ಇಫ್ತಾರ್​ನಿಂದ ಶಾಂತಿ-ಸಹೋದರತ್ವ ಹೆಚ್ಚಳ

ಗುರುಮಠಕಲ್​ನ ಮೋಮಿನಪುರ ಮಜಿದ್​ನಲ್ಲಿ ಕಾಂಗ್ರೆಸ್​ನ ಜಿಲ್ಲಾ ಟಕದಿಂದ ಬುಧವಾರ ಆಯೋಜಿಸಿದ್ದ ಇಫ್ತಾರ್​ ಕೂಟದಲ್ಲಿ ಮಾಜಿ ಸಚಿವ ಬಾಬುರಾವ ಚಿಂಚನಸೂರ್​ ಜಿಲ್ಲಾ ಅಧ್ಯಕ್ಷ ಬಸರೆಡ್ಡಿ ಅನಪುರ, ಕೃಷ್ಣಾ ಚಪೆಟ್ಲಾ, ಎಸ್​ಕೆ ಮೈನೋದ್ಧೀನ್​, ಅಕ್ತರ್​ ಪ್ಯಾರೆ ಸಯ್ಯದ್​ ಬಾಬಾ ಇತರರಿದ್ದರು.
ಗುರುಮಠಕಲ್​ನ ಮೋಮಿನಪುರ ಮಜಿದ್​ನಲ್ಲಿ ಕಾಂಗ್ರೆಸ್​ನ ಜಿಲ್ಲಾ ಟಕದಿಂದ ಬುಧವಾರ ಆಯೋಜಿಸಿದ್ದ ಇಫ್ತಾರ್​ ಕೂಟದಲ್ಲಿ ಮಾಜಿ ಸಚಿವ ಬಾಬುರಾವ ಚಿಂಚನಸೂರ್​ ಜಿಲ್ಲಾ ಅಧ್ಯಕ್ಷ ಬಸರೆಡ್ಡಿ ಅನಪುರ, ಕೃಷ್ಣಾ ಚಪೆಟ್ಲಾ, ಎಸ್​ಕೆ ಮೈನೋದ್ಧೀನ್​, ಅಕ್ತರ್​ ಪ್ಯಾರೆ ಸಯ್ಯದ್​ ಬಾಬಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಚಿಂಚನಸೂರ್​ ಅಭಿಮತ
  • ಯಾದಗಿರಿಯಲ್ಲಿ ಜಿಲ್ಲಾ ಕಾಂಗ್ರೆಸ್​ನಿಂದ ಆಯೋಜನೆ
ಗುರುಮಠಕಲ್​: ರಂಜಾನ್​ ಹಬ್ಬದ ಹಿನ್ನೆಲೆಯಲ್ಲಿ ಆಯೋಜಿಸುವ ಇಫ್ತಾರ್​ ಕೂಟದಿಂದ ಶಾಂತಿ ಮತ್ತು ಸಹೋದರತ್ವ ಭಾವನೆ ಹೆಚ್ಚುತ್ತದೆ ಎಂದು ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಹಾಗೂ ಮಾಜಿ ಸಚಿವ ಬಾಬುರಾವ ಚಿಂಚನಸೂರ್​ ಹೇಳಿದರು.
ಪಟ್ಟಣದ ಮೋಮಿನಪುರ ಮಸೀದ್​ನಲ್ಲಿ ಕಾಂಗ್ರೆಸ್​ ಜಿಲ್ಲಾ ಟಕದಿಂದ ಬುಧವಾರ ಆಯೋಜಿಸಿದ್ದ ಇಫ್ತಾರ್​ ಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲ್ಲೆಡೆ ಇಂಥಹ ಇಫ್ತಾರ್​ ಕೂಟಗಳನ್ನು ಆಯೋಜಿಸಬೇಕು ಎಂದು ಅವರು ಹೇಳಿದರು.
ರಂಜಾನ್​ ಮಾಸದಲ್ಲಿ ಸರ್ವಧರ್ಮ ತತ್ವದ ಸಾರ ಅರಿಯಲು ಇಂತಹ ಸೌಹಾರ್ದತೆಯ ಕೂಟಗಳು ಬಹಳ ಅಗತ್ಯವಾಗಿವೆ. ಹಿರಿಯರು ಹಿಂದಿನಿಂದಲೂ ಎಲ್ಲ ಸಮುದಾಯದವರು ಶಾಂತಿ, ಸೌಹಾರ್ದತೆ ಹಾಗೂ ಸಹೋದರತ್ವದಿಂದ ಬದುಕಿದ್ದಾರೆ. ಅದೇ ಪರಂಪರೆ ನ್ನು ಮುಂದುವರೆಸುವ ಜವಾಬ್ದಾರಿ ಯುವಕರ ಮೇಲಿದೆ ಎಂದು ಹೇಳಿದರು.
ನಂತರ ಇಫ್ತಾರ್​ ಕೂಟದಲ್ಲಿ ಎಸ್​.ಕೆ ಮೈನೋದ್ದೀನ್​ ಮಾತನಾಡಿ, ರಂಜಾನ್​ ತಿಂಗಳು ಮಹತ್ವವಾದದ್ದು, ಉಪವಾಸದ ಮಹಿಮೆ ಹಾಗೂ ಮಾನವೀಯತೆ ಮತ್ತು ಸಹಾನುಭೂತಿಯ ಮಾನವರಲ್ಲಿ ಅಗತ್ಯ ಎಂದರು.
ಈ ವೇಳೆ ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಬಸರೆಡ್ಡಿ ಪಾಟೀಲ್​ ಅನಪುರ, ಬ್ಲಾಕ್​ ಅಧ್ಯಕ್ಷ ಕೃಷ್ಣ ಚಪೆಟ್ಲಾ, ನಿರಂಜನರೆಡ್ಡಿ, ಅಸೆಂಬ್ಲಿ ಅಧ್ಯಕ್ಷ ಸಯ್ಯದ್​ ಬಾಬಾ, ಬಾಬು ತಲಾರಿ, ನರಸಿಂಹರೆಡ್ಡಿ, ಸದರ್​ ಪಾಶಾಪ್ಯಾರೆ, ಹೈಮದ್​ ಪಾಟೀಲ್​, ಅಕ್ತರ ಪ್ಯಾರೆ, ವಹೀದ್​ ಚಿಂತಕುಂಟಿ, ಫಯಾಜ್​, ಚಾಂದಪಾಶಾ, ಅಧೀಲ್​, ಅನ್ವರ್​ ಹೈಮದ್​, ಮುಭಾರಕ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net