ಕೆಂಪು ಮಣ್ಣು ಅಕ್ರಮ ಸಾಗಣೆ ಕಾಣಿಸ್ತಿಲ್ವಾ ?

ಚಿಂಚೋಳಿ ತಾಲೂಕಿನ ಚಂದು ನಾಯಕ ತಾಂಡಾ ಬಳಿಯ ಪಟ್ಟಾ ಜಮೀನಿಗೆ ಶಾಸಕ ಡಾ.ಅವಿನಾಶ ಜಾಧವ್​ ಭೇಟಿ ನೀಡಿ ಅಕ್ರಮ ಕೆಂಪು ಮಣ್ಣು ಸಾಗಿಸುವ ಸ್ಥಳ ಪರಿಶೀಲಿಸಿದರು. ವಿಜಯಕುಮಾರ ಚೆಂಗಟಾ, ಅಶೋಕ ಚವ್ಹಾಣ್​, ರಾಮರೆಡ್ಡಿ ಪಾಟೀಲ್​, ಗಿರಿರಾಜ ನಾಟೀಕಾರ, ಅಭಿಷೇಕ ಮಲಕನೂರ ಇತರರಿದ್ದರು.
ಚಿಂಚೋಳಿ ತಾಲೂಕಿನ ಚಂದು ನಾಯಕ ತಾಂಡಾ ಬಳಿಯ ಪಟ್ಟಾ ಜಮೀನಿಗೆ ಶಾಸಕ ಡಾ.ಅವಿನಾಶ ಜಾಧವ್​ ಭೇಟಿ ನೀಡಿ ಅಕ್ರಮ ಕೆಂಪು ಮಣ್ಣು ಸಾಗಿಸುವ ಸ್ಥಳ ಪರಿಶೀಲಿಸಿದರು. ವಿಜಯಕುಮಾರ ಚೆಂಗಟಾ, ಅಶೋಕ ಚವ್ಹಾಣ್​, ರಾಮರೆಡ್ಡಿ ಪಾಟೀಲ್​, ಗಿರಿರಾಜ ನಾಟೀಕಾರ, ಅಭಿಷೇಕ ಮಲಕನೂರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳ ವಿರುದ್ಧ ಶಾಸಕ ಡಾ.ಜಾಧವ್​ ಕಿಡಿ
  • ಚಂದು ನಾಯಕ ತಾಂಡಾಕ್ಕೆ ಭೇಟಿ
ಚಿಂಚೋಳಿ: ಸರ್ಕಾರ 24 ವರ್ಷಗಳ ಹಿಂದೆಯೇ ಬಡ ರೈತರಿಗೆ ಭೂಮಿ ನೀಡಿ, ಹಕ್ಕು ಪತ್ರ ವಿತರಿಸಿದೆ. ಇದೀಗ ಅದೇ ಸ್ಥಳದಲ್ಲಿ ಅಕ್ರಮವಾಗಿ ಕೆಂಪು ಮಣ್ಣು ಸಾಗಣೆ ಮಾಡುವವರ ವಿರುದ್ಧ ಕ್ರಮ ಏಕೆ ತೆಗೆದುಕೊಳ್ಳುತ್ತಿಲ್ಲ ಎಂದು ಶಾಸಕ ಡಾ.ಅವಿನಾಶ ಜಾಧವ್​ ಕಿಡಿಕಾರಿದರು.
ಶಾದಿಪುರ ಬಳಿಯ ಚಂದು ನಾಯಕ ತಾಂಡಾದಲ್ಲಿನ ಸರ್ವೇ ನಂ.126, 126/3, 127/3ರಲ್ಲಿ ಸುಮಾರು 59 ಫಲಾನುಭವಿಗಳಿಗೆ ಸರ್ಕಾರ ಹಕ್ಕುಪತ್ರ ನೀಡಿದ್ದು, ಭೂಮಿ ನೀಡಿದ ಸ್ಥಳದಲ್ಲಿ ಅಕ್ರಮವಾಗಿ ಕೆಂಪು ಮಣ್ಣು ಸಾಗಣೆ ಮಾಡಲಾಗುತ್ತಿದೆ. ಇದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಫಲಾನುಭವಿಗಳು ನಡೆಸುತ್ತಿರುವ ಅರ್ನಿದಿಷ್ಟಾವಧಿ ಧರಣಿ ಶನಿವಾರ 38 ದಿನ ಪೂರೈಸಿದ್ದು, ಭಾನುವಾರ 39ನೇ ದಿನಕ್ಕೆ ಪದಾರ್ಪಣೆ ಮಾಡಿದೆ.
