ಅಪಾಯಕಾರಿ ತ್ಯಾಜ್ಯವಸ್ತು ಸಂಗ್ರಹ

ಹುಮನಾಬಾದ್​ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿನ ಪ್ರಸನ್ನ ಪ್ರೀ ಪ್ರೊಸೆಸಿಂಗ್​ ಕಂಪನಿ ದೃಶ್ಯ.
ಹುಮನಾಬಾದ್​ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿನ ಪ್ರಸನ್ನ ಪ್ರೀ ಪ್ರೊಸೆಸಿಂಗ್​ ಕಂಪನಿ ದೃಶ್ಯ.
Published on

ಪ್ರಮುಖ ಮುಖ್ಯಾಂಶಗಳು

  • ಹುಮನಾಬಾದ್​ನ ಕೈಗಾರಿಕೆ ಘಟಕದ ಪ್ರಸನ್ನ ಪ್ರೀ ಪ್ರೊಸೆಸಿಂಗ್​ ಕಂಪನಿ ವಿರುದ್ಧ ಕೇಸ್​
ಹುಮನಾಬಾದ್​: ಪರಿಸರ ಇಲಾಖೆ ಆದೇಶ ಉಲ್ಲಂಘಿಸಿ ಕೈಗಾರಿಕೆ ಘಟಕದಲ್ಲಿ ಅಪಾಯಕಾರಿ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿಟ್ಟ ಆರೋಪದಡಿ ಪಟ್ಟಣ ಹೊರವಲಯದ ಪ್ರಸನ್ನ ಪ್ರೀ ಪ್ರೊಸೆಸಿಂಗ್​ ಲಿ. ಕಂಪನಿ ಮತ್ತು ಅದರ ಮಾಲೀಕರ ವಿರುದ್ಧ ಸ್ಥಳಿಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಹಾಯಕ ಪರಿಸರ ಅಧಿಕಾರಿ ಸಂತೋಷಕುಮಾರ ದೂರು ಆಧರಿಸಿ ಕೇಸ್​ ದಾಖಲಾಗಿದೆ. ಕಂಪನಿಗೆ 2024ರಲ್ಲೇ ಪರಿಸರ ನಿಯಮ ಉಲ್ಲಂನೆ ಹಿನ್ನೆಲೆಯಲ್ಲಿ ಮುಚ್ಚುವಂತೆ ಆದೇಶಿಸಲಾಗಿತ್ತು. ಬಳಿಕ ಕಂಪನಿಯಲ್ಲಿದ್ದ ತ್ಯಾಜ್ಯವಸ್ತುಗಳ ತೆರವಿಗೆ 2025ರ ಮಾ.28ರಂದು 30 ದಿನದ ಕಾಲಾವಕಾಶ ನೀಡಲಾಗಿತ್ತು. ಜು.8ರಂದು ಮಧ್ಯಾಹ್ನ ಕೈಗಾರಿಕೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಕಂಪನಿಯೊಳಗೆ ಇನ್ನೂ ಅಪಾಯಕಾರಿ ತ್ಯಾಜ್ಯವಸ್ತುಗಳನ್ನು ಸುರತಾ ಕ್ರಮಗಳಿಲ್ಲದೆ ಸಂಗ್ರಹಿಸಿಟ್ಟಿರುವುದು ಕಂಡುಬಂದಿದೆ. ತ್ಯಾಜ್ಯವನ್ನು ಮರೆಮಾಚುವ ಉದ್ದೇಶದಿಂದ ಅದರ ಮೇಲೆ ಮುರುಮ್​ ಹಾಕಿರುವ ಶಂಕೆಯೂ ವ್ಯಕ್ತವಾಗಿದೆ. ಇದರಿಂದ ಸುತ್ತಮುತ್ತಲಿನ ಪರಿಸರ ಹಾಗೂ ಸಾರ್ವಜನಿಕರ ಆರೋಗ್ಯಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರಿಂದ ಕಂಪನಿು ಮಾಲಿಕ ಪಾಂಡುರಂಗರಡ್ಡಿ ಇತರರ ವಿರುದ್ಧ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಡಿವೈಎಸ್​ಪಿ ಮಡೋಳಪ್ಪ ಪಿ.