ಕಾಂಗ್ರೆಸ್ ಎದುರಿಸಲು ವಿಪಕ್ಷಗಳಿಗೆ ಶಕ್ತಿ ಇಲ್ಲ: ಡಿ.ಕೆ.ಶಿವಕುಮಾರ್ ಆಕ್ರೋಶ- CM D K shivakumar
ಸಿಎಂ ಡಿ.ಕೆ.ಶಿವಕುಮಾರ್
Published on:
Copied
Follow Us
ಬೆಂಗಳೂರು: ಸದನದಲ್ಲಿ ಕಾಂಗ್ರೆಸ್ ಎದುರಿಸಲು ಪ್ರತಿಪಕ್ಷಗಳಿಗೆ ಶಕ್ತಿ ಇಲ್ಲ. ಸಚಿವ ನಾಗೇಂದ್ರ ಏಕೆ ರಾಜೀನಾಮೆ ಕೊಡಬೇಕು ಎಂಬುದರ ಬಗ್ಗೆ ನೋಟಿಸ್ ಕೊಟ್ಟು ಚರ್ಚಿಸಬೇಕು. ಅನಗತ್ಯವಾಗಿ ಸದನವನ್ನು ಹಾಳು ಮಾಡುತ್ತಿದ್ದಾರೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾನೂನು ಚೌಕಟ್ಟಿನಲ್ಲಿ ಅವರು ಏನು ಬೇಕಾದರೂ ಮಾಡಬಹುದು. ಆದರೆ, ಬಿಜೆಪಿಯವರು ಗೂಂಡಾಗಿರಿ ಮಾಡುತ್ತಿದ್ದಾರೆ. ಧರಣಿ, ಹೋರಾಟ ಮಾಡುವುದು ತಪ್ಪಿಲ್ಲ. ಆದರೆ, ನಾಗೇಂದ್ರ ಏಕೆ ರಾಜೀನಾಮೆ ಕೊಡಬೇಕು ಎಂಬುದರ ಬಗ್ಗೆ ನೋಟಿಸ್ ಕೊಟ್ಟು ಚರ್ಚಿಸದೆ ಅಧಿವೇಶನವನ್ನು ಸುಖಾಸುಮ್ಮನೆ ಹಾಳು ಮಾಡುತ್ತಿದ್ದಾರೆ. ವಿರೋಧ ಪಕ್ಷಗಳ ಶಾಸಕರಿಗೆ ಇದನ್ನು ಕೇಳಲು ತಾಳ್ಮೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿಯವರೆಗೆ ದೇಶದ ಯಾವ್ಯಾವ ಮುಖ್ಯಮಂತ್ರಿಗಳು, ಕೇಂದ್ರ ಮಂತ್ರಿಗಳು ಮತ್ತು ಸಚಿವರ ಮೇಲೆ ಕೇಸ್‌ಗಳಿವೆ ಎಂಬುದರ ಬಗ್ಗೆ ಅವರೇ ಹೇಳಲಿ. ಈ ದೇಶದಲ್ಲಿ ಸಾಕಷ್ಟು ಮಂತ್ರಿಗಳು ಮೇಲೆ ಕೇಸ್‌ಗಳಿವೆ. ಅವರು ರಾಜೀನಾಮೆ ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದ ಸಿಎಂ, ನಮ್ಮ ಪಕ್ಷದಿಂದ ಅತಿ ಹೆಚ್ಚು ಶಾಸಕರು ಆಯ್ಕೆಯಾಗಿರುವುದನ್ನು ಬಿಜೆಪಿಗೆ ಸಹಿಸಿಕೊಳ್ಳುತ್ತಿಲ್ಲ ಎಂದರು.
ಅದಾನಿ ಭೇಟಿ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ನಾನು ಸಿಎಂ ಆದ ಬಳಿಕ ಮೊದಲ ಬಾರಿಗೆ ಗೌತಮ್ ಅದಾನಿ ಅವರು ಸೌಜನ್ಯದಿಂದ ಭೇಟಿ ಮಾಡಿದ್ದಾರೆ.ಕರ್ನಾಟಕದಲ್ಲಿ ಬೇಕಾದಷ್ಟು ಅವರು ವ್ಯವಹಾರ ನಡೆಸುತ್ತಿದ್ದಾರೆ ಎಂದರು.