ಪರಿಸರ ರಕ್ಷಿಸದಿದ್ದರೆ ವಿನಾಶ ಖಚಿತ

ಯಾದಗಿರಿಯ ಲಿಂಗೇರಿ ಕೋನಪ್ಪ ಶಿಕ್ಷಣ ಸಂಸ್ಥೆಯಲ್ಲಿ ವಿಜಯವಾಣಿ ಪತ್ರಿಕೆ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಿಜೆಪಿ ಯುವ ಟಕದ ಜಿಲ್ಲಾಧ್ಯಕ್ಷ ಶ್ರೀಧರ ಸಾಹುಕಾರ ನಗದು ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಿದರು. ಪ್ರಾಚಾರ್ಯ ಗುರಪ್ಪಚಾರ್ಯ ವಿಶ್ವಕರ್ಮ, ಮುಖ್ಯಗುರು ರಾಜು ಗುಂಜನೂರ, ವರದಿಗಾರ ಶರಣು ಗೊಬ್ಬುರ ಇತರರಿದ್ದರು.
ಯಾದಗಿರಿಯ ಲಿಂಗೇರಿ ಕೋನಪ್ಪ ಶಿಕ್ಷಣ ಸಂಸ್ಥೆಯಲ್ಲಿ ವಿಜಯವಾಣಿ ಪತ್ರಿಕೆ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಿಜೆಪಿ ಯುವ ಟಕದ ಜಿಲ್ಲಾಧ್ಯಕ್ಷ ಶ್ರೀಧರ ಸಾಹುಕಾರ ನಗದು ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಿದರು. ಪ್ರಾಚಾರ್ಯ ಗುರಪ್ಪಚಾರ್ಯ ವಿಶ್ವಕರ್ಮ, ಮುಖ್ಯಗುರು ರಾಜು ಗುಂಜನೂರ, ವರದಿಗಾರ ಶರಣು ಗೊಬ್ಬುರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧ್ಯಕ್ಷ ಸಾಹುಕಾರ ಕಳವಳ
  • ಲಿಂಗೇರಿ ಕೋನಪ್ಪ ಶಿಕ್ಷಣ ಸಂಸ್ಥೆಯಲ್ಲಿ ಪರಿಸರ ದಿನ
ಯಾದಗಿರಿ 
ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೊಡಿಸದಿದ್ದರೆ ವಿನಾಶದ ಕಾಲ ದೂರವಿಲ್ಲ ಎಂದು ಭಾರತೀಯ ಜನತಾ ಪಕ್ಷದ ಯುವ ಟಕದ ಜಿಲ್ಲಾಧ್ಯಕ್ಷ ಶ್ರೀಧರ ಸಾಹುಕಾರ ಕಳವಳ ವ್ಯಕ್ತಪಡಿಸಿದರು.
ರಾಜ್ಯದ ನಂ.1ಕನ್ನಡ ದಿನ ಪತ್ರಿಕೆ ವಿಜಯವಾಣಿ ಮತ್ತು ಲಿಂಗೇರಿ ಕೋನಪ್ಪ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ವಿಶ್ವ ಪರಿಸರ ದಿನ ನಿಮಿತ್ತ ಹಮ್ಮಿಕೊಂಡ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ನಗದು ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರಿಗೂ ನೀರು, ಗಾಳಿ, ಊಟ ಅಗತ್ಯವಾಗಿ ಬೇಕು. ಇದು ಸರಿಯಾದ ಪ್ರಮಾಣದಲ್ಲಿ ಸಿಗಬೇಕಾದರೆ ಪರಿಸರ ಕೂಡ ಅಷ್ಟೇ ಅಗತ್ಯವಾಗಿದೆ. ಅದನ್ನು ಉಳಿಸಿ ಬೆಳೆಸುವ ಕೆಲಸ ನಾವು, ನೀವೆಲ್ಲರೂ ಸೇರಿ ಮಾಡಿದಾಗ ಮಾತ್ರ ಸಾಧ್ಯ ಎಂದರು.