ಧರಣಿ ಸ್ಥಳಕ್ಕೆ ಭೇಟಿ ನೀಡಿ ಫಲಾನುಭವಿಗಳೊಂದಿಗೆ ಚರ್ಚಿಸಿದ ಶಾಸಕರು, ಅಕ್ರಮ ಮರಳು ಸಾಗಣೆ ತಡೆಯುವ ಅಧಿಕಾರಿಗಳಿಗೆ ಅಕ್ರಮವಾಗಿ ಕೆಂಪು ಮಣ್ಣು ಸಾಗಿಸುವವರು ಕಾಣುತ್ತಿಲ್ವಾ ? ಹೋರಾಟಗಾರರೊಂದಿಗೆ ನಾನಿದ್ದೇನೆ. ನಿಮ್ಮ ಧ್ವನಿಯನ್ನು ಸರ್ಕಾರಕ್ಕೆ ತಲುಪಿಸುವೆ. ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವೆ. ಜಿಲ್ಲಾಧಿಕಾರಿ, ಸಹಾಯಕ ಆಯುಕ್ತ, ತಹಸೀಲ್ದಾರ್​ ಮೂಲಕ ಸಮಸ್ಯೆಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದರು. ಆದರೆ ಈವರೆಗೂ ಕೆಲಸವಾಗಿಲ್ಲ. ಇದೀಗ ಸೋಮವಾರ ಮತ್ತೊಮ್ಮೆ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿಯಾಗಿ ನಿಮ್ಮ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಮನವಿ ಮಾಡುವೆ ಎಂದು ಭರವಸೆ ನೀಡಿದರು.
ಬಿಜೆಪಿ ತಾಲೂಕು ಅಧ್ಯ ವಿಜಯಕುಮಾರ ಚೆಂಗಟಾ, ಪ್ರಮುಖರಾದ ಅಶೋಕ ಚವ್ಹಾಣ್​, ರಾಮರೆಡ್ಡಿ ಪಾಟೀಲ್​, ಗಿರಿರಾಜ ನಾಟೀಕಾರ, ಅಭಿಷೇಕ ಮಲಕನೂರ, ವಿಜಯಕುಮಾರ ರಾಠೋಡ್​, ಸುಧಾಕರ, ಅನೀಲಕುಮಾರ ಕಂಟ್ಲಿ, ಸತೀಶ ಪಾಟೀಲ್​, ಶಂಕರ ರಾಠೋಡ್​, ವೆಂಕಟೇಶ, ರಮೇಶ ರಾಠೋಡ್​, ಲಿಂಬಾಜಿ ರಾಠೋಡ್​ ಇತರರಿದ್ದರು.
"

ಕುಂಚಾವರಂ, ಮಿರಿಯಾಣ, ಕುಸರಂಪಳ್ಳಿ ಭಾಗದ ಗಡಿ ಸರಹದ್ದು ನಿರ್ಮಿಸಲು ಕರ್ನಾಟಕ ಹಾಗೂ ತೆಲಂಗಾಣ ಸರ್ಕಾರವು ತ್ವರಿತವಾಗಿ ಕ್ರಮಕೈಗೊಳ್ಳಬೇಕು. ೇತ್ರದ ಅರಣ್ಯ, ಭೂ ಸಂಪತ್ತು ಸಂರಣೆಗೆ ಮುಂದಾಗಬೇಕು. ಶ್ರೀವೇ ನಿಯೋಗದೊಂದಿಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವರಿಕೆ ಮಾಡಲಾಗುವುದು.

— > ಡಾ.ಅವಿನಾಶ ಜಾಧವ್​, ಶಾಸಕ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net