ಜಾತಿ, ಧರ್ಮ, ಅಂಧಶ್ರದ್ಧೆಗಳನ್ನು ಮೀರಿ ಮನುಷ್ಯತ್ವವನ್ನು ಗೌರವಿಸಬೇಕು

ಜಿಲ್ಲಾಧಿಕಾರಿ ಕಚೇರಿ ಸಹಾಯಕರಾದ ಶಿವಪ್ರಭು ಹಿರೇಮಠ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರು ಶ್ರೀಮತಿ ಜಗದೀಶ್ವರಿ ಅ.ನಾಸಿ, ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಆರ್.ಬಿ.ಜಗದಾಳೆ, ಬೆಂಗಳೂರು ಕೆ.ಕೆ.ಎಮ್.ಪಿ. ರಾಜ್ಯ ಕಾನೂನು ಸಲಹೆಗಾರ ಸೂರ್ಯಕಾಂತ  ಕದಮ್, ಸಹದೇವ್ ಬೋಸ್ಲೆ, ಡಾ. ದಿನಕರ್ ಮೌರ್ಯ, ರವಿ ಸೂರ್ಯವಂಶಿ, ಭೀಮರಾಜ ರಾಜ್‌ಕುಮಾರ್ ಪಾಟೀಲ್, ಮುಕ್ಕಿಂದ ಜಾಧವ,  ಸುಭಾಷ್ ರಾವ್ ಜಾಧವ, ಚಂದ್ರಕಾಂತ್, ಅಮರನಾಥ. ಜೆ. ಭೋಸ್ಲೆ, ರಮೇಶ ಚಿಂಚಕೋಟೆ, ಅಭಿಮನ್ಯು. ಆರ್. ಫಾಲ್ಕೆ, ಆರ್.ಬಿ.ಜಗದಾಳೆ, ನಾರಾಯಣ ರಾವ್, ಸಂದೀಪ್. ಡಿ.ಭೋಸ್ಲೆ, ದಿನಕರ್ ಫಾಲ್ಕೆ, ರಾಜು. ಎಲ್. ಕಾಕಡೆ ಹಾಗೂ ಸಮಾಜದ ಮುಖಂಡರಾದ ಇತರರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಕಚೇರಿ ಸಹಾಯಕರಾದ ಶಿವಪ್ರಭು ಹಿರೇಮಠ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರು ಶ್ರೀಮತಿ ಜಗದೀಶ್ವರಿ ಅ.ನಾಸಿ, ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಆರ್.ಬಿ.ಜಗದಾಳೆ, ಬೆಂಗಳೂರು ಕೆ.ಕೆ.ಎಮ್.ಪಿ. ರಾಜ್ಯ ಕಾನೂನು ಸಲಹೆಗಾರ ಸೂರ್ಯಕಾಂತ ಕದಮ್, ಸಹದೇವ್ ಬೋಸ್ಲೆ, ಡಾ. ದಿನಕರ್ ಮೌರ್ಯ, ರವಿ ಸೂರ್ಯವಂಶಿ, ಭೀಮರಾಜ ರಾಜ್‌ಕುಮಾರ್ ಪಾಟೀಲ್, ಮುಕ್ಕಿಂದ ಜಾಧವ, ಸುಭಾಷ್ ರಾವ್ ಜಾಧವ, ಚಂದ್ರಕಾಂತ್, ಅಮರನಾಥ. ಜೆ. ಭೋಸ್ಲೆ, ರಮೇಶ ಚಿಂಚಕೋಟೆ, ಅಭಿಮನ್ಯು. ಆರ್. ಫಾಲ್ಕೆ, ಆರ್.ಬಿ.ಜಗದಾಳೆ, ನಾರಾಯಣ ರಾವ್, ಸಂದೀಪ್. ಡಿ.ಭೋಸ್ಲೆ, ದಿನಕರ್ ಫಾಲ್ಕೆ, ರಾಜು. ಎಲ್. ಕಾಕಡೆ ಹಾಗೂ ಸಮಾಜದ ಮುಖಂಡರಾದ ಇತರರು ಉಪಸ್ಥಿತರಿದ್ದರು.
