ಸರ್ಕಾರದ ಕ್ರಮಕ್ಕೆ ಹೈಕೋರ್ಟ್​ ತಡೆ

ಹರ್ಷಾನಂದ ಗುತ್ತೇದಾರ್
ಹರ್ಷಾನಂದ ಗುತ್ತೇದಾರ್
Published on

ಪ್ರಮುಖ ಮುಖ್ಯಾಂಶಗಳು

  • ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್​ ಸಂತಸ
  • ಕೈ ನಾಯಕರು ಕೋರ್ಟ್​ಗೆ ಗೌರವ ಕೊಡಲಿ
ಆಳಂದ: ಕಾಂಗ್ರೆಸ್​ ಸರ್ಕಾರ ಇತ್ತೀಚಿಗೆ ವಿವಿಧ ಗಂಭೀರ ಕ್ರಿಮಿನಲ್​ ಪ್ರಕರಣಗಳನ್ನು ಹಿಂಪಡೆಯಲು ಕೈಗೊಂಡ ಕ್ರಮಕ್ಕೆ ರಾಜ್ಯ ಹೈಕೋರ್ಟ್​ ತಡೆಯಾೆ ನೀಡಿರುವುದು ಕಾನೂನಿನ ಆಳ್ವಿಕೆ ಹಾಗೂ ನ್ಯಾಯಾಂಗದ ಮೇಲಿನ ಜನರ ವಿಶ್ವಾಸ ಮತ್ತಷ್ಟು ಬಲಪಡಿಸಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯ ಹರ್ಷಾನಂದ ಗುತ್ತೇದಾರ್​ ತಿಳಿಸಿದ್ದಾರೆ.
ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಆಳಂದ ಲಾಡ್ಲೇ ಮಶಾಕ್​ ದರ್ಗಾ ಪ್ರಕರಣದಲ್ಲಿ ಆರೋಪಿಗಳೆಲ್ಲರೂ ವೃತ್ತಿ ಮತ್ತು ಪ್ರವೃತ್ತಿಯಿಂದ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರಾಗಿದ್ದಾರೆ. ಅವರ ಮೇಲೆ ಗಡಿಪಾರು ಆದೇಶವೂ ಆಗಿದೆ. ಇಂತಹ ನೀಚ ಮತ್ತು ಸಮಾಜದ್ರೋಹಿ ಕೆಲಸಗಳಲ್ಲಿ ತೊಡಗಿರುವವರಿಗೆ ಕಾನೂನು ತಕ್ಕ ಪಾಠ ಕಲಿಸಿದೆ. ಪ್ರಕರಣ ಹಿಂಪಡೆಯಲು ಶಿಫಾರಸು ಮಾಡಿದ ಶಾಸಕ ಬಿ.ಆರ್​.ಪಾಟೀಲ್​, ಗೃಹ ಸಚಿವ ಪ್ರಿಯಾಂಕ್​ ರ್ಖಗೆ ಹಾಗೂ ಆರೋಗ್ಯ ಸಚಿವ ಯು.ಟಿ.ಖಾದರ್​ ಈಗಲಾದರೂ ನ್ಯಾಯಾಂಗಕ್ಕೆ ಗೌರವ ಕೊಡಲಿ ಎಂದು ಸಲಹೆ ನೀಡಿದ್ದಾರೆ.
ಅಪರಾಧ ಪ್ರಕರಣಗಳನ್ನು ರಾಜಕೀಯ ಅಥವಾ ಇತರ ಕಾರಣಗಳಿಗಾಗಿ ಹಿಂಪಡೆಯುವ ಯಾವುದೇ ಕ್ರಮವು ನ್ಯಾಯದ ಮೂಲ ತತ್ವಗಳಿಗೆ ವಿರುದ್ಧವಾಗಿದೆ. ಸಮಾಜದ ಶಾಂತಿ, ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಗಂಭೀರ ಪ್ರಕರಣಗಳಲ್ಲಿ ಸರ್ಕಾರವು ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅಂತಹ ಪ್ರಕರಣಗಳನ್ನು ಏಕಪಯವಾಗಿ ಹಿಂಪಡೆಯುವ ಪ್ರಯತ್ನದಿಂದ ಜನರಲ್ಲಿ ತಪ್ಪು ಸಂದೇಶ ರವಾನೆಯಾಗುವ ಅಪಾಯವಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲರೂ ನ್ಯಾಯಾಂಗದ ತೀರ್ಪನ್ನು ಗೌರವಿಸಬೇಕು. ಯಾವುದೇ ತೀರ್ಪನ್ನು ರಾಜಕೀಯ ಅಥವಾ ಧಾರ್ಮಿಕ ದೃಷ್ಟಿಕೋನದಿಂದ ನೋಡುವ ಬದಲು, ನ್ಯಾಯದ ದೃಷ್ಟಿಯಿಂದ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ವಿಶ್ವಾಸ ಉಳಿಸಿಕೊಳ್ಳಲು ಎಲ್ಲ ಸಮುದಾಯಗಳ ಜನರು ಸಹಕರಿಸಬೇಕು. ನ್ಯಾಯದ ಪರವಾಗಿ ಮತ್ತು ಕಾನೂನಿನ ಆಳ್ವಿಕೆಯ ಪರವಾಗಿ ಬಿಜೆಪಿ ಸದಾ ನಿಲ್ಲಲಿದೆ ಎಂದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net