ಕ್ರೀಡೆಯಲ್ಲಿ ಆರೂಗ್ಯಪೂರ್ಣ ಸ್ಪರ್ಧೆ ಅಗತ್ಯ

ಮಳಖೇಡದಲ್ಲಿ ಟೆನಿಸ್​ ಬಾಲ್​ ಕ್ರಿಕೆಟ್​ ಟೂರ್ನಿಗೆ ಹಾಪ್​ಕಾಮ್ಸ್​ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ್​ ಊಡಗಿ ಚಾಲನೆ ನೀಡಿದರು. ಮಹಾಂತಪ್ಪ ಸಂಗಾವಿ, ರಾಜಶೇಖರ ಪುರಾಣಿಕ, ಮಂಜುನಾಥ ಭಂಡಾರಿ, ಬಸವರಾಜ ಮಾಲಿಪಾಟೀಲ್​, ಭಗವಾನ ಬೋಚಿನ್​ ಇದ್ದರು.
ಮಳಖೇಡದಲ್ಲಿ ಟೆನಿಸ್​ ಬಾಲ್​ ಕ್ರಿಕೆಟ್​ ಟೂರ್ನಿಗೆ ಹಾಪ್​ಕಾಮ್ಸ್​ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ್​ ಊಡಗಿ ಚಾಲನೆ ನೀಡಿದರು. ಮಹಾಂತಪ್ಪ ಸಂಗಾವಿ, ರಾಜಶೇಖರ ಪುರಾಣಿಕ, ಮಂಜುನಾಥ ಭಂಡಾರಿ, ಬಸವರಾಜ ಮಾಲಿಪಾಟೀಲ್​, ಭಗವಾನ ಬೋಚಿನ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಸವರಾಜ ಪಾಟೀಲ್​ ಊಡಗಿ ಅನಿಸಿಕೆ
  • ಮಳಖೇಡದಲ್ಲಿ ಕ್ರಿಕೆಟ್​ ಟೂರ್ನಿಗೆ ಚಾಲನೆ
ಮಳಖೇಡ: ಕ್ರೀಡೆಗಳಿಂದ ಮನುಷ್ಯನ ಆರೋಗ್ಯ ವೃದ್ಧಿಯಾಗುವುದಲ್ಲದೇ ಮಾನಸಿಕ ಸ್ವಾಸ್ಥ$್ಯ ಹೆಚ್ಚಾಗುತ್ತದೆ. ಕ್ರೀಡೆಗಳಲ್ಲಿ ಆರೋಗ್ಯಪೂರ್ಣ ಸ್ಪರ್ಧೆ ಇರಬೇಕು ಎಂದು ಹಾಪ್​ಕಾಮ್ಸ್​ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ್​ ಊಡಗಿ ಹೇಳಿದರು.
ಗ್ರಾಮದಲ್ಲಿ ಡಾ.ಬಿ.ಆರ್​.ಅಂಬೇಡ್ಕರ್​ ಕ್ರಿಕೆಟ್​ ಕ್ಲಬ್​ನಿಂದ ಭಾನುವಾರ ಆಯೋಜಿಸಿದ್ದ ಟೆನಿಸ್​ ಬಾಲ್​ ಕ್ರಿಕೆಟ್​ ಟೂರ್ನಿಗೆ ಚಾಲನೆ ನೀಡಿ ಮಾತನಾಡಿ, ಕ್ರೀಡೆಯಲ್ಲಿ ಸೋಲು&ಗೆಲುವಿಗಿಂತ ಭಾಗವಹಿಸುವುದು ಮುಖ್ಯ. ಯಾವುದೇ ಮನಸ್ತಾಪಕ್ಕೆ ಎಡೆ ಮಾಡಿಕೊಡದೆ ಉತ್ತಮ ರೀತಿಯಲ್ಲಿ ಪಂದ್ಯದಲ್ಲಿ ಭಾಗವಹಿಸಬೇಕು. ಬಿಸಿಲು ಜಾಸ್ತಿ ಇರುವುದರಿಂದ ತಂಪಾದ ಹೊತ್ತಿನಲ್ಲಿ ಆಟವಾಡಿ ಎಂದು ಸಲಹೆ ನೀಡಿದರು.
ಆಯೋಜಕ ಭಗವಾನ್​ ಬೋಚಿನ್​ ಮಾತನಾಡಿ, ಕ್ರೀಡಾಕೂಟದಲ್ಲಿ ಟ್ರೋಫಿಗಾಗಿ 10 ತಂಡಗಳು ಸೆಣಸಾಡಲಿವೆ. ವಿನ್ನರ್​ಗೆ 25 ಸಾವಿರ ರೂ. ನಗದು, ಟ್ರೋಫಿ ಹಾಗೂ ರನ್ನರ್​ಗೆ 15 ಸಾವಿರ ರೂ. ನಗದು, ಟ್ರೋಫಿ ನೀಡಲಾಗುವುದು ಎಂದರು.
ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಮಹಾಂತಪ್ಪ ಸಂಗಾವಿ, ರಾಜಶೇಖರ ಪುರಾಣಿಕ, ಮಂಜುನಾಥ ಭಂಡಾರಿ, ಬಸವರಾಜ ಮಾಲಿಪಾಟೀಲ, ಚನ್ನಬಸ್ಸಪ್ಪ ಹಾಗರಗಿ, ರಕಿರ್​ ಹುಸೇನ್​ ಖಾನ್​, ತುರಾಬ್​ ಉಲ್​ ಹಖ್​, ರಮೇಶ ನಂದೂರ, ತೌಸಿಫ್​ಖಾನ್​, ರಾಜಶೇಖರಯ್ಯ ಮಠಪತಿ, ಕಪಿಲ್​ ವಾಲಿ, ಕೀರ್ತಿಕುಮಾರ ಮಾಳಗಿ, ಕುಮಾರ ದೊಡ್ಡಮನಿ, ಅನೀಲಕುಮಾರ, ಪ್ರಶಾಂತ ದೊಡ್ಡಮನಿ, ಅಬ್ರಾರ್​ ಖಾನ್​, ಇಮ್ತಿಯಾಜ್​ ಇನಾಮದಾರ್​, ಫಾರೂಖ್​ ಆಲಂಪುರಿ, ಮಿನಾಜ್​ ಕಾಳಗಿ, ಫಯಾಜ್​ ಮುಜುಮದಾರ್​, ಸಾಧಿಕ್​ ಲಂಗರಿ, ಮೈಥಿಲಿಖಾನ್​, ಸೈಯದ್​ ಯಾಸಿನ್​ ಇತರರಿದ್ದರು.
ಶಿವಕುಮಾರ ದಳಪತಿ ನಿರೂಪಣೆ ಮಾಡಿದರು. ವಿಶ್ವನಾಥ ಸಂಗಾವಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net