Published on
ಕಲಬುರಗಿ: ಫೆ.19.(ಕ.ವಾ.) ಜಾತಿ, ಧರ್ಮ, ಅಂಧಶ್ರದ್ಧೆಗಳನ್ನು ಮೀರಿ ಮನುಷ್ಯತ್ವವನ್ನು ಗೌರವಿಸಬೇಕು. ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸಿ ‘ಹಿಂದವಿ ಸ್ವರಾಜ್ಯ' ವನ್ನು ಸ್ಥಾಪಿಸಿದ್ದಾರೆ ಎಂದು ತುಕೋಬಾರಾಯ ಸಾಹಿತ್ಯ ಪರಿಷತ್ತು ಸಂಘಟಕ ಸತೀಶ ಹಾನೇಗಾವ ಜಗದ್ಗುರು ವಿಶೇಷ ಉಪನ್ಯಾಸ ನೀಡಿದರು.
ಗುರುವಾರ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಭಾರತವು ದೀರ್ಘಕಾಲ ಮೊಘಲರು, ಆದಿಲ್ ಶಾಹಿ ಮತ್ತು ಬ್ರಿಟಿಷರ ಗುಲಾಮಗಿರಿಯಲ್ಲಿತ್ತು ಈ ಗುಲಾಮಗಿರಿಯಿಂದ ಮುಕ್ತಿ ಪಡೆಯಲು ಶಹಾಜಿ ರಾಜೇ ಭೋಸಲೆ ಅವರು ಹಿಂದವಿ ಸ್ವರಾಜ್ಯದ ಕನಸನ್ನು ಕಂಡಿದ್ದರು, ಎಂದರು.
ಯುದ್ಧ ಮತ್ತು ಅಸ್ಥಿರ ಜೀವನದಿಂದ ಅವರಿಗೆ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಅವರ ಆ ಕನಸನ್ನು ಶಿವಾಜಿ ಮಹಾರಾಜರು ನನಸು ಮಾಡಿದರು. ಒಳ್ಳೆಯ ವಿಚಾರಗಳು ಜಗತ್ತಿನಲ್ಲಿ ಎಂದಿಗೂ ಸಾಯುವುದಿಲ್ಲ. ಶಿವಾಜಿ ಮಹಾರಾಜರು ಅಂತಹ ಒಂದು ಶಾಶ್ವತ ವಿಚಾರಧಾರೆಯಾಗಿದರೆ ಎಂದು ಹೇಳಿದರು.
ಶಿವಾಜಿ ಮಹಾರಾಜರ ಜಯಂತಿಯನ್ನು ವಿಶ್ವದ 176 ದೇಶಗಳಲ್ಲಿ ಆಚರಿಸಲಾಗುತ್ತಿದೆ. ವಿಶಿಷ್ಟ ಆಡಳಿತ ಮತ್ತು ನೈತಿಕತೆ ಇತಿಹಾಸದ ಇತರ ಅನೇಕ ರಾಜರು ಕೇವಲ ಅಧಿಕಾರ, ಸಂಪತ್ತು ಮತ್ತು ಸ್ತ್ರೀಯರ ಭೋಗಕ್ಕಾಗಿ ರಾಜ್ಯಗಳನ್ನು ಕಟ್ಟಿದರು.ಆದರೆ ಶಿವಾಜಿ ಮಹಾರಾಜರ ಸ್ವರಾಜ್ಯವು ಸಂಪತ್ತು ಅಥವಾ ಅಧಿಕಾರಕ್ಕಾಗಿ ಇರಲಿಲ್ಲ ಅದು ಸಾಮಾನ್ಯ ಜನರ ಮಾನ-ಸನ್ಮಾನ ಮತ್ತು ಆತ್ಮಗೌರವದ ರಕ್ಷಣೆಗಾಗಿ ಸ್ಥಾಪಿಸಿದ್ದಾರೆ ಎಂದು ತಿಳಿಸಿದ್ದರು.
ಜಗತ್ತಿನ ಯಾವುದೇ ಶ್ರೇಷ್ಠ ನಾಯಕರೊಂದಿಗೆ ಹೋಲಿಸಿದರೂ, ಶಿವಾಜಿ ಮಹಾರಾಜರ ಚಾರಿತ್ರ‍್ಯ ಮತ್ತು ನೈತಿಕತೆ ಅತ್ಯುನ್ನತವಾದುದು. ಜಾಗತಿಕ ಪ್ರಭಾವ ಮತ್ತು ನಾಯಕರಿಗೆ ಸ್ಫೂರ್ತಿ ನೇತಾಜಿ ಸುಭಾಷ್ ಚಂದ್ರ ಬೋಸ್, ಯುವಕರು ನಿರಾಶೆಯಲ್ಲಿದ್ದಾಗ ಶಿವಾಜಿ ಮಹಾರಾಜರ ಚರಿತ್ರೆಯನ್ನು ಓದಬೇಕು, ಅವರಿಗೆ ಹೊಸ ಶಕ್ತಿ ನೀಡುತ್ತದೆ ಎಂದು ನೇತಾಜಿ ಹೇಳುತ್ತಿದ್ದರು ಎಂದು ತಿಳಿಸಿದರು.
