ಕಲಬುರಗಿ: ನಗರದ ನಾಗಂಬಿಕಾ ಬಿಇಡಿ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯಕ್ಕೆ 6ನೇ ರಾಂಕ್ ಪಡೆದ ವಿದ್ಯಾರ್ಥಿನಿ ಮಂದಾರ ಅಂಬಣ್ಣ ತಳವಾರ ಸನ್ಮಾನ, ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಬುಧವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೈತ ಮುಖಂಡ ದಯಾನಂದ ಪಾಟೀಲ್, ವಿದ್ಯಾರ್ಥಿಗಳಿಗೆ ಓದುವ ಆಸಕ್ತಿ ಮುಖ್ಯ. ಉತ್ತಮ ಗುರುಗಳ ಮಾರ್ಗದರ್ಶನದಿಂದ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವುದು ವಿದ್ಯಾರ್ಥಿಗಳ ಕರ್ತವ್ಯ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ದೇಶದ ಭವಿಷ್ಯ ರೂಪಿಸುವ ಶಿಕರಾಗಬೇಕು. ವಿಶೇಷವಾಗಿ ರೈತರ ಮಕ್ಕಳು ಶಿಕರಾಗಿ ಸಮಾಜದಲ್ಲಿ ವಿದ್ಯೆ ಮತ್ತು ಧರ್ಮದ ಮಾರ್ಗದಲ್ಲಿ ಮಕ್ಕಳನ್ನು ನಡೆಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಅಧ್ಯತೆ ವಹಿಸಿದ್ದ ಸರ್ಕಾರಿ ಶಿಣ ಶಿಕರ ಬಿಇಡಿ ಕಾಲೇಜಿನ ಶಿವರಾಚಪ್ಪ ವಾಲಿ ಮಾತನಾಡಿ, ವಿದ್ಯಾರ್ಥಿಗಳು ಗುರುಗಳು ನೀಡುವ ಮಾರ್ಗದರ್ಶನದಲ್ಲಿ ನಡೆದುಕೊಂಡರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಗುರುಗಳನ್ನು ಭಯದಿಂದಲ್ಲ, ಭರವಸೆಯಿಂದ ನೋಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರೇಣುಕಾ ಪುರಾಣಿಕ, ಶ್ವೇತಾ ಸಾಲಿಮಠ ಹಾಗೂ ರಾಜೇಶ್ವರಿ ಚೌವ್ಹಾಣ ಅವರನ್ನು ಸತ್ಕರಿಸಲಾಯಿತು. ಜತೆಗೆ ದ್ವೀತಿಯ ವರ್ಷದ ವಿದ್ಯಾರ್ಥಿಗಳು ನೂತನ ವಿದ್ಯಾರ್ಥಿಗಳಿಗೆ ಹೂವು ನೀಡುವ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು. ವಿಜಯಕುಮಾರ ಮಡಿವಾಳ, ಸಂತೋಷ ರಾಥೋಡ, ಸಬಿಯಾ ಸುಲ್ತಾನಾ, ಮಹಾನಂದ ಇತರರಿದ್ದರು.