ಗಿಡ&ಮರಗಳು ಹೆಚ್ಚಾಗಿ ಬೆಳೆಸಬೇಕು. ಇದಕ್ಕಾಗಿ ನಾವೆಲ್ಲರೂ ನಮ್ಮ ಜನ್ಮದಿನದ ಖುಷಿಯಲ್ಲಿ ಒಂದೊಂದು ಸಸಿ ನೆಟ್ಟು ಅವುಗಳನ್ನು ಪೊಷಿಸಿದರೆ ಸ್ವಚ್ಛ ಪರಿಸರ ಹೆಚ್ಚಾಗಿ ನಾವೇಲ್ಲರೂ ಆರೋಗ್ಯದಿಂದ ಇರಲು ಸಾಧ್ಯ ಎಂದರು.
ಇಂದಿನ ಮಕ್ಕಳೇ ನಾಳಿನ ಭವ್ಯ ಭಾರತದ ನಾಗರಿಕರು ಎಂಬ ೂಷಣೆ ಜತೆ ಈಗ ಇಂದಿನ ಮಕ್ಕಳೇ ನಾಳಿ ಪರಿಸರ ಸಂರಕ್ಷಕರು ಎಂಬುದು ಸಹ ಚಾಲ್ತಿಗೆ ಬರಬೇಕು. ವರ್ಷವಿಡಿ ಪರಿಸರ ದಿನ ಆಚರಣೆ ಮಾಡುವಂತ ಕೆಲಸ ಜಾರಿಯಾಗಬೇಕು ಎಂದು ಮಾರ್ಮಿಕವಾಗಿ ಹೇಳಿದ ಅವರು, ಮಕ್ಕಳಲ್ಲಿ ಪರಿಸರದ ಜ್ಞಾನ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ವಿಜಯವಾಣಿ ಪತ್ರಿಕೆ ವಿಶ್ವ ಪರಿಸರ ದಿನ ನಿಮಿತ್ತ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿದ್ದು ಶ್ಲಾನೀಯ ಎಂದರು.
ಅತಿಥಿಗಳಾಗಿ ಮಾತನಾಡಿದ ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಗುರಪ್ಪಚಾರ್ಯ ವಿಶ್ವಕರ್ಮ, ವಿಜಯವಾಣಿ ಹಮ್ಮಿಕೊಂಡ ಈ ಸ್ವರ್ಧೆಯಲ್ಲಿ ಜಿಲ್ಲೆಯ ವಿವಿಧ ಶಾಲೆಯಗಳ ನೂರಾರು ಮಕ್ಕಳು ಭಾಗವಹಿಸುವ ಮೂಲಕ ತಮ್ಮಲ್ಲಿನ ಪರಿಸರ ಪ್ರಜ್ಞೆ ಅನಾವರಣಗೊಳಿಸಿದರು. ಮಕ್ಕಳು ಬಿಡಿಸಿದ ಚಿತ್ರಗಳು ಅದ್ಭುತವಾಗಿದ್ದವು. ಫಲಿತಾಂಶ ತೆಗೆಯಲು ನಿರ್ಣಾಯಕರು ಬಹಳ ಶ್ರಮ ವಹಿಸಬೇಕಾಯಿತು. ಸ್ಪರ್ಧೆಯಲ್ಲಿ ಬಹುಮಾನ ಬರಲಿಲ್ಲ ಎಂದು ಬೇಸರ ಮಾಡಿಕೊಳ್ಳದೆ ಮುಂದಿನ ವರ್ಷದ ತಯಾರಿ ಜೋರಾಗಿ ಮಾಡಿದರೇ ಬಹುಮಾನ ನಿಮ್ಮದೇ ಆಗುತ್ತದೆ ಎಂದು ಹೇಳುವ ಮೂಲಕ ಮಕ್ಕಳನ್ನು ಹುರಿದುಂಬಿಸಿದರು.
