ಪರಿಶ್ರಮ, ಆತ್ಮವಿಶ್ವಾಸವೇ ಯಶಸ್ಸಿಗೆ ದಾರಿ

ಬಸವಕಲ್ಯಾಣ ಇಂಜಿನಿಯರಿಂಗ್​ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭವನ್ನು ಬಿಕೆಇಸಿ ಅಧ್ಯಕ್ಷ ದಿಲೀಪಕುಮಾರ ತಾಳಂಪಳ್ಳಿ ಉದ್ಘಾಟಿಸಿದರು. ಡಾ. ಸುಷ್ಮಾ ಎಚ್​, ಡಾ.ಅಶೋಕಕುಮಾರ ವಣಗೇರಿ, ಡಾ.ಅರುಣಕುಮಾರ ಯಲಾಲ, ಪ್ರೇಮಸಾಗರ ಪಾಟೀಲ, ಸುವರ್ಣಲತಾ, ಡಾ.ಸಂಜೀವಕುಮಾರ ಜಲ್ದೆ, ಡಾ.ಅನೀಲ ಪಾಟೀಲ, ರಾಹುಲ ರೆಡ್ಡಿ, ವಿದ್ಯಾಸಾಗರ ಮೂಲಗೆ, ಗುರುರಾಜ ಪಟವಾರಿ ಇದ್ದರು.
ಬಸವಕಲ್ಯಾಣ ಇಂಜಿನಿಯರಿಂಗ್​ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭವನ್ನು ಬಿಕೆಇಸಿ ಅಧ್ಯಕ್ಷ ದಿಲೀಪಕುಮಾರ ತಾಳಂಪಳ್ಳಿ ಉದ್ಘಾಟಿಸಿದರು. ಡಾ. ಸುಷ್ಮಾ ಎಚ್​, ಡಾ.ಅಶೋಕಕುಮಾರ ವಣಗೇರಿ, ಡಾ.ಅರುಣಕುಮಾರ ಯಲಾಲ, ಪ್ರೇಮಸಾಗರ ಪಾಟೀಲ, ಸುವರ್ಣಲತಾ, ಡಾ.ಸಂಜೀವಕುಮಾರ ಜಲ್ದೆ, ಡಾ.ಅನೀಲ ಪಾಟೀಲ, ರಾಹುಲ ರೆಡ್ಡಿ, ವಿದ್ಯಾಸಾಗರ ಮೂಲಗೆ, ಗುರುರಾಜ ಪಟವಾರಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಕೆಇಸಿ ಅಧ್ಯಕ್ಷ ದಿಲೀಪಕುಮಾರ ತಾಳಂಪಳ್ಳಿ ಅಭಿಮತ
  • ಬಸವಕಲ್ಯಾಣದಲ್ಲಿ ಪದವಿ ಪ್ರದಾನ ಸಮಾರಂಭ
 ಬಸವಕಲ್ಯಾಣ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳುವ ಜತೆಗೆ ಹೊಸ ಸವಾಲುಗಳು ಎದುರಾಗಲಿವೆ. ಯಾವುದೇ ಕ್ಷೇತ್ರದಲ್ಲಿದ್ದರು ಪರಿಶ್ರಮ, ಪ್ರಾಮಾಣಿಕತೆ ಮತ್ತು ಆತ್ಮವಿಶ್ವಾಸವೇ ನಿಮ್ಮ ಯಶಸ್ಸಿಗೆ ದಾರಿಯಾಗಲಿದೆ. ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಜ್ಞಾನವನ್ನು ಸಮಾಜದ ಓಳತಿಗೆ ದೇಶದ ಪ್ರಗತಿಗೆ ಬಳಸಿ ಎಂದು ವಿದ್ಯಾರ್ಥಿಗಳಿಗೆ ಬಿಇಟಿಯ ಉಪಾಧ್ಯಕ್ಷ, ಬಿಕೆಇಸಿ ಅಧ್ಯಕ್ಷ ದಿಲೀಪಕುಮಾರ ತಾಳಂಪಳ್ಳಿ ಸಲಹೆ ನೀಡಿದರು.
ನಗರದ ಬಸವಕಲ್ಯಾಣ ಎಜುಕೇಷನಲ್​ ಟ್ರಸ್ಟ್​(ಬಿಇಟಿ)ನ ಬಸವಕಲ್ಯಾಣ ಇಂಜಿನಿಯರಿಂಗ್​ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪದವಿ ಪಡೆದರೆ ಸಾಲದು, ಪದವಿಯ ಜತೆಗೆ ಹೊಸ-ಹೊಸ ತಂತ್ರಜ್ಞಾನಗಳ ಕುರಿತು ಸಂಶೋಧನೆ ಮಾಡಬೇಕು. ನಿರಂತರ ಅಧ್ಯಯನದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವುದು ಅತ್ಯಾವಶ್ಯಕವಾಗಿದೆ. ಜೀವನದಲ್ಲಿ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರವೂ ಅವಶ್ಯಕ ಎಂದರು.
ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಎಂಬಿಎ ವಿಭಾಗದ ಸಂಯೋಜಕಿ ಡಾ.ಸುಷ್ಮಾ ಎಚ್​. ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣ ಜತೆಗೆ ಆದರ್ಶ ಮೌಲ್ಯಬೆಳೆಸಿಕೊಳ್ಳಬೇಕು. ತಂದೆ-&ತಾಯಿ, ಗುರು-ಹಿರಿಯರನ್ನು ಗೌರವಿಸಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಉತ್ತಮ ಸ್ಥಾನಮಾನ ಗಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.  
ಕಾಲೇಜಿನ ನಿರ್ದೇಶಕ, ಪ್ರಾಚಾರ್ಯ ಡಾ.ಅಶೋಕಕುಮಾರ ವಣಗೇರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ,  ವಿದ್ಯಾಭ್ಯಾಸ ಮುಗಿಸಿಕೊಂಡು ಹೊಸ ಜಗತ್ತಿಗೆ ಪ್ರವೇಶ ಮಾಡುತ್ತಿರುವ ತಾವೆಲ್ಲರೂ, ವಿದ್ಯಾರ್ಥಿ ಜೀವನದ ಈ ಸುಂದರ ದಿನಗಳು ಇಲ್ಲಿಗೆ ಮುಗಿಯುತ್ತಿದ್ದರೂ, ನಿಮ್ಮ ಭವಿಷ್ಯದ ಹೊಸ ಅಧ್ಯಾಯ ಇಲ್ಲಿಂದಲೇ ಆರಂಭವಾಗುತ್ತದೆ. ಮುಂದಿನ ದಿನಗಳು ನಿಮಗೆ ಹೊಸ ಅವಕಾಶಗಳನ್ನು ಮತ್ತು ಸವಾಲುಗಳನ್ನು ತರಲಿವೆ ಎಂದರು.
ಉಪ-ಪ್ರಾಚಾರ್ಯ ಡಾ.ಅರುಣಕುಮಾರ ಯಲಾಲ,  ಕುಲಸಚಿವ ಪ್ರೇಮಸಾಗರ ಪಾಟೀಲ, ವಿವಿಧ ವಿಭಾಗದ ಮುಖ್ಯಸ್ಥರಾದ ಸುವರ್ಣಲತಾ, ಡಾ.ಸಂಜೀವಕುಮಾರ ಜಲ್ದೆ, ಡಾ.ಅನೀಲ ಪಾಟೀಲ, ರಾಹುಲ ರೆಡ್ಡಿ, ವಿದ್ಯಾಸಾಗರ ಮೂಲಗೆ, ಗುರುರಾಜ ಪಟವಾರಿ ಇದ್ದರು. ಪ್ರೀತಿ ಬಿರಾದಾರ ನಿರೂಪಣೆ ಮಾಡಿದರು. ಹರೀಕಾ ಕಲ್ಲೂರ ಪದವಿ ಸಮಾರಂಭ ನಡೆಸಿಕೊಟ್ಟರು. ಡಾ.ಅನೀಲ ಪಾಟೀಲ ವಂದಿಸಿದರು.  
"

