

ಬಸವಕಲ್ಯಾಣ: ಭಾರತ ದೇಶ ಅನೇಕ ಕ್ಷೇತ್ರಗಳಲ್ಲಿ ಪ್ರಗತಿ ಪಥದತ್ತ ಸಾಗುತ್ತಿದೆ. ವಿಶ್ವದ ಬಲಿಷ್ಠ ರಾಷ್ಟ್ರಗಳು ಸಹ ಭಾರತ ದೇಶದ ಕಡೆಗೆ ಹಿಂತಿರುಗಿ ನೋಡುತ್ತಿವೆ. ಇದು ನಮ್ಮ- ನಿಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದು ಬಿಇಟಿ ಉಪಾಧ್ಯಕ್ಷ, ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜು ಅಧ್ಯಕ್ಷ ದಿಲೀಪಕುಮಾರ ತಾಳಂಪಳ್ಳಿ ಹೇಳಿದರು. 80ನೇ ಸ್ವಾತಂತ್ರ್ಯ ದಿನಾಚಾರಣೆ ನಿಮಿತ್ತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಸವಕಲ್ಯಾಣ ಎಜುಕೇಷನಲ್ ಟ್ರಸ್ಟ್ ನ ಅಧ್ಯಕ್ಷ ಬಸವರಾಜ ಪಾಟೀಲ ಅಟ್ಟೂರ ಉಪಸ್ಥಿತಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತ ಮಾತೆಯ ಅನೇಕ ವೀರರು ದೇಶಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸಿದ್ದು, ತನ್ನ ಪ್ರಾಣದ ತ್ಯಾಗ-ಬಲಿದಾನ ಮಾಡಿದ್ದಾರೆ ಎಂದರು. ಬಿಇಟಿ ನಿರ್ದೇಶಕ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಅಶೋಕಕುಮಾರ ವಣಗೇರಿ, ಕಾಲೇಜನ ಕಚೇರಿಯ ಅಧೀಕ್ಷಕರು ವೃಷಿಕೇತ ಭೂಸಾರೆ, ಐಟಿಐ ಪ್ರಾಚಾರ್ಯ ಶಿವಕುಮಾರ ಹಿರೇಮಠ, ಬಿಇಡಿ ಕಾಲೇಜಿನ ಪ್ರಾಚಾರ್ಯ ಡಾ.ನಾಗಯ್ಯ ಸ್ವಾಮಿ ಮಾತನಾಡಿದರು. ಆರ್.ಎಸ್.ಪಾಟೀಲ ಸ್ವಾಗತಿಸಿದರು. ಸುಪ್ರೀಯಾ ವಂದಿಸಿದರು.ಮನೋಜಕುಮಾರ ಕೇರಳಿ ನಿರೂಪಣೆ ಮಾಡಿದರು.