ಆರೋಗ್ಯ ವೃದ್ಧಿಗೆ ವ್ಯಾಯಾಮ ಪೂರಕ

ಕೊಡಗಾನೂರ ಗ್ರಾಮದಲ್ಲಿ ಆರೋಗ್ಯ ಮತ್ತು ಸ್ವಾಸ್ಥ$್ಯ ಕೇಂದ್ರ ಕಟ್ಟಡ ಕಾಮಗಾರಿಗೆ ಶಾಸಕ ಲಕ್ಷ$್ಮಣ ಸವದಿ ಚಾಲನೆ ನೀಡಿದರು. ಬಾಬಾಸಾಬ ಅವತಾಡೆ, ಡಾ.ಎಸ್​.ಎಸ್​.ಗಡದೆ, ಡಾ.ಬಸವಗೌಡ ಕಾಗೆ, ವೆಂಕಪ್ಪ ಪಾಟೀಲ, ಜ್ಯೋತಿಬಾ ಚವ್ಹಾಣ ಇತರರಿದ್ದರು.
ಕೊಡಗಾನೂರ ಗ್ರಾಮದಲ್ಲಿ ಆರೋಗ್ಯ ಮತ್ತು ಸ್ವಾಸ್ಥ$್ಯ ಕೇಂದ್ರ ಕಟ್ಟಡ ಕಾಮಗಾರಿಗೆ ಶಾಸಕ ಲಕ್ಷ$್ಮಣ ಸವದಿ ಚಾಲನೆ ನೀಡಿದರು. ಬಾಬಾಸಾಬ ಅವತಾಡೆ, ಡಾ.ಎಸ್​.ಎಸ್​.ಗಡದೆ, ಡಾ.ಬಸವಗೌಡ ಕಾಗೆ, ವೆಂಕಪ್ಪ ಪಾಟೀಲ, ಜ್ಯೋತಿಬಾ ಚವ್ಹಾಣ ಇತರರಿದ್ದರು.
Published on
ಅಥಣಿ ಗ್ರಾಮೀಣ: ಆರೋಗ್ಯ ತಪಾಸಣೆಗಾಗಿ ಅಥಣಿ ೇತ್ರದ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರ ತೆರೆಯಲಾಗುತ್ತಿದೆ. ಸಾರ್ವಜನಿಕರು ಇದರ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಶಾಸಕ ಲಕ್ಷ$್ಮಣ ಸವದಿ ಹೇಳಿದರು.
ಅಥಣಿ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಮಂಗಳವಾರ 60 ಲ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಆರೋಗ್ಯ ಮತ್ತು ಸ್ವಾಸ್ಥ$್ಯ ಕೇಂದ್ರ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಉತ್ತಮ ಆರೋಗ್ಯದಿಂದ ಸಮಾಜದ ಅಭಿವೃದ್ಧಿ ಸಾಧ್ಯ. ಪ್ರತಿಯೊಬ್ಬರು ಆರೋಗ್ಯಕರ ಜೀವನಶೈಲಿಯಲ್ಲಿ ಸಮತೋಲನ ಆಹಾರ, ನಿಯಮಿತ ವ್ಯಾಯಾಮ, ಸ್ವಚ್ಛತೆ ಹಾಗೂ ಸಮಯಕ್ಕೆ ಸರಿಯಾದ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು. ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಕಾಂಗ್ರೆಸ್​ ಸರ್ಕಾರದಿಂದ ಅಥಣಿ ಹಾಗೂ ಕಾಗವಾಡ ೇತ್ರದಲ್ಲಿ 21 ಆರೋಗ್ಯ ಮತ್ತು ಸ್ವಾಸ್ಥ$್ಯ ಕೇಂದ್ರಗಳು ಮಂಜೂರಾಗಿದ್ದು, ಇವುಗಳ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ನೀಡಿ ಆರೋಗ್ಯಕರ ಮತ್ತು ಸ್ವಚ್ಛ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.
ಮುಖಂಡ ಬಾಬಾಸಾಬ ಅವತಾಡೆ ಮಾತನಾಡಿದರು. ಚಿಕ್ಕೋಡಿ ಡಿಎಚ್​ಒ ಡಾ.ಎಸ್​.ಎಸ್​.ಗಡದೆ, ತಾಲೂಕು ವೈದ್ಯಾಧಿಕಾರಿ ಡಾ.ಬಸವಗೌಡ ಕಾಗೆ, ಡಾ.ಚಂದ್ರಕಾಂತ ದೂಳಶೆಟ್ಟಿ, ರಾಮನಗೌಡ ಪಾಟೀಲ, ಮಹೇಶ ಜಿರ್ಲೆ, ವೆಂಕಪ್ಪ ಪಾಟೀಲ, ಜ್ಯೋತಿಬಾ ಚವ್ಹಾಣ, ಸುಭಾಸ ಐನಾಪುರ, ಸಂಜು ಪವಾರ, ಅಣ್ಣಪ್ಪ ಬಾಬರ, ಬಾಜಿರಾವ್​ ಖೋತ, ಅಪ್ಪಸಾಬ ಮುಜಾವರ, ಸದಾಶಿವ ಡಂಬರೆ, ರಾವಸಾಬ ಪಾಟೀಲ, ಅನಿಲ ಜಾಧವ, ಸಂಜು ಚವ್ಹಾಣ, ಹಾಜಿಲಾಲ್​ ಶೇಖ, ಗುಂಡು ರತನವರ, ಪ್ರಕಾಶ ಹರೋಲಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net