ಕಲಬುರಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲೂ ರೆಮ್ಸ್ (ಆರ್ಇಎಂಎಸ್) ಮೂಲಕ ಟೆಂಡರ್ ಪದ್ಧತಿ ಅಳವಡಿಸಬೇಕು ಎಂದು ಆಗ್ರಹಿಸಿ ಆಹಾರಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂದ ಪದಾಧಿಕಾರಿಗಳು ನೆಹರು ಗಂಜ್ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಸಂದ ಅಧ್ಯಕ್ಷ ಸಂತೋಷ ಲಂಗರ್, ಕಾರ್ಯದರ್ಶಿ ಬಸವರಾಜ ಹೆಚ್.ತಡಕಲ್, ಶರಣಪ್ಪ ಬಾಳಿ, ಮಲ್ಲಿಕಾರ್ಜುನ ಕಕ್ಕಳಮೇಲಿ, ಮಲ್ಲಿಕಾರ್ಜುನ ಮಾನಕರ್ ಸೇರಿದಂತೆ ಅನೇಕ ವರ್ತಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಕಲಬುರಗಿ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲೂ ರೆಮ್ಸ್ (ಆರ್ಇಎಂಎಸ್) ಮೂಲಕ ಟೆಂಡರ್ ಪದ್ಧತಿ ಅಳವಡಿಸಬೇಕು ಎಂದು ಆಗ್ರಹಿಸಿ ಆಹಾರಧಾನ್ಯ ಮತ್ತು ಬೀಜ ವ್ಯಾಪಾರಿಗಳ ಸಂದ ಪದಾಧಿಕಾರಿಗಳು ನೆಹರು ಗಂಜ್ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರಸಕ್ತ ಸಮಿತಿಯಲ್ಲಿ ಇನಾಮ್ (ಇಎನ್ಎಎಂ) ಮೂಲಕ ಆನ್ಲೈನ್ ಟೆಂಡರ್ ನಡೆಯುತ್ತಿದ್ದು, ಇದರಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗುತ್ತಿದೆ. ಇಲ್ಲಿನ ವ್ಯಾಪಾರಿಗಳಿಗೆ ಅನೇಕ ತೊಂದರೆ ಎದುರಾಗಿವೆ. ಶಾಶ್ವತ ಪರಿಹಾರವಾಗಿ ಕಲಬುರಗಿ ಎಪಿಎಂಸಿ ಮಾರುಕಟ್ಟೆ ಸಮಿತಿಯಲ್ಲೂ ರೆಮ್ಸ್ ಮೂಲಕ ಟೆಂಡರ್ ಪದ್ದತಿ ಅಳವಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ರಿಮ್ಸ್ ತಂತ್ರಜ್ಞಾನದಲ್ಲಿ ವ್ಯವಹಾರ ಮಾಡುವಾಗ ರಾಜ್ಯದ ಇತರೆ ಎಪಿಎಂಸಿ ವರ್ತಕರ ಜತೆಗೆ ಸುಗಮ ವಹಿವಾಟು ಮಾಡಲು ಅನುಕೂಲವಾಗಲಿದೆ ಎಂದು ಹೇಳಿದರು.
ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಟ್ರಾಫಿಕ್ ಸಮಸ್ಯೆ ತಲೆದೋರಿದೆ. ಕೆಲ ಅಂಗಡಿಗಳಲ್ಲಿ ಲೋಡಿಂಗ್, ಅನ್ಲೋಡಿಂಗ್ಗೆ ನಿಗದಿತ ಸಮಯವಿಲ್ಲ. ಹೀಗಾಗಿ ತೊಂದರೆ ಎದುರಾಗಿದೆ. ಇದಕ್ಕಾಗಿ ಪ್ರತ್ಯೇಕ ಸಮಯ ನಿಗದಿ ಮಾಡಬೇಕು. ಮಾರುಕಟ್ಟೆಯ ಮುಖ್ಯದ್ವಾರದ ಒಳಗೆ ಕೆಲ ಟಂಟಂಗಳು ಮತ್ತು ಗಾಡಿಗಳು ರಸ್ತೆಯಲ್ಲೇ ಪಾರ್ಕಿಂಗ್ ಮಾಡಿಕೊಳ್ಳುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು. ಮಾರುಕಟ್ಟೆ ಆವರಣದಲ್ಲಿ ಬೀದಿ ದೀಪ ಮತ್ತು ನೀರು ಸರಬರಾಜಿಗಾಗಿ ರಸ್ತೆ ಹಡ್ಡಿದ್ದರಿಂದ ನಾಲೆ ಭರ್ತಿಯಾಗಿದ್ದು, ಶ್ರೀ ಸ್ವಚ್ಛತೆ ಮಾಡಬೇಕು ಎಂದು ಒತ್ತಾಯಿಸಿದರು.
ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಮಾರುಕಟ್ಟೆ ಆವರಣದ ಕಾಟನ್ ಮಾರ್ಕೆಟ್ ರಸ್ತೆಗಳ ಮಧ್ಯದಲ್ಲಿ ಶನಿವಾರಕ್ಕೊಮ್ಮೆ ನಡೆಯುವ ಜಾನುವಾರು ಸಂತೆಗಳಿಂದ ವ್ಯಾಪಾರಸ್ಥರು, ರೈತರು, ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ. ಈ ಕುರಿತು ಅನೇಕ ಬಾರಿ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಆದರೆ ಪರಿಹಾರ ಶೂನ್ಯ. ಇದೀಗ ಜಾನುವಾರು ಸಂತೆಯನ್ನು ಸುಲ್ತಾನಪೂರ್ ತರಕಾರಿ ಮಾರುಕಟ್ಟೆ ಬಳಿ ಸ್ಥಳಾಂತರಿಸಬೇಕು ಎಂದು ಮನವಿ ಮಾಡಿದರು.
ಎಪಿಎಂಸಿ ಕಾರ್ಯದರ್ಶಿಗೆ ಮನವಿಪತ್ರ ಸಲ್ಲಿಸಿದರು. ಸಂದ ಅಧ್ಯಕ್ಷ ಸಂತೋಷ ಲಂಗರ್, ಕಾರ್ಯದರ್ಶಿ ಬಸವರಾಜ ಹೆಚ್.ತಡಕಲ್, ಶರಣಪ್ಪ ಬಾಳಿ, ಮಲ್ಲಿಕಾರ್ಜುನ ಕಕ್ಕಳಮೇಲಿ, ಮಲ್ಲಿಕಾರ್ಜುನ ಮಾನಕರ್ ಸೇರಿದಂತೆ ಅನೇಕ ವರ್ತಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.
"
ಕಲಬುರಗಿ ನಗರದಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೃಷಿ ಮಾರುಕಟ್ಟೆಗೆ ಬರುವ ರೈತರು, ಸಾರ್ವಜನಿಕರು, ಹಮಾಲರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಸಂಚಾರ ವ್ಯವಸ್ಥೆ ಸುಧಾರಿಸಲು ಕ್ರಮ ಕೈಗೊಳ್ಳಬೇಕು.