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪದವಿಯ ಜತೆಗೆ ತಾಂತ್ರಿಕ ಕೌಶಲ ಬೆಳೆಸಕೊಳ್ಳುವುದು ಅತ್ಯಾವಶ್ಯಕ. ಸಮಯ ಪ್ರಜ್ಞೆ, ಪರಿಶ್ರಮ, ಪ್ರಾಮಾಣಿಕತೆ ಜೀವನದಲ್ಲಿ ಯಶಸ್ವಿನ ದಾರಿ ಮಾಡಿಕೊಡುತ್ತವೆ. ಎದುರಾಗುವ ಸವಾಲುಗಳನ್ನು ಎದುರಿಸಿ, ದೊರೆಯುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು.

— > ಸುಷ್ಮಾ ಎಚ್​. ಸಿಯುಕೆ ಎಂಬಿಎ ವಿಭಾಗದ ಸಂಯೋಜಕಿ
"

ಯಾವುದೇ ಕ್ಷೇತ್ರಕ್ಕೆ ಹೋದರೂ ನಿಮ್ಮ ಶ್ರಮ, ಶ್ರದ್ಧೆ, ಕೌಶಲ ಅಗತ್ಯ ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸಿಕೊಂಡಾಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ನಿಮ್ಮ ಜ್ಞಾನವು ನಿಮ್ಮ ಭವಿಷ್ಯ ರೂಪಿಸಿಕೊಳ್ಳುವ ಜತೆಗೆ ಸಮಾಜದ ಒಳಿತಿಗೆ ಬಳಕೆಯಾಗಲಿ.

— > ಡಾ.ಅಶೋಕಕುಮಾರ ವಣಗೇರಿ ಪ್ರಾಚಾರ್ಯ ಬಿಕೆಇಸಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net