ಮುಖ್ಯಗುರು ರಾಜು ಗುಂಜನೂರ ಇದ್ದರು. ಜಿಲ್ಲಾ ವರದಿಗಾರ ಶರಣು ಗೊಬ್ಬುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿಯರಾದ ಮಮತಾ, ವಿಜಯಲಕ್ಷಿ$್ಮ , ಅಕ್ಷತಾ, ಮಂಜುಳಾ, ಸಾನಿಯಾ,, ಸಲ್ಮಾಂ ಹಾಗೂ ನಾಜಿಯಾ, ಆರ್​ ವಿ ಶಾಲೆಯ ಶಿಕ್ಷಕ ಶಂಕರ ಜೇವರ್ಗಿ ಸೇರಿದಂತೆಯೇ ಇತರರಿದ್ದರು.ಶಿಕ್ಷಕಿ  ಅಫ್ರೋಜ್​ ನಿರೂಪಿಸಿದರು.
ಆರ್​ವಿ ವಿದ್ಯಾಸಂಸ್ಥೆಗೆ ಪ್ರಥಮ ಬಹುಮಾನ
ಚಿತ್ರಕಲಾ ಸ್ಪರ್ಧೆಯಲ್ಲಿ ನಗರದ ಆರ್​.ವಿ.ವಿದ್ಯಾಸಂಸ್ಥೆಯ 7ನೇ ತರಗತಿ ವಿದ್ಯಾರ್ಥಿನಿ ಸಾಕ್ಷಿ ಜಡಿ ಪ್ರಥಮ ಸ್ಥಾನ ಪಡೆದರೆ, ಎಲ್​ಕೆಟಿ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ವಿಶಾಲಕ್ಷಿ ದ್ವೀತಿಯ ಸ್ಥಾನ ಮತ್ತು ಎಲ್​ಕೆಟಿ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಅಶ್ವಿನಿ ತೃತೀಯ ಸ್ಥಾನ ಪಡೆದರು. ಸ್ಪರ್ಧೆಯಲ್ಲಿ ಭಾಗವಹಿಸದ್ದ ಎಲ್ಲ ಮಕ್ಕಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಎಲ್​ಕೆಟಿ ಶಾಲೆ, ಆರ್​.ವಿ.ವಿದ್ಯಾ ಸಂಸ್ಥೆ, ವಿದ್ಯಾರಣ್ಯ ಶಾಲೆ, ಶಾಂತಿಸದನ ಶಾಲೆ, ಮಹಾತ್ಮಾ ಗಾಂಧಿ ಶಾಲೆ, ಸೆಂಚುರಿಯನ್​ ಶಾಲೆ, ರತ್ನಂ ಶಾಲೆ ಮತ್ತು ಶಹಾಪುರದ ನವೋದಯ ಶಾಲೆಯಲ್ಲಿ ನೂರಾರು ಮಕ್ಕಳು ಭಾಗವಹಿಸಿದ್ದರು.
"

ಎಲ್ಲ ಶಾಲೆಗಳಲ್ಲಿ ಚಿತ್ರಕಲೆಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ಸಿಗಬೇಕಿದೆ. ಕಲೆ ಎಲ್ಲರಲ್ಲೂ ಇರುತ್ತದೆ. ಅವರಿಗೆ ಒಂದು ವೇದಿಕೆ ಬೇಕು. ಅದು ಶಾಲೆಗಳಲ್ಲಿ ಕಡ್ಡಾಯವಾಗಿ ಸಿಕ್ಕರೆ ಮುಂದೆ ಕಲಾಜಗತ್ತಿನಲ್ಲಿ ಮಕ್ಕಳು ಉನ್ನತ ಹೆಸರು ಮಾಡುವ ಮೂಲಕ ಸಾಧನೆ ಮಾಡುತ್ತಾರೆ.

— > ಶ್ರೀಧರ ಸಾಹುಕಾರ ಜಿಲ್ಲಾಧ್ಯಕ್ಷ ಬಿಜೆಪಿ ಯುವ ಟಕ ಯಾದಗಿರಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net