ಶಿಕ್ಷಣದಲ್ಲಿ ಭಾರತೀಯತೆ ಅಳವಡಿಕೆ ಅಗತ್ಯ

ಕಲಬುರಗಿ ಶರಣಬಸವ ವಿಶ್ವವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಭಾರತೀಯ ಶಿಣ ಮಂಡಲ ಕರ್ನಾಟಕ ಉತ್ತರ ಪ್ರಾಂತದ ಜಿಲ್ಲಾ ಕಾರ್ಯಕಾರಿಣಿ ಪದಗ್ರಹಣ ಸಭೆಯಲ್ಲಿ ಬಸವರಾಜ ದೇಶಮುಖ, ಪ್ರೊ.ಬಸವರಾಜ ಡೋಣೂರ, ಶಿವಾನಂದ ಖಜೂರ್ಗಿ, ಡಾ.ಪಲ್ಲವಿ ಪಾಟೀಲ್​, ಪ್ರೊ.ರವೀಂದ್ರ ಹೆಡಗಿ , ಡಾ.ಲಕ್ಷ್ಮೀ ಪಾಟೀಲ ಮಾಕಾ, ಡಾ.ಉದಯ ಪಾಟೀಲ, ಡಾ.ಮಹೇಶ ತನವಾಡೆ, ಡಾ.ಬಾಲಾಜಿ ಬಿರಾದಾರ, ನಿಶಾ ಜೋಶಿ, ಸಂಗಣ್ಣ ಕೆ., ಪ್ರೊ.ಭಾರತಿ ಹರಸೂರ ಇದ್ದರು.
ಕಲಬುರಗಿ ಶರಣಬಸವ ವಿಶ್ವವಿದ್ಯಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಭಾರತೀಯ ಶಿಣ ಮಂಡಲ ಕರ್ನಾಟಕ ಉತ್ತರ ಪ್ರಾಂತದ ಜಿಲ್ಲಾ ಕಾರ್ಯಕಾರಿಣಿ ಪದಗ್ರಹಣ ಸಭೆಯಲ್ಲಿ ಬಸವರಾಜ ದೇಶಮುಖ, ಪ್ರೊ.ಬಸವರಾಜ ಡೋಣೂರ, ಶಿವಾನಂದ ಖಜೂರ್ಗಿ, ಡಾ.ಪಲ್ಲವಿ ಪಾಟೀಲ್​, ಪ್ರೊ.ರವೀಂದ್ರ ಹೆಡಗಿ , ಡಾ.ಲಕ್ಷ್ಮೀ ಪಾಟೀಲ ಮಾಕಾ, ಡಾ.ಉದಯ ಪಾಟೀಲ, ಡಾ.ಮಹೇಶ ತನವಾಡೆ, ಡಾ.ಬಾಲಾಜಿ ಬಿರಾದಾರ, ನಿಶಾ ಜೋಶಿ, ಸಂಗಣ್ಣ ಕೆ., ಪ್ರೊ.ಭಾರತಿ ಹರಸೂರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಧ್ಯಾಪಕ ಪ್ರೊ.ಬಸವರಾಜ ಡೋಣೂರ ಪ್ರತಿಪಾದನೆ
  • ಶಿಕ್ಷಣ ಮಂಡಲ ಉತ್ತರ ಪ್ರಾಂತ ಕಾರ್ಯಕಾರಿಣಿ ಪದಗ್ರಹಣ ಸಭೆ
ಕಲಬುರಗಿ: ರಾಷ್ಟ್ರದ ಅಭಿವೃದ್ಧಿ ಮತ್ತು ಮಕ್ಕಳ ಸರ್ವಾಂಗೀಣ ವಿಕಾಸ ಶಿಕ್ಷಣದಲ್ಲಿ ಭಾರತೀಯತೆ ತರುವುದರಿಂದ ಮಾತ್ರ ಸಾಧ್ಯವಾಗಲಿದೆ ಎಂದು ಭಾರತೀಯ ಶಿಕ್ಷಣ ಮಂಡಲದ ಕರ್ನಾಟಕ ಉತ್ತರ ಪ್ರಾಂತ ಉಪಾಧ್ಯಕ್ಷ ಪ್ರೊ.ಬಸವರಾಜ ಡೋಣೂರ ಹೇಳಿದರು.
