ಪ್ರೋತ್ಸಾಹ ಧನ ವಿತರಣೆ 15ರಂದು

ಶ್ರೀ ಜೆ.ಪಿ.ನಾರಾಯಣಸ್ವಾಮಿ
ಶ್ರೀ ಜೆ.ಪಿ.ನಾರಾಯಣಸ್ವಾಮಿ
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನದಿಂದ ಆಯೋಜನೆ
ಕಲಬುರಗಿ:  ಶ್ರೀ ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನ (ಜೆಪಿಎನ್​ಪಿ)ದಿಂದ ಕಲಬುರಗಿ, ಬೀದರ್​, ಯಾದಗಿರಿ, ವಿಜಯಪುರ, ರಾಯಚೂರು, ಬಾಗಲಕೋಟೆ ಜಿಲ್ಲೆಗಳ ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮ ಫೆ.15ರಂದು ಬೆಳಗ್ಗೆ 10ಕ್ಕೆ ನಗರದ ರಾಮಮಂದಿರ ವೃತ್ತದ ಬಳಿಯ ಸರ್ವಜ್ಞ ಕಾಲೇಜು ಎದುರಿನ ಅಭಿಶ್ರೀ ಹೋಟೆಲ್​ನಲ್ಲಿ ಹಮ್ಮಿಕೊಳ್ಳಲಾಗಿದೆ. ಉದ್ಘಾಟಕರಾಗಿ ಸಂಸ್ಥಾಪಕ ಜೆ.ಪಿ.ಸುಧಾಕರ, ವಿಧಾನ ಪರಿಷತ್​ ಸದಸ್ಯ ಜಗದೇವ ಗುತ್ತೇದಾರ್​ ಭಾಗವಹಿಸಲಿದ್ದು, ಜೆಪಿಎನ್​ಪಿ ಅಧ್ಯಕ್ಷ ಶಿವಾನಂದ ಎಚ್​.ಎಲ್​. ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಉಪಾಧ್ಯಕ್ಷ ಮಂಜಪ್ಪ ಜಿ., ಕಾರ್ಯದರ್ಶಿ ಕುಸುಮ ಅಜಯ್​, ಟ್ರಸ್ಟಿ ಪೂರ್ಣೇಶ ಎಂ.ಆರ್​., ಉದ್ಯಮಿ ಸತೀಶ ಗುತ್ತೇದಾರ್​ ಭಾಗವಹಿಸಲಿದ್ದಾರೆ. ಆಯ್ಕೆಯಾದ 200ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ನಡೆಯಲಿದ್ದು, ಬೆಳಗ್ಗೆ 8ರಿಂದ 9.30ರವರೆಗೆ ನೋಂದಣಿ ಪ್ರಕ್ರಿಯೆ ನಡೆಯಲಿದೆ ಎಂದು ಕಲಬುರಗಿ, ಬೀದರ್​ ವಿಭಾಗದ ಸಂಚಾಲಕ ಸುರೇಶ ಗುತ್ತೇದಾರ್​ ಬೆಡಸೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net