ಮುನವಳ್ಳಿ: ಪಟ್ಟಣದಲ್ಲಿ ೆ.17ರಿಂದ 21ರ ವರೆಗೆ ಪಂಚಲಿಂಗೇಶ್ವರ ಜಾತ್ರಾ ಮಹೋತ್ಸವ ಜರುಗಲಿದೆ. ೆ.17ರಂದು ಬೆಳಗ್ಗೆ ಪಂಚಲಿಂಗೇಶ್ವರ ದೇವರಿಗೆ ಮಹಾರುದ್ರಾಭಿಷೇಕ ಹಾಗೂ ರಥೋತ್ಸವದ ವಿಶೇಷ ಪೂಜೆ ಸಲ್ಲಿಸಲಾಗುವುದು. ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹಾಗೂ ಮುರುಘೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಂಜೆ 5 ಗಂಟೆಗೆ ಮಹಾರಥೋತ್ಸವ ಜರುಗಲಿದೆ. ರಾತ್ರಿ 9.30ಕ್ಕೆ "ರೈತನ ರಾಜ್ಯದಲ್ಲಿ ರೌಡಿಗಳ ದರ್ಬಾರ್' ನಾಟಕ ಪ್ರದರ್ಶನಗೊಳ್ಳಲಿದೆ. ೆ.18ರಂದು ರಾಜ್ಯ ಮಟ್ಟದ ಪುರುಷರ ಮುಕ್ತ ವಾಲಿಬಾಲ್ ಪಂದ್ಯಾವಳಿ, ರಸಪ್ರಶ್ನೆ ಸ್ಪರ್ಧೆ ಹಾಗೂ ಮುನವಳ್ಳಿ ವಲಯ ಮಟ್ಟದ ಸಮೂಹ ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ. ೆ.19ರಂದು ಟ್ರ್ಯಾಕ್ಟರ್ ಜಿಗ್&ಜಾಗ್ ಸ್ಪರ್ಧೆ, ಮಲ್ಲಗಂಬ, ಜಾದೂ ಪ್ರದರ್ಶನ ಹಾಗೂ ಸ್ವರ ಸಂಗೀತ ಲಹರಿ ಕಾರ್ಯಕ್ರಮ ನಡೆಯಲಿದೆ. ೆ.20ರಂದು ತೆರೆ ಬಂಡಿ ಸ್ಪರ್ಧೆ, ಮಹಿಳೆಯರಿಗಾಗಿ ವಿವಿಧ ಸ್ಪರ್ಧೆ, "ಸೂಪರ್ ್ಯಾಮಿಲಿ' ರಿಯಾಲಿಟಿ ಶೋ ಹಾಗೂ ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ. ೆ.21ರಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಜಾನುವಾರು ಪ್ರದರ್ಶನ, ಸಾಂಸತಿಕ ಕಾರ್ಯಕ್ರಮ, ಬಯಲು ಕುಸ್ತಿ ಹಾಗೂ ಗ್ರಾಮೀಣ ಕ್ರೀಡೆ ಹಮ್ಮಿಕೊಳ್ಳಲಾಗಿದೆ ಎಂದು ಜಾತ್ರಾ ಕಮಿಟಿ ಅಧ್ಯ ಆಂಬರೀಷ ಯಲಿಗಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.