ಉಚಗಾಂವ ರಸ್ತೆ ಅಭಿವೃದ್ಧಿಗೆ ಹೆಬ್ಬಾಳ್ಕರ್ ಚಾಲನೆ

ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮೃಣಾಲ್ ಹೆಬ್ಬಾಳ್ಕರ ಚಾಲನೆ ನೀಡಿದರು. ಯುವರಾಜ ಕದಂ, ಬಾಳಾಸಾಹೇಬ್ ದೇಸಾಯಿ, ಪ್ರುಲ್ ಚೌಗುಲೆ, ರಾಮಾ ಕದಂ, ಸಂಭಾಜಿ ಕದಂ, ಯದು ಕಾಂಬಳೆ, ಎನ್.ಓ.ಚೌಗುಲೆ, ಎಲ್.ಡಿ.ಚೌಗುಲೆ ಇತರರಿದ್ದರು.
ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮೃಣಾಲ್ ಹೆಬ್ಬಾಳ್ಕರ ಚಾಲನೆ ನೀಡಿದರು. ಯುವರಾಜ ಕದಂ, ಬಾಳಾಸಾಹೇಬ್ ದೇಸಾಯಿ, ಪ್ರುಲ್ ಚೌಗುಲೆ, ರಾಮಾ ಕದಂ, ಸಂಭಾಜಿ ಕದಂ, ಯದು ಕಾಂಬಳೆ, ಎನ್.ಓ.ಚೌಗುಲೆ, ಎಲ್.ಡಿ.ಚೌಗುಲೆ ಇತರರಿದ್ದರು.
Published on
ಬೆಳಗಾವಿ: ಗ್ರಾಮೀಣ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಗುಣಮಟ್ಟದ ಕಾಮಗಾರಿಗಳ ಮೂಲಕ ಜನರ ನಿರೀಕ್ಷೆಗಳಿಗೆ ತಕ್ಕಂತೆ ರಸ್ತೆಗಳನ್ನು ನಿರ್ಮಿಸಬೇಕು ಎಂದು ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳ್ಕರ್ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ತಾಲೂಕಿನ ಉಚಗಾಂವ ಗ್ರಾಮದಲ್ಲಿ ಬುಧವಾರ ರಸ್ತೆ ಅಭಿವದ್ಧಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮದ ವಿವಿಧ ಬಡಾವಣೆಗಳು ಹಾಗೂ ಒಳರಸ್ತೆಗಳ ಅಭಿವದ್ಧಿಗೆ 70 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಹಲವು ವರ್ಷಗಳಿಂದ ಉತ್ತಮ ರಸ್ತೆಗಾಗಿ ಕಾಯುತ್ತಿದ್ದ ಸ್ಥಳೀಯ ನಿವಾಸಿಗಳಿಗೆ ಕಾಮಗಾರಿಯಿಂದ ಅನುಕೂಲವಾಗಲಿದ್ದು, ಸುಗಮ ಸಂಚಾರಕ್ಕೆ ನೆರವಾಗಲಿದೆ ಎಂದು ತಿಳಿಸಿದರು.
ಕಾಡಾ ಅಧ್ಯಕ್ಷ ಯುವರಾಜ ಕದಂ, ಬಾಳಾಸಾಹೇಬ್ ದೇಸಾಯಿ, ಪ್ರುಲ್ ಚೌಗುಲೆ, ರಾಮಾ ಕದಂ, ಸಂಭಾಜಿ ಕದಂ, ಯದು ಕಾಂಬಳೆ, ಎನ್.ಓ.ಚೌಗುಲೆ, ಎಲ್.ಡಿ. ಚೌಗುಲೆ, ನಿಖಿತಾ ಪಾಟೀಲ, ಯಲ್ಲಪ್ಪ ಪಾವಸೆ, ಮಾರುತಿ ಖಂಡೇಕರ್, ಸ್ಮಿತಾ ಖಂಡೇಕರ್, ಶಾಂತಾಬಾಯಿ ಡೋನಕರಿ, ಶಿವಾಜಿ ಡೋನಕರಿ, ತುಕಾರಾಮ ಡೋನಕರಿ ಇತರರಿದ್ದರು.
ದೇವಸ್ಥಾನ ಕಾಮಗಾರಿಗೆ ಚಾಲನೆ: ಬೆನಕನಹಳ್ಳಿ ಗ್ರಾಮದ ಮಾಸೋಬಾ ದೇವಸ್ಥಾನದ ಛಾವಣಿ ಕಾಂಕ್ರೀಟ್ ಕಾಮಗಾರಿಗೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳ್ಕರ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net