ಹಿಜಾಬ್​ಗೆ ಅನುಮತಿ, ಶ್ರೀರಾಮ ಸೇನೆ ಕಿಡಿ

ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್​ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಲಕ್ಷಿ$್ಮಕಾಂತ ಸ್ವಾದಿ, ಶಿವಕುಮಾರ ಸಗರ, ಅಂಬಾಜಿ, ವೀರೇಶ ಕೊರಳ್ಳಿ, ಗಣೇಶ ರಾಠೋಡ್​, ಮಹೇಶ ಕೆಂಭಾವಿ, ಪ್ರಶಾಂತ ಶಿರೂರ್​ ಇತರರಿದ್ದರು
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್​ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಲಕ್ಷಿ$್ಮಕಾಂತ ಸ್ವಾದಿ, ಶಿವಕುಮಾರ ಸಗರ, ಅಂಬಾಜಿ, ವೀರೇಶ ಕೊರಳ್ಳಿ, ಗಣೇಶ ರಾಠೋಡ್​, ಮಹೇಶ ಕೆಂಭಾವಿ, ಪ್ರಶಾಂತ ಶಿರೂರ್​ ಇತರರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ
  • ಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಕೆ
ಕಲಬುರಗಿ: ಹಿಜಾಬ್​ ಕುರಿತಂತೆ ಕರ್ನಾಟಕ ಹೈಕೋರ್ಟ್​ ಸಮವಸದ ಭಾಗವಲ್ಲ ಎಂದು ತೀರ್ಪು ನೀಡಿದ್ದು, ರಾಜ್ಯ ಸರ್ಕಾರ ಅನುಮತಿ ಕಲ್ಪಿಸುವ ಮೂಲಕ ಕೋರ್ಟ್​ ಆದೇಶದ ವಿರುದ್ಧ ನಡೆದುಕೊಂಡಿದೆ ಎಂದು ಶ್ರೀರಾಮಸೇನೆ ಕಾರ್ಯಕರ್ತರು ಕಿಡಿಕಾರಿದರು.
ರಾಜ್ಯ ಸರ್ಕಾರ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್​ಗೆ ಅನುಮತಿ ನೀಡಿರುವುದನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪ್ರಮುಖರು ಮಾತನಾಡಿ, ಶಾಲೆ, ಕಾಲೇಜುಗಳ ಸಮವಸ ಮತ್ತು ಶಿಸ್ತು ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರ ಎಸ್​ಡಿಎಂಸಿ ಮತ್ತು ಸಂಬಂಧಿಸಿದ ಸಂಸ್ಥೆಗಳ ಸಮಿತಿಗಳಿಗೆ ಇದೆ. ರಾಜ್ಯದಲ್ಲಿ ಕೇವಲ ಮುಸ್ಲಿಂ ಸಮುದಾಯದ ತುಷ್ಠೀಕರಣದ ರಾಜಕೀಯ ನಡೆದಿದೆ. ವಿದ್ಯಾರ್ಥಿಗಳಲ್ಲಿ ಸಮಾನತೆ ಮತ್ತು ಏಕತೆ ಕಾಣುವ ಉದ್ದೇಶದಿಂದ ಹಿಂದಿನ ಪ್ರಧಾನಿ ಇಂದಿರಾಗಾಂಧಿ ಅವಧಿಯಲ್ಲಿ ಸಮವಸ ಜಾರಿಗೆ ಬಂದಿದೆ ಎಂದರು.
ಶಿವದಾರ, ಜನಿವಾರ, ರುದ್ರಾಕ್ಷಿಯನ್ನು ಅನವಶ್ಯಕ ಜೋಡಿಸಿ ಹಿಂದು ಸಮಾಜ ದಿಕ್ಕು ತಪ್ಪಿಸುವ ಕೆಲಸ ನಡೆದಿದೆ. ಆದರೆ ಬಟ್ಟೆಯ ಒಳಭಾಗದಲ್ಲಿ ಧರಿಸುವ ವೈಯಕ್ತಿಕ ಆಚರಣೆಗಳಾಗಿದ್ದು, ಅವುಗಳಿಗೆ ಸಮವಸದ ಹೊರಾಂಗಣ ನಿಯಮಗಳಿಗೆ ಯಾವುದೇ ಸಂಬಂಧ ಇಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ ನೀತಿ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಹಿಜಾಬ್​ ಅನುಮತಿ ನೀಡಬಾರದು. ಶಾಂತಿ, ಶಿಸ್ತು ಮತ್ತು ವಿದ್ಯಾರ್ಥಿಗಳ ಏಕತೆಯ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ಲಕ್ಷಿ$್ಮಕಾಂತ ಸ್ವಾದಿ, ಪ್ರಮುಖರಾದ ಶಿವಕುಮಾರ ಸಗರ, ಅಂಬಾಜಿ, ವೀರೇಶ ಕೊರಳ್ಳಿ, ಗಣೇಶ ರಾಠೋಡ್​, ಮಹೇಶ ಕೆಂಭಾವಿ, ಪ್ರಶಾಂತ ಶಿರೂರ್​, ಶರಣು ಶಿರೂರ್​, ಸಾಯಿನಾಥ ಸಾಶೆಟ್ಟಿ, ರಾಜು ವಾ್ಮೂರೆ, ಚನ್ನವಿರ ಬಿರಾದಾರ್​, ಸಂಗಮೇಶ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net