ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಎಚ್ಚರಿಕೆ
ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಕಲಬುರಗಿ: ಹಿಂದೂ ಧರ್ಮ ಅಪಾಯದ ಅಂಚಿನಲ್ಲಿದ್ದರೂ ಸಮಾಜ ನಿರಮ್ಮಳವಾಗಿ ಮಲಗಿದೆ. ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ತಪ್ಪಿದ್ದಲ್ಲ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಎಚ್ಚರಿಸಿದರು.
ನಗರದ ಶಹಾಬಜಾರ್ ಕಡಗಂಚಿ ಮಠದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಶ್ರೀರಾಮ ಸೇನೆ ಜಿಲ್ಲಾ ಟಕದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದ ಒಂಬತ್ತು ಜಿಲ್ಲೆಗಳಲ್ಲಿ ಮುಸ್ಲಿಂ ಸಮುದಾಯ ಆಡಳಿತ ನಡೆಸುತ್ತಿದೆ. ಕೇರಳದಲ್ಲಿ ಶೇ.40 ಮಾತ್ರ ಹಿಂದೂಗಳು ಉಳಿದಿದ್ದಾರೆ. ಶಿವಾಜಿ ಮಹಾರಾಜ್, ಗಣೇಶೋತ್ಸವ ಮೆರವಣಿಗೆ ಮೇಲೆ ಕಲ್ಲು, ಚಪ್ಪಲಿ ತೂರಾಟ ನಡೆದಿದೆ. ಪೆಹಲ್ಗಾಮ್ ದಾಳಿಯಲ್ಲಿ 26 ಹಿಂದೂಗಳನ್ನು ಕೊಂದಿದ್ದಲ್ಲದೆ ಎಲ್ಲೆಡೆ ದೌರ್ಜನ್ಯ ಹೆಚ್ಚುತ್ತಿದೆ. ಆದರೂ ಹಿಂದೂ ಮಲಗಿಕೊಂಡಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು.
ಹಿಂದೂಗಳು ಸ್ವಾಭಿಮಾನ, ಧೈರ್ಯದಿಂದ ತಲೆಯೆತ್ತಿ ನಡೆಯುವುದರ ಜತೆ ಅದೇ ರೀತಿ ಬದುಕಬೇಕು. ಈ ದೇಶದ ಅನ್ನ ತಿಂದು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದರೂ ಹಿಂದೂಗಳಿಗೆ ಏನೂ ಅನಿಸುವುದಿಲ್ವ? ರಾಜಕಾರಣಿಗಳು ವೈಚಾರಿಕ ಭ್ರಷ್ಟತೆಗೆ ಇಳಿದಿದ್ದಾರೆ. ಶತ್ರುಗಳು ಬಹಿರಂಗವಾಗಿ ಬಂದರೂ ರಾಜಕಾರಣಿಗಳಿಗೆ ಕಾಣಿಸುವುದೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
370 ವಿಧಿ ರದ್ದು ಮಾಡಿದ್ದು ಸರಿ. ಆದರೆ ಕಾಶ್ಮೀರದಿಂದ ಏಳು ಲ ಹಿಂದೂಗಳು ಓಡಿ ಹೋಗಿ 36 ವರ್ಷವಾಗಿದೆ. ಅದಕ್ಕೆ ಪರಿಹಾರ ಏನು ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕು ಎಂದು ಒತ್ತಾಯಿಸಿದ ಅವರು, ಶ್ರೀರಾಮ ಸೇನೆ 21 ವರ್ಷಗಳಿಂದ ಹಿಂದೂ ಸಮಾಜದಲ್ಲಿ ಜಾಗೃತಿ ಮೂಡಿಸಿ ಒಗ್ಗೂಡಿಸಲು ಶ್ರಮಿಸುತ್ತಿದೆ. ಈ ನಡುವೆ ಅನೇಕರು ಬಂದುಹೋದರೂ ಸಂಟನೆ ನಿರಂತರ ತನ್ನ ಕೆಲಸ ಮುಂದುವರಿಸಿ ನಂ.1 ಸ್ಥಾನದಲ್ಲಿದೆ. ನನ್ನ ವಿರುದ್ಧ 121 ಕೇಸ್ಗಳಿದ್ದು, ಸಾವಿರ ಕೇಸ್ ಹಾಕಿದರೂ ಈ ಮುತಾಲಕ್ನ ದನಿ ಅಡಗುವುದಿಲ್ಲ ಎಂದು ಗುಡುಗಿದರು.
