ಕಲಬುರಗಿ ಸೊಗಸನಕೇರಿ ಗುರುಶಾಂತಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಿದ್ಧಾಂತ ಶಿಖಾಮಣಿ ವಚನ ಸಾಹಿತ್ಯ ಸಮನ್ವಯಾತ್ಮಕ, ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಉಜ್ಜಯಿನಿ ಜಗದ್ಗುರುಗಳು ಆಶೀರ್ವಚನ ನೀಡಿದರು. ಶ್ರೀ ವೀರಭದ್ರ ಶಿವಾಚಾರ್ಯ, ಶ್ರೀ ಸಿದ್ಧಮಲ್ಲ ಶಿವಾಚಾರ್ಯ, ಶ್ರೀ ಡಾ.ಗುರುಮೂರ್ತಿ ಶಿವಾಚಾರ್ಯ, ಶ್ರೀ ಪಂಪಾಪತಿ ದೇವರು, ದಯಾನಂದ ಪಾಟೀಲ್, ಶಿವಾನಂದ ಮಠಪತಿ ಇತರರಿದ್ದರು.
ಕಲಬುರಗಿ: ಯೋಗಿಗೆ ಯೋಗದ ಚಿಂತೆ, ಯೋಧನಿಗೆ ಯುದ್ಧದ ಚಿಂತೆ, ತಂದೆಗೆ ಮಗನ ಚಿಂತೆ, ಗುರುವಿಗೆ ಶಿಷ್ಯನ ಉದ್ಧಾರದ ಚಿಂತೆ ಇರುತ್ತದೆ. ಗುರು ಬೋಧಾಮೃತದಿಂದ ಸುಖ-ಶಾಂತಿ ಪ್ರಾಪ್ತವಾಗುತ್ತದೆ ಎಂದು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ನುಡಿದರು.
ಸೊಗಸನಕೇರಿಯ ಗುರುಶಾಂತಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಿದ್ಧಾಂತ ಶಿಖಾಮಣಿ ವಚನ ಸಾಹಿತ್ಯ ಸಮನ್ವಯಾತ್ಮಕ, ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ವೀರಶೈವ ಧರ್ಮವು ಪ್ರಾಚಿನ ಹಾಗೂ ಉತಷ್ಠ ಪರಂಪರೆ ಹೊಂದಿದೆ. ಶಿವಜ್ಞಾನ ಅರಿಯದಿದ್ದರೆ, ಗುರುಕಾರುಣ್ಯ ಪಡೆಯದಿದ್ದರೆ ಜೀವನವು ವ್ಯರ್ಥವಾಗುತ್ತದೆ ಎಂದು ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿಯಲ್ಲಿ ಬೋಧಿಸಿದ್ದಾರೆ ಎಂದು ನುಡಿದರು.
ಕಡಗಂಚಿಯ ವೀರಭದ್ರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಚಿಂಚನಸೂರದ ಶ್ರೀ ಸಿದ್ಧಮಲ್ಲ ಶಿವಾಚಾರ್ಯ, ಪಾಳಾದ ಶ್ರೀ ಡಾ.ಗುರುಮೂರ್ತಿ ಶಿವಾಚಾರ್ಯ, ಸುಲೇಪೇಟ, ಕಡಗಂಚಿಯ ಶ್ರೀ ಪಂಪಾತಿ ದೇವರು ಸಮ್ಮುಖ ವಹಿಸಿದ್ದರು.
ಬಿಜೆಪಿ ನಾಯಕಿ ಜಯಶ್ರೀ ಮತ್ತಿಮಡು, ಪ್ರಮುಖರಾದ ದಯಾನಂದ ಪಾಟೀಲ್, ಶಿವಾನಂದ ಮಠಪತಿ, ನಂದಿನಿ ಸನಬಾಳ, ಶಾರದಾಬಾಯಿ, ಶಾಂತಕುಮಾರ ಮಡಿವಾಳ, ರಾಮಲಿಂಗ ಹೊನ್ನಳ್ಳಿ, ನಾಗಲಿಂಗಯ್ಯ ಶಾಸಿಗಳು ಇದ್ದರು. ಪೀಠದ ಗುರುಕುಲ ಸಾಧಕರಿಂದ ವೇದೂಷ ಜರುಗಿತು. ಚೇತನ ಬೀದಿಮನಿ, ಮಹಾಂತಯ್ಯಸ್ವಾಮಿ ನಿಂಗದಳ್ಳಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಯುವ ಸಾಹಿತಿ ಶಿವಯ್ಯ ಮಠಪತಿ ನಿರೂಪಣೆ ಮಾಡಿದರು.
"
ಹೊರಗಿನ ಕತ್ತಲೆ ದೂರ ಮಾಡಲು ದೀಪದ ಅಗತ್ಯವಿದ್ದಂತೆ, ಒಳಗಿನ ಕತ್ತಲೆ ಹೋಗಲಾಡಿಸಲು ಗುರುವಿನ ಜ್ಞಾನಾಮೃತ ಅಗತ್ಯ. ಮಹಾ ಗುರುಗಳ ಆಶೀರ್ವಾದದಿಂದ ಜೀವನ ಪಾವನಗೊಳಿಸಿಕೊಳ್ಳುವ ಅವಕಾಶ ದೊರೆತಿದ್ದು ಸುದೈವ.