ಕಿತ್ತೂರಿನ ಇತಿಹಾಸ ಸಾರಲಿದೆ "ಥೀಮ್ ಪಾರ್ಕ್' : ಚನ್ನಮ್ಮನ ಕಿತ್ತೂರಿನ ಇತಿಹಾಸವನ್ನು ದೇಶವೇ ಬಂದು ಕಣ್ತುಂಬಿಕೊಳ್ಳುವಂತೆ ಮಾಡಬೇಕೆಂಬ ಕನಸಿದೆ. ಕಿತ್ತೂರಿನ ಇತಿಹಾಸ ಅರಿಯಲು ಆಸಕ್ತಿಯಿಂದ ಬರುತ್ತಿದ್ದ ಜನರು ನಿರಾಸೆಯಿಂದ ಹೋಗಬೇಕಿತ್ತು. ಆದರೆ, ಈಗ ಕಿತ್ತೂರಿನ ಕೋಟೆ ಹಾಗೂ ಅರಮನೆ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ಜತೆಗೆ ಕಿತ್ತೂರಿನಲ್ಲಿ "ಥೀಮ್ ಪಾರ್ಕ್' ಯೋಜನೆ ಮಾಡಲಾಗಿದೆ. ಕಿತ್ತೂರಿನ ಇತಿಹಾಸ, ಪರಂಪರೆ ಸಾರಲಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ತಿಳಿಸಿದರು.
ತಹಸೀಲ್ದಾರ್ ಕಲಗೌಡ ಪಾಟೀಲ, ಸಿಪಿಐ ಶಿವಾನಂದ ಗುಡುಗನಟ್ಟಿ, ೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಗಾಯತ್ರಿ ಅಜ್ಜನವರ, ತಾಪಂ ಇಒ ನಿಂಗಪ್ಪ ಮಸಳಿ, ಪ್ರಾಚಾರ್ಯ ಡಾ.ಬಸವರಾಜ ಹೊಸಮನಿ, ಕಸಾಪ ತಾಲೂಕಾಧ್ಯಕ್ಷ ಡಾ.ಎಸ್.ಬಿ.ದಳವಾಯಿ, ವಸ್ತು ಸಂಗ್ರಹಾಲಯದ ಮೇಲ್ವಿಚಾರಕ ರಾವೇಂದ್ರ, ಗಣ್ಯರಾದ ವೈಶಾಲಿ ಅಳಗುಂಡಿ, ಮಂಜುನಾಥ ಕಳಸಣ್ಣವರ, ಬಿ.ಸಿ.ಬಿದರಿ ಇತರರಿದ್ದರು.