ಶರಣಬಸವ ವಿಶ್ವವಿದ್ಯಾಲಯ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಭಾರತೀಯ ಶಿಕ್ಷಣ ಮಂಡಲ ಕರ್ನಾಟಕ ಉತ್ತರ ಪ್ರಾಂತ ಜಿಲ್ಲಾ ಕಾರ್ಯಕಾರಿಣಿ ಪದಗ್ರಹಣ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಅಸ್ಮಿತೆ ಇರಬೇಕು ಎಂದರು.
ಪ್ರತಿಯೊಬ್ಬ ಭಾರತೀಯ ನಡೆ-ನುಡಿಯಲ್ಲಿ ತನ್ನ ದೇಶದ ಜೀವನ ವಿಧಾನ ಅಳವಡಿಸಿಕೊಂಡು ಸಾಂಸ್ಕೃತಿಕ ವೈಭವ ಎತ್ತಿ ಹಿಡಿಯಬೇಕು. ಅಭಿವೃದ್ಧಿ ಮತ್ತು ಮಕ್ಕಳ ಸರ್ವಾಂಗೀಣ ವಿಕಾಸಕ್ಕಾಗಿ ಪಾಲಕರು, ಶಿಕ್ಷಕರು ಮತ್ತು ಸಂಸ್ಥಾ ಚಾಲಕರು, ಸಾಮಾಜಿಕ ಸಂಘಟನೆಗಳು ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಭಾರತೀಯ ಶಿಕ್ಷಣ ಮಂಡಲ ಜಿಲ್ಲಾಧ್ಯಕ್ಷ ಬಸವರಾಜ ದೇಶಮುಖ ಮಾತನಾಡಿ, ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ನಾವೆಲ್ಲರೂ ಕೈಜೊಡಿಸೋಣ. ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಲ್ಲಿರುವ ಪರೀಾ ಭಯ ಹೋಗಲಾಡಿಸಲು ಮುಂದಿನ ದಿನಗಳಲ್ಲಿ ಕಾರ್ಯಾಗಾರ ಆಯೋಜಿಸಬೇಕು ಎಂದು ಹೇಳಿದರು.
ಪ್ರಾಸ್ತಾವಿಕ ಮಾತನಾಡಿದ ಶಿಕ್ಷಣ ಮಂಡಲದ ಪ್ರಾಂತ ಸಹ ಕಾರ್ಯದರ್ಶಿ ಡಾ.ಪಲ್ಲವಿ ಪಾಟೀಲ್​ ಸೇಡಂ, ರಾಷ್ಟ್ರದ ಅಭಿವೃದ್ಧಿಯಲ್ಲಿ ಶಿಕರ ಪಾತ್ರ ಅಮೂಲ್ಯ. ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು. ಆಟದ ಜತೆ ಪಾಠವಿರಲಿ. ಕ್ರೀಡೆಗಳಿಂದ ಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗುವುದರ ಜತೆ ಓದು ಅಭ್ಯಾಸವಾಗದೆ ಹವ್ಯಾಸವಾಗುತ್ತದೆ ಎಂದರು.