ನಮ್ಮ ಸಂಪ್ರದಾಯದಲ್ಲಿ ಶಸಪೂಜೆಗೆ ಪ್ರಾಧಾನ್ಯ ಇದೆ. ತಲ್ವಾರ್, ಖಡ್ಗ, ಚಾಕು, ಕೊಡಲಿಗಳಿಗೆ ಪೂಜೆ ಸಲ್ಲಿಸಬೇಕು. ಆದರೆ ಇವೆಲ್ಲ ಕಣ್ಮರೆಯಾಗುತ್ತಿರುವುದು ನೋವಿನ ಸಂಗತಿ ಎಂದ ಅವರು, ವೋಟ್ಬ್ಯಾಂಕ್ ರಾಜಕಾರಣ ಹೆಚ್ಚಿದೆ. ಮುಸ್ಲಿಮರು ಹೆಚ್ಚಿರುವ ೇತ್ರದಲ್ಲಿ ಸಿದ್ದರಾಮಯ್ಯ ಸೇರಿ ಯಾವೊಬ್ಬ ಹಿಂದೂ ರಾಜಕಾರಣಿ ನಿಂತು ಗೆಲ್ಲಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಮಾಶಾಳ ಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಮರುಳಾರಾಧ್ಯ ಶಿವಾಚಾರ್ಯ ಮಾತನಾಡಿ, ಶ್ರೀರಾಮ ಸೇನೆ ಶಕ್ತಿ ಕಂಡು ಕೆಲವರು ಉರಿದುಕೊಳ್ಳುತ್ತಿದ್ದಾರೆ. ಹಿಂದೂ ಜಾಗೃತಿಗಾಗಿ ಸಂಟಿತರಾಗಿ ಇತಿಹಾಸ ಸೃಷ್ಟಿ ಮಾಡಬೇಕು ಎಂದು ಕರೆ ನೀಡಿದರು.
ಶ್ರೀರಾಮ ನವಮಿ ಉತ್ಸವ ಸಮಿತಿ ಅಧ್ಯಕ್ಷ ರಾಜು ಭವಾನಿ ಮಾತನಾಡಿ, ಸನಾತನ ಹಿಂದೂ ಧರ್ಮ ರಕ್ಷಣೆಗೆ ಅವಿರತ ದುಡಿಯುತ್ತಿರುವ ಈ ಸಂಟನೆ ಕೈಬಲಪಡಿಸಬೇಕಿದೆ. ಮನೆ ಮಠ ಬಿಟ್ಟು ಹಿಂದೂಗಳ ರಕ್ಷಣೆ, ಜಾಗೃತಿಗಾಗಿ ಪ್ರಮೋದ ಮುತಾಲಿಕ್ ಟೊಂಕಕಟ್ಟಿ ನಿಂತಿದ್ದಾರೆ. ಇವರಿಗೆ ಬಲ ತುಂಬುವ ಕೆಲಸ ನಾವು ನೀವೆಲ್ಲ ಸೇರಿ ಮಾಡೋಣ ಎಂದರು.
ಚಿಂತಕಿ ಚಡಚಣ ಭಾಗ್ಯಗೌಡ ದಿಕ್ಸೂಚಿ ಭಾಷಣ ಮಾಡಿದರು. ಬಿಜೆಪಿ ಮುಖಂಡ ಮಣಿಕಂಠ ರಾಠೋಡ್, ನ್ಯಾಯವಾದಿ ಶಿವಕುಮಾರ ಸೀರಿ, ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ್ ನರಿಬೋಳ ಮಾತನಾಡಿದರು. ಮಕ್ತಂಪುರ ಗದ್ದುಗೆ ಮಠದ ಶ್ರೀ ಚರಲಿಂಗ ಮಹಾಸ್ವಾಮೀಜಿ, ದತ್ತನ ಆರಾಧಕ ದೀಪಕ ನಾತೆ ಇತರರಿದ್ದರು. ಜೇವರ್ಗಿ ಟಕದ ಅಧ್ಯಕ್ಷ ಆನಂದ ದೇಸಾಯಿ ಪ್ರಾಸ್ತಾವಿಕ ಮಾತನಾಡಿದರು. ಸೇನೆ ಜಿಲ್ಲಾಧ್ಯಕ್ಷ ಲಕ್ಷೀಕಾಂತ ಸ್ವಾದಿ ಸ್ವಾಗತಿಸಿದರು.
ತಾಯಂದಿರು ಮಕ್ಕಳಿಗೆ ಸಂಸತಿ ಸಂಸ್ಕಾರ ಹೇಳಿಕೊಡಬೇಕು. ಲವ್ ಜಿಹಾದ್ ಬಗ್ಗೆ ಎಚ್ಚರದಿಂದ ಇರಬೇಕು. ಪುರಾತನ ಇತಿಹಾಸ ಹೊಂದಿರುವ ಹಿಂದೂ ಧರ್ಮ ಉಳಿಸಿ ಬೆಳೆಸಲು ಮಹಿಳೆಯರು ನೆರವಾಗಬೇಕು. ದೇಶ, ಧರ್ಮ ರಕ್ಷಣೆಗೆ ಎಲ್ಲರೂ ಸಂಟಿತರಾಗಬೇಕು.