ವಿಬಿ-ಜಿ ರಾಮ್​ ಜಿ ಅನುಷ್ಠಾನಗೊಳಿಸಿ

ಕಲಬುರಗಿ ಜಿಪಂನಲ್ಲಿ ಇತ್ತೀಚೆಗೆ ಅನಧಿಕೃತವಾಗಿ ವರ್ಗಾವಣೆ ಕೌನ್ಸೆಲಿಂಗ್​ ನಡೆದಿದ್ದಿ, ಅದನ್ನು ಸರಿಪಡಿಸುವಂತೆ ಒತ್ತಾಯಿಸಿ ಜಿಪಂ ಸಿಇಒ ರಾಹುಲ್​ ಸಂಕನೂರ ಅವರಿಗೆ ಚಿಂಚೋಳಿಯಲ್ಲಿ ಸರ್ಕಾರಿ ನೌಕರರ ಸಂದಿಂದ ಮನವಿ ಸಲ್ಲಿಸಲಾಯಿತು. ದೇವಿಂದ್ರಪ್ಪ ಹೊಳ್ಕರ್​, ಮಲ್ಲಿಕಾರ್ಜುನ ಪಾಲಾಮೂರ, ಜಗನ್ನಾಥರೆಡ್ಡಿ ಚಟ್ನಳ್ಳಿ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಜಿಪಂ ಸಿಇಒ ರಾಹುಲ್​ ಸಂಕನೂರ ಸೂಚನೆ
  • ಚಿಂಚೋಳಿಯಲ್ಲಿ ಪ್ರಗತಿ ಪರಿಶೀಲನೆ ಸಭೆ
ಚಿಂಚೋಳಿ : ವಿಬಿ-ಜಿ ರಾಮ್​-ಜಿ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತಕ್ಷಣ ಕೂಲಿ ಕೆಲಸ ನೀಡುವ ಮೂಲಕ ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಹುಲ್​ ಸಂಕನೂರ ಸೂಚನೆ ನೀಡಿದರು.
ಚಂದಾಪುರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು, ಪ್ರಧಾನಮಂತ್ರಿ ವಸತಿ ಯೋಜನೆ ಸೇರಿ ವಿವಿಧ ವಸತಿ ಯೋಜನೆಯಲ್ಲಿ ಅರ್ಹ ಫಲಾನುಭವಿಗಳ ಲಿಸ್ಟ್​ ಸಿದ್ಧಪಡಿಸಬೇಕು. ಕರ ವಸೂಲಿ ಪ್ರಗತಿಗೆ ಎಲ್ಲ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ವರ್ಗ ಶ್ರಮಿಸಬೇಕು. ಗ್ರಾಮ ಪಂಚಾಯಿತಿಗಳಿಗೆ ನೀಡಿದ ಗುರಿ ತಲುಪಬೇಕು. ತಾಲೂಕಿನಲ್ಲಿ ಕುಡಿವ ನೀರು, ಸ್ವಚ್ಛತೆ, ವಿದ್ಯುತ್​ ದೀಪ ಸೇರಿ ಮೂಲ ಸೌಕರ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕು. ಸಾರ್ವಜನಿಕರಿಂದ ದೂರುಗಳು ಬರದಂತೆ ಜಾಗೃತಿ ವಹಿಸಬೇಕು ಎಂದು ತಾಕೀತು ಮಾಡಿದರು.
ಸುಲೇಪೇಟ, ದಸ್ತಾಪುರ, ಚಂದ್ರಂಪಳ್ಳಿ, ಪೋಲಕಪಳ್ಳಿ ಸೇರಿ ವಿವಿಧೆಡೆ ಭೇಟಿ ನೀಡಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.
ತಾಪಂ ಇಒ ಸಂತೋಷಕುಮಾರ ಚವ್ಹಾಣ್​, ಪ್ರಮುಖರಾದ ನಾಗೇಂದ್ರಪ್ಪ, ಗೋವಿಂದರೆಡ್ಡಿ, ಜಗನ್ನಾಥರೆಡ್ಡಿ ಚಟ್ನಳ್ಳಿ, ಭೀಮಾಶಂಕರ ಕಮಕನೂರ, ಹೀರಾಸಿಂಗ್​, ರಮೇಶ ತುಮಕುಂಟಾ, ವಿಜಯಲ್ಮ ಕನಕಪುರ, ರಾಜಶೇಖರ ಹಿತ್ತಲ್​, ಮಡಿವಾಳಯ್ಯ ಸ್ವಾಮಿ, ಮಲ್ಲಿಕಾರ್ಜುನ, ಬಸವರಾಜ ಛಲವಾದಿ, ಪಾಂಡುರಂಗ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net