ಶಿಕ್ಷಣ ಮಂಡಲ ಜಿಲ್ಲಾ ಉಪಾಧ್ಯಕ್ಷ ಶಿವಾನಂದ ಖಜೂರ್ಗಿ ಮಾತನಾಡಿ, ಮಕ್ಕಳಿಗೆ ಮುಕ್ತ ಶೈಕ್ಷಣಿಕ ವಾತಾವರಣ ಕಲ್ಪಿಸಬೇಕು. ವರ್ತಮಾನದ ಶೈಕ್ಷಣಿಕ ವ್ಯವಸ್ಥೆ ಅಕ್ಷರ ಜ್ಞಾನ ನೀಡುತ್ತದೆ ಹೊರತು ಮಕ್ಕಳ ಸರ್ವಾಂಗೀಣ ವಿಕಾಸಕ್ಕಾಗಿ ಒತ್ತು ನೀಡುತ್ತಿಲ್ಲ. ಶಿಕ್ಷಣದಲ್ಲಿ ಸ್ಥಳಿಯ ಕಲೆ, ಸಂಗೀತ, ಸಾಹಿತ್ಯ, ಜಾನಪದ, ಯೋಗಮಯ ಜೀವನ ಶೈಲಿ ಹೀಗೆ ಪ್ರತಿಯೊಂದರಲ್ಲಿ ಭಾರತೀಯತೆ ಎದ್ದು ಕಾಣುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶಿಕ್ಷಣ ಮಂಡಲ ಕರ್ನಾಟಕ ಉತ್ತರ ಪ್ರಾಂತದ ಅನುಸಂಧಾನ ಗತಿವಿಧಿ ಪ್ರಾಂತ ಪ್ರಮುಖ ಪ್ರೊ.ರವೀಂದ್ರ ಹೆಡಗಿ, ಜಿಲ್ಲಾ ಉಪಾಧ್ಯೆ ಡಾ.ಲಕ್ಷ್ಮೀ ಪಾಟೀಲ ಮಾಕಾ, ಡಾ.ಮಹೇಶ ತನವಾಡೆ, ಡಾ.ಬಾಲಾಜಿ ಬಿರಾದಾರ, ನಿಶಾ ಜೋಶಿ, ಸಂಗಣ್ಣ ಕೆ., ಡಾ.ನಾಗಬಸವಣ್ಣ ಗುರಾಗೋಳ, ಪ್ರೊ.ಭಾರತಿ ಹರಸೂರ, ಪೊ.ಸುವರ್ಣಾ ನಂದ್ಯಾಳ, ಡಾ.ಜಗದೀಶ ಬಿರಾದಾರ, ಶಶಿಕಲಾ ಬಿ.ಎಸ್​., ಮಳಯ್ಯ ಹಿರೇಮಠ, ಡಾ.ವಿಜಯಕುಮಾರ ಉಪಸ್ಥಿತರಿದ್ದರು.
ಶರಣು ಉದನೂರ ನಿರೂಪಣೆ ಮಾಡಿದರು. ಡಾ.ಶರಭಯ್ಯ ಸ್ವಾಮಿ ಪರಿಚಯಸಿ ಸ್ವಾಗತಿಸಿದರು. ಡಾ.ಉದಯ ಪಾಟೀಲ ವಂದಿಸಿದರು.
"

ಒತ್ತಡಮುಕ್ತ ಶೈಣಿಕ ವಾತಾವರಣದಿಂದ ಮಾತ್ರ ಮಕ್ಕಳ ಸರ್ವಾಂಗೀಣ ವಿಕಾಸ ಸಾಧ್ಯ. ತಾಯಿ ಗರ್ಭದಿಂದಲೇ ಮಕ್ಕಳ ಶಿಕ್ಷಣ ಆರಂಭವಾಗಲಿದೆ. ಹೀಗಾಗಿ ಶಿಕ್ಷಣ ಮತ್ತು ಸಂಸ್ಕಾರ ನೀಡುವಲ್ಲಿ ತಾಯಂದಿರ ಪಾತ್ರ ಬಹುದೊಡ್ಡದು.

— > ಬಸವರಾಜ ದೇಶಮುಖ ಅಧ್ಯಕ್ಷ, ಭಾರತೀಯ ಶಿಕ್ಷಣ ಮಂಡಲ ಕಲಬುರಗಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net