ಎಸ್​., ಸಿಪಿಐ ಸಂತೋಷ ತಟ್ಟೆಪಳ್ಳಿ, ಪಿಎಸ್​ಐ ಸುರೇಶಕುಮಾರ ಚಹ್ವಾಣ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕ್ರಮಕ್ಕೆ ವಿಳಂಬ ಮಾಡಿದ್ದೇಕೆ?
ಕಂಪನಿಯಲ್ಲಿದ್ದ ತ್ಯಾಜ್ಯವಸ್ತುಗಳ ತೆರವಿಗೆ 2025ರ ಮಾ.28ರಂದು 30 ದಿನದ ಕಾಲಾವಕಾಶ ನೀಡಲಾಗಿತ್ತು. ನಿಗದಿತ ಅವಧಿ ಮುಗಿದ ಬಳಿಕವೂ ಕಂಪನಿ ಆದೇಶ ಪಾಲಿಸಿಲ್ಲ ಎನ್ನಲಾಗಿದ್ದು, ಪರಿಸರ ಅಧಿಕಾರಿಗಳು 2026ರ ಜು.8ರಂದು ಸ್ಥಳ ಪರಿಶೀಲನೆ ನಡೆಸಿ ದೂರು ದಾಖಲಿಸಿದ್ದಾರೆ. ಆದರೆ ನಿಗದಿತ 30 ದಿನದ ಗಡುವು ಮುಗಿದರೂ ಒಂದು ವರ್ಷದ ನಂತರ ದೂರು ದಾಖಲಿಸಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಇಷ್ಟು ದೀರ್ ಅವಧಿವರೆಗೆ ಅಧಿಕಾರಿಗಳ ಗಮನಕ್ಕೆ ಈ ವಿಷಯ ಬರಲಿಲ್ಲವೇ? ಅಥವಾ ಮಧ್ಯಂತರದಲ್ಲಿ ಯಾವುದೇ ಪರಿಶೀಲನೆ ನಡೆಸಲಾಗಿತ್ತೇ ಎಂಬ ಪ್ರಶ್ನೆಗಳು ಪರಿಸರವಾದಿಗಳು ಹಾಗೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಇಲ್ಲಿನ ಕೈಗಾರಿಕಾ ಪ್ರದೇಶ ಯಾವಾಗಲೂ ಒಂದಿಲ್ಲೊಂದು ಅನಾಹುತಗಳಿಂದ ಹೆಸರು ಮಾಡಿದೆ. ಟನೆ ನಡೆದಾಗ ಮಾತ್ರ ನಿಯಮ ಉಲ್ಲಂಘಿಸಿರುವ ಬಗ್ಗೆ ಮಾಹಿತಿ ಪಡೆದು ಅಧಿಕಾರಿಗಳು ದಾಳಿ ಮಾಡುತ್ತಾರೆ. ನಂತರ ಯಥಾಸ್ಥಿತಿ ಎನ್ನುವಂಥ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಇದಕ್ಕೂ ಮುಖ್ಯವಾಗಿ ಕೈಗಾರಿಕೆ ಪ್ರದೇಶದಲ್ಲಿನ ಕೆಲ ಕೆಮಿಕಲ್​ ಕಾರ್ಖಾನೆ ಹೊರಬಿಡುವ ವಿಷಕಾರಿ ತ್ಯಾಜ್ಯದಿಂದ ಸುತ್ತಮುತ್ತಲಿನ ಗಡವಂತಿ, ಮೊಳಕೇರಾ, ಬಸಂತಪುರ, ಮಾಣಿಕನಗರ ಗ್ರಾಮಗಳಲ್ಲಿ ಸಾರ್ವಜನಿಕರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಬಗ್ಗೆ ವಿವಿಧ ಸಂಟನೆಗಳು, ಸ್ಥಳಿಯರು ಹೋರಾಟ ಮಾಡಿದ್ದರೂ ಈವರೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net