ಕಸ್ಕೊಟಾ ಕಂಡರೆ ತಕ್ಷಣ ಸುಟ್ಟು ಬಿಡಿ

ಚಿಂಚೋಳಿ ತಾಲೂಕಿನ ಕನಕಪುರದ ರೈತನೋರ್ವನ ಜಮೀನಿಗೆ ತೋಟಗಾರಿಕೆ ತಜ್ಞರು ಭೇಟಿ ನೀಡಿ ಕಸ್ಕೊಟಾ ಕಳೆ ತಳಿಯನ್ನು ಪರಿಶೀಲಿಸಿದರು. ಡಾ.ಜಹೀರ್​ ಅಹ್ಮದ್​, ಡಾ.ಪಂಡಿತ್​ ರಾಠೋಡ್​, ಡಾ.ಯುಸೂಫ್​ ಅಲಿ, ಡಾ.ಮಲ್ಲಿಕಾರ್ಜುನ ನಿಂಗದಳ್ಳಿ ಇತರರಿದ್ದರು.
ಚಿಂಚೋಳಿ ತಾಲೂಕಿನ ಕನಕಪುರದ ರೈತನೋರ್ವನ ಜಮೀನಿಗೆ ತೋಟಗಾರಿಕೆ ತಜ್ಞರು ಭೇಟಿ ನೀಡಿ ಕಸ್ಕೊಟಾ ಕಳೆ ತಳಿಯನ್ನು ಪರಿಶೀಲಿಸಿದರು. ಡಾ.ಜಹೀರ್​ ಅಹ್ಮದ್​, ಡಾ.ಪಂಡಿತ್​ ರಾಠೋಡ್​, ಡಾ.ಯುಸೂಫ್​ ಅಲಿ, ಡಾ.ಮಲ್ಲಿಕಾರ್ಜುನ ನಿಂಗದಳ್ಳಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಯಚೂರು ಕೃಷಿ ವಿವಿ ವಿಜ್ಞಾನಿಗಳು ಸಲಹೆ
  • ಗಾರಂಪಳ್ಳಿ, ಕನಕಪುರ ಗ್ರಾಮಗಳಿಗೆ ಭೇಟಿ
ಚಿಂಚೋಳಿ: ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ತೋಟಗಾರಿಕೆ ವಿಜ್ಞಾನಿಗಳ ತಂಡ ಬುಧವಾರ ಗಾರಂಪಳ್ಳಿ, ಕನಕಪುರ ಸೇರಿ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಕಸ್ಕೊಟಾ ಕಳೆ ತಳಿ ಪರಿಶೀಲನೆ ನಡೆಸಿದರು.
ಕಸ್ಕೊಟಾ ಮಾರಕ, ವಿಷಕಾರಿ ಕಳೆಯಾಗಿದ್ದು, ಪರಾವಲಂಬಿ ಸಸ್ಯವಾಗಿದೆ. ಕಸ್ಕೊಟಾ ಕಂಡು ಬಂದರೆ ತಕ್ಷಣವೇ ತೆಗೆದು ಸುಡಬೇಕು. ಎಲ್ಲೆಂದರಲ್ಲಿ ಬಿಸಾಡಬಾರದು, ಬೀಜ ನೆಲಕ್ಕೆ ಬಿದ್ದರೆ ಸುಮಾರು 10 ರಿಂದ 12 ವರ್ಷ ಜೀವಿಸುತ್ತದೆ. ರೈತರು ಜಾಗೃತಿ ವಹಿಸುವುದು ಅತ್ಯಗತ್ಯವಾಗಿದೆ. ಪರಿವರ್ತನೆ ಬೆಳೆ ಬಿತ್ತನೆಗೆ ಮುಂದಾಗಬೇಕು. ಈಗಾಗಲೇ ಕಸ್ಕೊಟಾ ಕಳೆ ಕುರಿತು ಸಂಶೋಧನೆ ನಡೆಯುತ್ತಿದ್ದು, ಔಷಧಿ ಇಲ್ಲ. ನಿಯಂತ್ರಣ ವಿಧಾನಗಳು ರೈತರು ಪಾಲಿಸಬೇಕು ಎಂದು ಸಲಹೆ ನೀಡಿದರು.
ಸಸ್ಯರೋಗ ಶಾಸ ವಿಭಾಗದ ಡಾ.ಜಹೀರ್​ ಅಹ್ಮದ್​, ಬೇಸಾಯ ಶಾಸ ವಿಭಾಗದ ಡಾ.ಪಂಡಿತ್​ ರಾಠೋಡ್​, ಕೃಷಿ ತಜ್ಞರಾದ ಡಾ.ಯುಸೂಫ್​ ಅಲಿ, ಡಾ.ಮಲ್ಲಿಕಾರ್ಜುನ ನಿಂಗದಳ್ಳಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಸಂತೋಷ ತಾಂಡೂರಕರ, ವಲಯ ಸಹಾಯಕ ನಿರ್ದೇಶಕ ಪ್ರಾಣೇಶ, ರೈತರಾದ ಪರ್ವತಕಮಾರ ದೇಸಾಯಿ, ಬಸಮ್ಮ ಗಾರಂಪಳ್ಳಿ, ರಾಕೇಶ ಶೆಟ್ಟಿ, ಲೋಕೇಶ ತಾಜಲಾಪುರ, ಗೋಪಾಲ ಎಂ.ಪಿ. ಇತರರಿದ್ದರು.
ಹೆಚ್ಚಿದ ವ್ಯಾಪ್ತಿ, ರೈತರಲ್ಲಿ ಆತಂಕ
ಚಿಂಚೋಳಿ ತಾಲೂಕಿನಲ್ಲಿ ಕಸ್ಕೊಟಾ ವ್ಯಾಪ್ತಿ ಹೆಚ್ಚಾಗುತ್ತಿದ್ದು, ಯಾವುದೇ ಬೆಳೆ ಬೆಳೆದರೂ ಸಸ್ಯ ಆವರಿಸಿಕೊಂಡು ಹಾನಿ ಮಾಡುತ್ತಿದೆ. ಈಗಾಗಲೇ ತೊಗರಿ, ಉದ್ದು, ಹೆಸರು, ಸೋಯಾ, ಈರುಳ್ಳಿಯನ್ನು ಕಸ್ಕೊಟಾ ಸಂಪೂರ್ಣ ಹಾನಿ ಮಾಡಿದೆ. ಇದೀಗ ತರಕಾರಿಗಳಾದ ಪಾಲಕ, ಮೆಣಸಿನಕಾಯಿ, ಮೆಂತೆ ಸೊಪ್ಪು, ಬದನೆಕಾಯಿ, ಗುಲಾಬಿ ಹೂ ಸೇರಿ ಇನ್ನಿತರ ಬೆಳೆಗಳಿಗೂ ಕಸ್ಕೊಟಾ ವಕ್ಕರಿಸಿದೆ. ಇದು ರೈತರಲ್ಲಿ ಆತಂಕ ಮೂಡಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net