ಮೊಘಲರು, ಆದಿಲ್ ಶಾಹಿ ಮತ್ತು ಡಚ್ಚರಂತಹ ವಿದೇಶಿ ಶಕ್ತಿಗಳು ಭಾರತವನ್ನು ಆಳಿದರೂ, ನೌಕಾಪಡೆಯ ಪ್ರಾಮುಖ್ಯತೆಯನ್ನು ಮೊದಲು ಗುರುತಿಸಿದವರು ಶಿವಾಜಿ ಮಹಾರಾಜರು. ಶತ್ರುಗಳಿಂದ ರಕ್ಷಿಸಿಕೊಳ್ಳಲು ಅವರು ಸಿಂಧುದುರ್ಗ ಮತ್ತು ವಿಜಯದುರ್ಗದಂತಹ ಕೋಟೆಗಳನ್ನು ನಿರ್ಮಿಸಿ ಭಾರತೀಯ ನೌಕಾಪಡೆಗೆ ಬುನಾದಿ ಹಾಕಿದಾರೆ. ಬ್ರಿಟಿಷರು ಕೂಡ ಮಹಾರಾಜರ ಪ್ರಭಾವವನ್ನು ಗುರುತಿಸಿದ್ದರು. ಭಾರತೀಯರನ್ನು ಸೈನ್ಯಕ್ಕೆ ಸೇರಿಸಿಕೊಳ್ಳುವಾಗ, ಅವರು ಶಿವಾಜಿ ಮಹಾರಾಜರ ಹೆಸರಿನಲ್ಲಿ ಪ್ರಮಾಣ ವಚನ ಬೋಧಿಸುತ್ತಿದ್ದರು. "ಭಾರತ" ಎನ್ನುವ ಪದಕ್ಕೆ ಪರ್ಯಾಯವಾಗಿ ಅವರು "ಶಿವಾಜಿ" ಎಂಬ ಹೆಸರನ್ನು ಬಳಸುತ್ತಿದ್ದರು ಎಂಬುದು ಅವರ ವ್ಯಕ್ತಿತ್ವದ ಹಿರಿಮೆಯನ್ನು ತೋರಿಸುತ್ತದೆ ಎಂದು ಹೇಳಿದರು.
ಶಿವಾಜಿ ಮಹಾರಾಜರು ಕೇವಲ ವೀರ ಯೋಧರಲ್ಲ, ಅವರು ದೂರದೃಷ್ಟಿಯ ಮತ್ತು ವೈಜ್ಞಾನಿಕ ದೃಷ್ಟಿಕೋನವುಳ್ಳ ನಾಯಕರಾಗಿದ್ದರು. ಒಮ್ಮೆ ಮಹಮ್ಮದ್ ಸಯೀದ್ ಎಂಬ ಅಶ್ವ ತಜ್ಞರು ಬಿಳಿ ಮಚ್ಚೆಗಳಿರುವ ಕುದುರೆಗಳು ಅಶುಭ ಎಂದು ಅವುಗಳನ್ನು ಬೇರ್ಪಡಿಸಿದ್ದರು. ಮಹಾರಾಜರು ಆ ಕುದುರೆಯನ್ನೇ ಏರಿ ಸವಾರಿ ಮಾಡುವ ಮೂಲಕ, ಕುದುರೆಯ ಸಾಮರ್ಥ್ಯ ಮುಖ್ಯವೇ ಹೊರತು ಅದರ ಮೇಲಿನ ಮಚ್ಚೆಗಳಲ್ಲ ಎಂದು ತೋರಿಸಿಕೊಟ್ಟರು. ಶಿವಾಜಿ ಅವರ ಆದರ್ಶ ಮತ್ತು ತತ್ವಗಳನ್ನು ಇಂದಿನ ಯುವಕರು ಆಳವಡಿಸಿಕೊಳ್ಳಬೇಕೆ ಎಂದು ತಿಳಿಸಿದರು.
ಶಿವಜಿ ಜಯಂತಿಯ ದೊಡ್ಡ ಯಶಸ್ಸು ಎನೆಂದರೆ ರಮೇಶ್ ರಾವ್ ಚಿಂಚಕೋಟಿ ಅವರು ಬರೆದ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆ ಎಂಬ ಕನ್ನಡ ಭಾಷೆ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net