ಆರೋಗ್ಯ ವೃದ್ಧಿಗೆ ಕ್ರೀಡೆ ಸಹಕಾರಿ

ಮುರಗೋಡ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ನರೇಂದ್ರ ಮೋದಿ ಪ್ರೀಮಿಯರ್​ ಲೀಗ್​ ರಾಜ್ಯ ಮಟ್ಟದ ಮುಕ್ತ ಕ್ರಿಕೆಟ್​ ಪಂದ್ಯಾವಳಿಯನ್ನು ಯುವ ಮುಖಂಡ ಅಮಿತ ಪಾಟೀಲ ಉದ್ಘಾಟಿಸಿದರು. ಗಿರೀಶ ಅಳಾಜ. ಮಲ್ಲಿಕಾರ್ಜುನ ಸಿದ್ಧನಗೌಡ, ಸುರೇಶ ಮ್ಯಾಕಲ, ಪ್ರಶಾಂತ ಕಿತ್ತೂರ, ಭೀಮಶಿ ಯಲ್ಲನಾಯ್ಕರ ಇತರರಿದ್ದರು.

Published on
ಮುರಗೋಡ: ಯುವಕರು ಸಂಟನೆ ಮೂಲಕ ನಿರಂತರವಾಗಿ ಕ್ರೀಡೆಗೆ ಉತ್ತೇಜನ ನೀಡುವುದರಿಂದ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಯುವ ಮುಖಂಡ ಅಮಿತ ವಿಶ್ವನಾಥ ಪಾಟೀಲ ಹೇಳಿದರು.
ಜಮಾದಾರ ಮೆದಾನದಲ್ಲಿ ಕರ್ನಾಟಕ ಕಿತ್ತೂರು ಸೇನೆ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನರೇಂದ್ರ ಮೋದಿ ಪ್ರೀಮಿಯರ್​ ಲೀಗ್​ ರಾಜ್ಯಮಟ್ಟದ ಮುಕ್ತ ಕ್ರಿಕೆಟ್​ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡುಗೆ ಅಪಾರವಾಗಿದೆ ಎಂದರು.
ಕರ್ನಾಟಕ ಕಿತ್ತೂರು ಸೇನೆ ತಾಲೂಕು ಉಪಾಧ್ಯ ಗಿರೀಶ ಅಳಾಜ ಮಾತನಾಡಿ, ಪ್ರಧಾನಮಂತ್ರಿಯಾಗಿ ದಾಖಲೆ ಬರೆದ ನರೇಂದ್ರ ಮೋದಿ ಅವರಿಗೆ ಆಯುಷ್ಯ, ಆರೋಗ್ಯ ಉತ್ತಮವಾಗಿರಲೆಂಬ ಹಾರೈಕೆಯೊಂದಿಗೆ ಯುವ ಶಕ್ತಿಯಿಂದ ಕ್ರಿಕೆಟ್​ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ತಿಳಿಸಿದರು. ಮಹಾಂತೇಶ ಬಾಳಿಕಾಯಿ, ಶಿಕ ಮಲ್ಲಿಕಾರ್ಜುನ ಸಿದ್ಧನಗೌಡರ, ತಾಪಂ ಮಾಜಿ ಸದಸ್ಯ ಸುರೇಶ ಮ್ಯಾಕಲ, ಮಡಿವಾಳಪ್ಪ ಚಿಕ್ಕೂಪ್ಪ, ಪುಂಡಲೀಕ ನಾಗನೂರ, ಬಸವರಾಜ ಕಿತ್ತೂರ, ವಿನಯ ಕಲ್ಮಠ, ಪ್ರಶಾಂತ ಕಿತ್ತೂರ, ಶಿವು ಹಡಪದ, ಭೀಮಶಿ ಯಲ್ಲನಾಯ್ಕರ, ಮಹೇಶ ರಗಟಿ, ಉಳವಪ್ಪ ಹುಡೇದ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net