ರಾಜ್ಯದ ಬರ ಪರಿಸ್ಥಿತಿ, ಕುಡಿಯುವ ನೀರು, ರೈತರ ಮತ್ತು ನೀರಾವರಿ ಸಮಸ್ಯೆ ಕುರಿತು ಚರ್ಚಿಸಲು ವಿಪಕ್ಷಗಳಿಗೆ ಮುಕ್ತ ಅವಕಾಶ ನೀಡಲಾಗಿತ್ತು. ಆದರೆ, ಸಚಿವ ನಾಗೇಂದ್ರ ರಾಜೀನಾಮೆ ಪ್ರಸ್ತಾಪಿಸಿ ಪ್ರತಿಭಟನೆ ನಡೆಸಿದರು. ನಿಯಮಾನುಸಾರ ನೋಟಿಸ್ ಸಲ್ಲಿಸಿ ಚರ್ಚಿಸಲು ಅವಕಾಶ ನೀಡುವುದಾಗಿ ಭರವಸೆ ನೀಡಿದೆ. ಆದರೂ ಬಿಎಸ್‌ಸಿ ಸಭೆ ನಿರ್ಧಾರ ಮೀರಿ ವಿಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸಿದರು. ಪ್ರತಿಭಟನೆ ಮಾಡುವುದು ಪ್ರತಿಪಕ್ಷದ ಹಕ್ಕಾಗಿದ್ದರೂ, ಕಲಾಪವೇ ನಡೆಯದಂತೆ ಮಾಡುವುದು ಸಂಸದೀಯ ವ್ಯವಸ್ಥೆಗೆ ಸೂಕ್ತವಲ್ಲ. ವಿಪಕ್ಷದವರನ್ನು ನಿಲ್ಲಿಸಿಕೊಂಡು ಕಾರ್ಯಕಲಾಪ ನಡೆಸುವುದು ಸಭಾಪತಿ ಪೀಠಕ್ಕೂ ಗೌರವವಲ್ಲ ಎಂದು ಸಲೀಂ ಅಹ್ಮದ್ ಅಭಿಪ್ರಾಯ ವ್ಯಕ್ತಪಡಿಸಿದರು.