ರಮುಖ ಉದ್ದೇಶ. ಯುವ ಪ್ರತಿಭೆಗಳು ಹೊಸ ಆಲೋಚನೆ ರೂಪಿಸಲು ಮತ್ತು ನಾವೀನ್ಯತೆ ಸಾಧಿಸಲು ಅವಕಾಶ ನೀಡುವ ಮೂಲಕ ಈ ಭಾಗದಲ್ಲಿ ಬಲಿಷ್ಠ ತಂತ್ರಾನ ಮತ್ತು ಉದ್ಯಮಶೀಲತಾ ಪರಿಸರ ನಿರ್ಮಿಸಲು ಬದ್ಧರಾಗಿದ್ದೇವೆ ಎಂದು ಹೇಳಿದರು.
"

ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್​ ಶಿಣ ಅವಧಿಯಲ್ಲಿ ಲಭ್ಯವಿರುವ ಶೈಣಿಕ, ತಂತ್ರಾಜ್ಞಾ ನ, ನಾವೀನ್ಯತೆ, ಉದ್ಯಮಶೀಲತೆ, ೇಮಾಭಿವೃದ್ಧಿ, ಪಠ್ಯೇತರ ಚಟುವಟಿಕೆ ಮತ್ತು ವೃತ್ತಿ ಸಿದ್ಧತೆಯಂತಹ ಅವಕಾಶ ಕುರಿತು ಆರಂಭದಲ್ಲೆ ಅರಿವು ಮೂಡಿಸುವುದು ಇಂಡಕ್ಷನ್​ ಕಾರ್ಯಕ್ರಮದ ಉದ್ದೇಶ.

— > ಅನಿರುದ್ಧ ಶೆಟ್ಟಿ ನಿರ್ದೇಶಕ, ಎಸ್​ಐಟಿ ಕಲಬುರಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net