ರೇಷನ್​ ಅಂಗಡಿಗಳಲ್ಲಿ ಅಕ್ರಮ ಅಕ್ಕಿ ಖರೀದಿ

 ಸೇಡಂನಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಶಿವಶರಣರೆಡ್ಡಿ ಪಾಟೀಲ್​, ಸೈಯದ್​ ಪಟೇಲ್​ ಇತರರಿದ್ದರು.
ಸೇಡಂನಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಶಿವಶರಣರೆಡ್ಡಿ ಪಾಟೀಲ್​, ಸೈಯದ್​ ಪಟೇಲ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸದಸ್ಯ ಮಹೆಮೂದ್​ ಮದನಾ ಆರೋಪ
  • ಗ್ಯಾರೆಂಟಿ ಅನುಷ್ಠಾನ ಸಮಿತಿಯಿಂದ ಪ್ರಗತಿ ಪರಿಶೀಲನೆ
ಸೇಡಂ: ತಾಲೂಕಿನ ಬಹುತೇಕ ರೇಷನ್​ ಅಂಗಡಿಗಳಲ್ಲಿ ವಿತರಕರು ತಮ್ಮ ಪಡಿತರ ಪಡೆಯಲು ಬರುವ ಕಾರ್ಡ್​ದಾರರಿಂದ ಅಕ್ಕಿ ಖರೀದಿಸಿ ಹಣ ನೀಡುವ ಮೂಲಕ ಅಕ್ರಮವೆಸಗುವ ಕೆಲಸ ಮಾಡುತ್ತಿದ್ದಾರೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಮಹೆಮೂದ್​ ಮದನಾ ದೂರಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಬಹುತೇಕ ರೇಷನ್​ ಅಂಗಡಿಗಳಲ್ಲಿ ಜನರಿಂದ ಬೆರಳಚ್ಚು ಪಡೆದುಕೊಳ್ಳುವ ವಿತರಕ, ಅಕ್ಕಿ ತಮ್ಮ ಬಳಿ ಇರಿಸಿಕೊಂಡು ಹಣ ನೀಡಿ ಕಳುಹಿಸುತ್ತಿದ್ದಾರೆ. ಇದರಿಂದಾಗಿ ನೇರವಾಗಿ ಅಕ್ರಮ ಕೆಲಸಕ್ಕೆ ವಿತರಕರೇ ಸಾಥ್​ ನೀಡಿದಂತಾಗುತ್ತಿದೆ. ಹೀಗಾಗಿ ಕೂಡಲೇ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷ ಶಿವರಶರಣರೆಡ್ಡಿ ಪಾಟೀಲ್​ ಮಾತನಾಡಿ, ತಾಲೂಕಿನ ಹಾರಕೂಡಕ್ಕೆ ಹತ್ತಾರು ಭಕ್ತರು ನಿತ್ಯ ಪ್ರಯಾಣಿಸುತ್ತಾರೆ. ಆದರೆ ಇಲ್ಲಿಂದ ಸಂಚಾರ ನಡೆಸುತ್ತಿದ್ದ ಬಸ್​ ಏಕಾಏಕಿ ನಿಲ್ಲಿಸಿದ್ದು, ಕೂಡಲೇ ಸದರಿ ಬಸ್​ನ ಸಂಚಾರ ಮರು ಆರಂಭ ಮಾಡುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಿಕೊಡಬೇಕು. ಜತೆಗೆ ಮದನಾದ ಶಾಲೆ ಹತ್ತಿರ ಆ ಮಾರ್ಗದಲ್ಲಿ ಸಂಚಾರ ನಡೆಸುವ ಬಸ್​ಗಳನ್ನು ನಿಲ್ಲಿಸಲು ಹಿಂದಿನ ಸಭೆಯಲ್ಲಿ ತಿಳಿಸಲಾಗಿತ್ತು, ಅದನ್ನು ಕೂಡಲೇ ಆಚರಣೆಗೆ ತರಬೇಕು ಎಂದು ಟಕ ವ್ಯವಸ್ಥಾಪಕರಿಗೆ ಸೂಚಿಸಿದರು.
ಸದಸ್ಯೆ ಶೋಭಾ ವಾಲೀಕಾರ ಮಾತನಾಡಿ, ರೇಷನ್​ ನೀಡಲು ಬೆರಳಚ್ಚು ಪಡೆಯಲು ಕೆಲವೆಡೆ 10 ರೂ., ಇನ್ನು ಕೆಲವೆಡೆ 20 ರೂ. ಹಣ ಪಡೆಯಲಾಗುತ್ತಿದೆ. ಇದರಿಂದಾಗಿ ರೇಷನ್​ ಪಡೆಯುವ ಬಡ ಜನರಿಗೆ ಹೊರೆಯಾಗಲಿದೆ. ಹೀಗಾಗಿ ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಕ್ರಮಕ್ಕೆ ಮುಂದಾಗಬೇಕು ಎಂದರು.
ಸದಸ್ಯರಾದ ಶ್ರೀನಿವಾಸ ಸಂಗಾವಿ, ಅಶೋಕ ಫೀರಂಗಿ, ಶಾಭೋದ್ದಿನ್​ ಸಂಗಾವಿ, ಭೀಮಶಪ್ಪ, ವಿಷ್ಣುವರ್ಧನರೆಡ್ಡಿ ಯಾನಾಗುಂದಿ, ಜಗನ್ನಾಥ ಪಾಟೀಲ್​ ಬಿಬ್ಬಳ್ಳಿ, ವೆಂಕಟೇಶಗೌಡ, ಹಣಮಂತ ಯಾದವ, ನೀರಜಾ ಕುಲಕರ್ಣಿ, ಶೇಖ್​ ಮುಜೀಬ್​ ಉರ ರೆಹಮಾನ್​, ಅಧಿಕಾರಿಗಳಾದ ಅನುರಾಧಾ ಪಾಟೀಲ್​, ಶಂಕರ ಪವಾರ್​, ಮಲ್ಲಿಕಾರ್ಜುನ, ಶೇಖರ, ರವೀಂದ್ರರೆಡ್ಡಿ, ಖ್ಯಾದಿಗೆಪ್ಪ ಇತರರಿದ್ದರು.
"

ಗೃಹಲಕ್ಷ್ಮಿ ಯೋಜನೆಗೆ ಸಂಬಂದಿಸಿದಂತೆ ಯಾವುದೇ ದಾಖಲೆ ಸಂಗ್ರಹಿಸುವ ಕೆಲಸ ಸರ್ಕಾರದಿಂದ ಆಗುತ್ತಿಲ್ಲ. ಫಲಾನುಭವಿಗಳು ಯಾವುದೇ ಕಾರಣಕ್ಕು ಗೊಂದಲಕ್ಕೆ ಒಳಗಾಗಬಾರದು. ಮರಣ ಹೊಂದಿವರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಸಮೀೆ ಕಾರ್ಯ ಜಾರಿಯಲ್ಲಿರುತ್ತದೆ. ಗೃಹಜ್ಯೋತಿಗಾಗಿ ಮನೆಗಳಿಗೆ ಭೇಟಿ ನೀಡಿ ಸಮೀೆ ಕಾರ್ಯ ಜಾರಿಯಲ್ಲಿದ್ದು, ಜನತೆ ಸಹಕರಿಸಬೇಕು.

— > ಶಿವಶರಣರೆಡ್ಡಿ ಪಾಟೀಲ್​, ತಾಲೂಕು ಅಧ್ಯಕ್ಷ, ಗ್ಯಾರಂಟಿ ಅನುಷ್ಠಾನ ಸಮಿತಿ, ಸೇಡಂ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net