ಗ್ರಾಮಗಳ ವಿದ್ಯುತ್​ ಸಮಸ್ಯೆಗೆ ಶಿಘ್ರ ಮುಕ್ತಿ

ಸೇಡಂ ತಾಲೂಕಿನ ಕಾಚೂರಿನಲ್ಲಿ ವಿದ್ಯುತ್​ ಉಪ ಕೇಂದ್ರ ನಿರ್ಮಾಣಕ್ಕೆ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಚಾಲನೆ ನೀಡಿದರು. ಬಸವರಾಜ ಪಾಟೀಲ್​ಮ, ವಿಶ್ವನಾಥ ಪಾಟೀಲ್​, ನಾಗೇಶ್ವರರಾವ ಮಾಲಿಪಾಟೀಲ್​, ಶಿವಶರಣರೆಡ್ಡಿ ಪಾಟೀಲ್​, ಮಹೇಶ ಪಾಟೀಲ್​ ಇತರರದ್ದರು.
ಸೇಡಂ ತಾಲೂಕಿನ ಕಾಚೂರಿನಲ್ಲಿ ವಿದ್ಯುತ್​ ಉಪ ಕೇಂದ್ರ ನಿರ್ಮಾಣಕ್ಕೆ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಚಾಲನೆ ನೀಡಿದರು. ಬಸವರಾಜ ಪಾಟೀಲ್​ಮ, ವಿಶ್ವನಾಥ ಪಾಟೀಲ್​, ನಾಗೇಶ್ವರರಾವ ಮಾಲಿಪಾಟೀಲ್​, ಶಿವಶರಣರೆಡ್ಡಿ ಪಾಟೀಲ್​, ಮಹೇಶ ಪಾಟೀಲ್​ ಇತರರದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಶರಣಪ್ರಕಾಶ ಪಾಟೀಲ್​ ಹೇಳಿಕೆ
  • ಕಾಚೂರಿನಲ್ಲಿ ವಿದ್ಯುತ್​ ಉಪ ಕೇಂದ್ರ ನಿರ್ಮಾಣಕ್ಕೆ ಚಾಲನೆ
ಸೇಡಂ: ಬಹುತೇಕ ಹಳ್ಳಿಗಳಲ್ಲಿ ವಿದ್ಯುತ್​ ಸಮಸ್ಯೆ ಆಗುತ್ತಿರುವುದು ಮನಗಂಡು ವಿದ್ಯುತ್​ ಉಪ ಕೇಂದ್ರಗಳ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಕರೆಂಟ್​ ಸಮಸ್ಯೆ ಪರಿಹಾರ ಸಿಗಲಿದೆ ಎಂದು ವೈದ್ಯಕಿಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್​ ಹೇಳಿದರು.
ಕಾಚೂರಿನಲ್ಲಿ ಕರ್ನಾಟಕ ವಿದ್ಯುತ್​ ಪ್ರಸರಣ ನಿಗಮದಿಂದ ಸೋಮವಾರ ಆಯೋಜಿಸಿದ್ದ 27 ಕೋಟಿ ರೂ. ವೆಚ್ಚದ 110/33/11 ಕೆವಿ ವಿದ್ಯುತ್​ ಉಪ ಕೇಂದ್ರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಮತೇತ್ರದ ಬಹುತೇಕ ಭಾಗ ತೆಲಂಗಾಲದ ಗಡಿಗೆ ಹೊಂದುಕೊಂಡಿದೆ. ಒಂದೇ ವಿದ್ಯುತ್​ ಕೇಂದ್ರದಿಂದ ಅನೇಕ ತೊಂದರೆಯಾಗುತಿತ್ತು. ಈಗಾಗಲೇ ತೊಲಮಾಮಡಿ, ಕೋಲಕುಂದಾ, ಮದನಾದಲ್ಲಿ ಉಪ ಕೇಂದ್ರ ನಿರ್ಮಾಣಗೊಂಡು ಕೆಲಸ ಆರಂಭವಾಗಿದೆ. ಕಾಗಿಣಾ ನದಿ ದಡದಲ್ಲಿರುವ ಸಾಕಷ್ಟು ಗ್ರಾಮಗಳಲ್ಲಿ ವೊಲ್ಟೇಜ್​ ಸಮಸ್ಯೆ ಆಗುತ್ತಿರುವುದರಿಂದ ಇಲ್ಲಿಯೂ ಹೊಸದಾಗಿ ಉಪ ಕೇಂದ್ರ ನಿರ್ಮಿಸಲಾಗುತ್ತಿದೆ ಎಂದರು.
ಎಪಿಎಮ್​ಸಿ ಮಾಜಿ ಅಧ್ಯಕ್ಷ ವಿಶ್ವನಾಥ ಪಾಟೀಲ್​ ಕುಕ್ಕುಂದಾ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ರೇವಗೊಂಡ ಮಾತನಾಡಿದರು.
ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಸೀಲ್ದಾರ್​ ಶ್ರೀಯಾಂಕಾ ಧನಶ್ರೀ, ಕೆಪಿಟಿಸಿಎಲ್​ ಮುಖ್ಯ ಅಭಿಯಂತರ ರಾಮಸ್ವಾಮಿ, ಅಧೀಕ್ಷಕ ಅಭಿಯಂತರ ರಾಮಚಂದ್ರ ಎಸ್​.ಜಿ., ಇಇ ರಾಜೇಶ ಹಿಪ್ಪರಗಿ, ಎಇಇ ಮಲ್ಲಿಕಾರ್ಜುನ ಗುಂಡಗೋಳ, ದಯಾನಂದ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿಶ್ವನಾಥ ಪಾಟೀಲ್​, ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ್​ ಊಡಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಾಗೇಶ್ವರರಾವ ಮಾಲೀಪಾಟೀಲ್​, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಿವಶಣರೆಡ್ಡಿ ಪಾಟೀಲ್​, ಪುರಸಭೆ ಮಾಜಿ ಅಧ್ಯಕ್ಷ ವೀರೇಂದ್ರ ರುದ್ನೂರ, ಪ್ರಮುಖರಾದ ಮಹೇಶ ಪಾಟೀಲ್​ ತರನಳ್ಳಿ, ಲ್ಮಾರೆಡ್ಡಿ ತೆಲ್ಕೂರ, ಜಗದೇವಪ್ಪ ಪಾಟೀಲ್​ ಕೊಂಕನಹಳ್ಳಿ, ಚನ್ನಬಸಪ್ಪ ಹಾಗರಗಿ, ಜಗನ್ನಾಥ ಚಿಂತಪಳ್ಳಿ, ಮಹ್ಮದ್​ ಗೌಸ್​, ನಾಗರಾಜ ಪಾಟೀಲ್​, ಸತೀಶ ಪೂಜಾರಿ, ಸುಭಾಷ ನಾಟೀಕಾರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net