

ಕರಜಗಿ: ಶಿಕ್ಷಕ ವೃತ್ತಿ ಶ್ರೇಷ್ಠವಾಗಿದ್ದು, ಅದರ ಘನತೆಯನ್ನು ಅರ್ಥೈಸಿಕೊಂಡು ಮಕ್ಕಳಿಗೆ ಪಾಠ ಮಾಡುವ ಕೆಲಸ ಆಗಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಅರುಣಕುಮಾರ ಪಾಟೀಲ್ ಹೇಳಿದರು. ಮಾಶಾಳದ ಶ್ರೀ ಚೌಡೇಶ್ವರಿ ಮಂಗಲ ಕಾರ್ಯಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸೇವಾ ನಿವೃತ್ತ ಶಿಕ್ಷಕ ಮಾರುತಿ ಸುತಾರ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳ ಮನಸ್ಸನ್ನು ಅರಿತು ಬೋಧನೆ ಮಾಡಬೇಕು. ಅಲ್ಲದೆ ವಿದ್ಯಾರ್ಜನೆ ಜತೆಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ಹೇಳಿಕೊಡಬೇಕು ಎಂದು ಕರೆ ನೀಡಿದರು. ಬರಡೋಲ ಮೂರು ಝಾವಧೀಶ್ವರ ಮಠದ ಶ್ರೀ ನಿರಂಜನ ಪ್ರಣವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷ ನಿತೀನ್ ಗುತ್ತೇದಾರ್, ಪ್ರಮುಖರಾದ ಲಕ್ಷ$್ಮಣ ಝಳಕಿ, ವಿಶ್ವನಾಥ ರೇವೂರ, ಚಂದ್ರಶೇಖರ ಬರಗಾಲೆ, ಬಾಬಾಸಾಹೇಬ್ ಆಲೂರ, ಚಂದ್ರಾಮಪ್ಪ ಪೂಜಾರಿ, ದುಂಡಪ್ಪ ಪೂಜಾರಿ, ಶಿವಪುತ್ರ ಜಿಡಗಿ, ರಾಮಲಿಂಗಯ್ಯ ಮಠ, ಶ್ರೀ ಅಶೋಕ ದೇಸಾಯಿ, ಗುರುಸಿದ್ದಯ್ಯ ನಂದಿಮಠ, ಯಲ್ಲಪ್ಪ ಪ್ಯಾಟಿ, ದೇಸು ಚವ್ಹಾಣ್, ನಾರಾಯಣ ಅಂಬೂರೆ, ಶಂಕರ ನಾವಿ, ಸಂಗಪ್ಪ ಮ್ಯಾಳೆಸಿ, ಹುಸೇನಿ ಮುಜಾವರ್, ಭೀಮಣ್ಣ ವಾಯಿ, ಜಗನ್ನಾಥ ಮೋರೆ, ಕಾಳಪ್ಪ ಸುತಾರ್, ಗುರಪ್ಪ ಕಾಳಿ, ಶಿವಾನಂದ ರೇವೂರ ಇತರರಿದ್ದರು. ನಾಗಬಸ್ಸು ದೇಗಾಂವ ನಿರೂಪಣೆ ಮಾಡಿದರು. ಸೋಮಯ್ಯ ಹಿರೇಮಠ ಪ್ರಾರ್ಥನೆ ಮತ್ತು ಸ್ವಾಗತ ಕೋರಿದರು.