ಇಎಸ್‌ಐಎಸ್‌ ಆಯುಕ್ತ ಹುದ್ದೆಗೆ ನಿಯಮಬಾಹಿರವಾಗಿ ಐಎಫ್​ಎಸ್​ ಅಧಿಕಾರಿ ನೇಮಕ- illegally appointed to the post of ESIS Commissioner

ಇಎಸ್​ಐಎಸ್​​ ಆಯುಕ್ತಾಲಯ
ಇಎಸ್​ಐಎಸ್​​ ಆಯುಕ್ತಾಲಯ
Published on

ಬೆಂಗಳೂರು: ಕಾರ್ಮಿಕ ಇಲಾಖೆ ಅಧೀನದ ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ಆಯುಕ್ತ (ಇಎಸ್‌ಐಎಸ್‌ಎಂಎಸ್) ಹುದ್ದೆಗೆ ನಿಯಮಬಾಹಿರವಾಗಿ ಐಎಫ್​​ಎಸ್ ಅಧಿಕಾರಿ ಡಾ. ವೈ.ಕೆ. ದಿನೇಶ್ ಕುಮಾರ್ ಅವರನ್ನು 2025ರ ಸೆ.11ರಂದು ನೇಮಿಸಲಾಗಿದೆ.

ವೃಂದ ಮತ್ತು ನೇಮಕಾತಿ (ಸಿ ಆ್ಯಂಡ್ ಆರ್) ನಿಯಮ ಪ್ರಕಾರ ಇಎಸ್‌ಐಎಸ್ ಆಯುಕ್ತ ಹುದ್ದೆಯ ಸ್ಥಾನಮಾನವು ಹಿರಿಯ ಐಎಎಸ್​ ಶ್ರೇಣಿಯ ಅಧಿಕಾರಿ ಇರಬೇಕು. ಈ ಕುರಿತು ಕಾರ್ಮಿಕ ಇಲಾಖೆ 2025ರಲ್ಲಿ ಅಧಿಕೃತವಾಗಿ ನೋಟಿಫಿಕೇಶಷನ್ ಹೊರಡಿಸಿದೆ.
ಆದರೆ, ವೃಂದ ಮತ್ತು ನೇಮಕಾತಿ ನಿಯಮ ಉಲ್ಲಂಘಿಸಿ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ. ವೈ.ಕೆ. ದಿನೇಶ್ ಕುಮಾರ್ ಇಎಸ್‌ಐಎಸ್‌ ಆಯುಕ್ತ ಹುದ್ದೆಗೆ ತಂದು ಕೂರಿಸಲಾಗಿದೆ.
ಪ್ರತಿ ವರ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಇಲಾಖೆಗೆ ನೂರಾರು ಕೋಟಿ ರೂ.ಅನುದಾನ ಬರುತ್ತದೆ. ಈ ಅನುದಾನ ಬಳಸಿಕೊಂಡು ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ಆಯುಕ್ತಾಲಯದಲ್ಲಿ ಔಷಧ ಖರೀದಿಯಲ್ಲಿ ನಿಯಮಗಳು ಪಾಲನೆಯಾಗುತ್ತಿಲ್ಲ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net