ಬಸವಕಲ್ಯಾಣ: ನಗರದಲ್ಲಿ ಜೂ.28ರಂದು ಹಮ್ಮಿಕೊಳ್ಳಲಾಗಿರುವ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶದ ಪ್ರಚಾರ ಕಾರ್ಯಕ್ಕೆ ನಗರದಲ್ಲಿ ಶನಿವಾರ ಚಾಲನೆ ನೀಡಲಾಯಿತು. ನಗರದ ಬಿಡಿಪಿಸಿ ಕಚೇರಿ, ಭಾಂಡೆ ಬಜಾರ್, ಸರಾಫ್ ಬಜಾರ್, ಎಪಿಎಂಸಿ ಮಾರುಕಟ್ಟೆ, ಕಿರಾಣ ಬಜಾರ್, ತರಕಾರಿ&ಹಣ್ಣು ಮಾರ್ಕೆಟ್, ಅಡತ್ ಬಜಾರ್ ಸೇರಿ ನಾನಾ ಕಡೆ ಸಮಾವೇಶದ ಸಂಟಕರು ಭೇಟಿ ನೀಡಿ ಪೋಸ್ಟರ್ಗಳನ್ನು ವಿತರಿಸಿ ಆಹ್ವಾನಿಸಿದರು. ಸಮಾವೇಶದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಗುಂಡುರಡ್ಡಿ ಕಮಲಾಪುರೆ, ಪ್ರಮುಖರಾದ ಸುನೀಲ ಪಾಟೀಲ್, ಎಪಿಎಂಸಿ ಮಾಜಿ ಸಿದ್ರಾಮಪ್ಪ ಗುದಗೆ, ದೀಪಕ ಗಾಯಕವಾಡ, ಗಿರೀಶ ತಾಂಬೋಳೆ, ರಾಜು ಸುಗರೆ, ಅನಿಲ ಹಲಶೆಟ್ಟೆ, ಶ್ರೀಕಾಂತ ಮಂಠಾಳ, ದತ್ತು ಭೇಂಡೆ, ಸತೀಶ ಮಟಗೆ, ಹಣಮಂತ ಅಂಬುಲಗೆ, ಮನೋಜ ಮಾಶೆಟ್ಟೆ, ಸಂದೀಪ ಪಾಟೀಲ್, ರೇಖಾ ಹೊಸಮನಿ ಇತರರು ಪಾಲ್ಗೊಂಡಿದ್ದರು.