ಗ್ರಾಮೀಣ ನೀರು ಪೂರೈಕೆ ಇಲಾಖೆ ಎಇಇ ಪ್ರೇಮ ರಾಠೋಡ್ ಮಾತನಾಡಿ, ಉಗರಗೋಳ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ನೀರು ಪೂರೈಕೆಯಾಗುವ ಪೈಪ್ಗಳಲ್ಲಿ ಸೋರಿಕೆಯಾಗುತ್ತಿದ್ದು, ಅವುಗಳನ್ನು ಸರಿಪಡಿಸಿ, 2 ಗಂಟೆವರೆಗೆ ನೀರು ಪೂರೈಕೆ ಅವಧಿ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಸ್ಥಗಿತಗೊಳಿಸಲಾಯಿತು. ಪಿಡಿಒ ದೇವೇಂದ್ರ ಆನೂರ, ಗ್ರಾಮಸ್ಥರಾದ ಮಂಜು ಮೆಟ್ಟಿನ, ಸಂಜು ಗಾಣಗೇರ, ಉಮೇಶ ತಿರ್ಲಾಪೂರ, ಮಹಿಳೆಯರು ಗ್ರಾಮಸ್ಥರು ಇದ್ದರು.