ಹನುಮಂತನ ಭಕ್ತಿ, ನಂಬಿಕೆ ಎಲ್ಲರಿಗೂ ಆದರ್ಶ

ಕಲಬುರಗಿಯ ಕರುಣೇಶ್ವರ ನಗರದ ಶ್ರೀ ಜೈ ವೀರ ಹನುಮಾನ ಮಂದಿರದಲ್ಲಿ ಹನುಮ ಜಯಂತಿ ನಿಮಿತ್ತ ಪಲ್ಲಕ್ಕಿ ಉತ್ಸವ ನಡೆಯಿತು.
ಕಲಬುರಗಿಯ ಕರುಣೇಶ್ವರ ನಗರದ ಶ್ರೀ ಜೈ ವೀರ ಹನುಮಾನ ಮಂದಿರದಲ್ಲಿ ಹನುಮ ಜಯಂತಿ ನಿಮಿತ್ತ ಪಲ್ಲಕ್ಕಿ ಉತ್ಸವ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಪಂ.ದ್ವೆಪಾಯಾನಾಚಾರ್ಯ ನುಡಿ
  • ಕರುಣೇಶ್ವರ ನಗರದಲ್ಲಿ ಹನುಮ ಜಯಂತಿ
ಕಲಬುರಗಿ: ಹನುಮಂತನ ಭಕ್ತಿ, ರಾಮನ ಮೇಲಿನ ನಂಬಿಕೆ ಹಾಗೂ ಅಚಲ ಶ್ರದ್ಧೆ ಎಲ್ಲರಿಗೂ ಆದರ್ಶವಾಗಿದ್ದು, ಎಷ್ಟೇ ಕಠಿಣ ಪರಿಸ್ಥಿತಿ ಬಂದರೂ ಭಗವಂತನನ್ನು ನಂಬಿ ಮುಂದುವರಿದರೆ ಯಶಸ್ಸು ಲಭಿಸುತ್ತದೆ ಎಂದು ಪಂ.ದ್ವೆಪಾಯಾನಾಚಾರ್ಯ ಹೇಳಿದರು.
ಕರುಣೇಶ್ವರ ನಗರದ ಶ್ರೀ ಜೈ ವೀರ ಹನುಮಾನ ಮಂದಿರದಲ್ಲಿ ಹನುಮ ಜಯಂತಿ ಅಂಗವಾಗಿ ಗುರುವಾರ ಉಪನ್ಯಾಸ ನೀಡಿದ ಅವರು, ಅಸಾಧ್ಯವೆನಿಸುವ ಕಾರ್ಯಗಳನ್ನೂ ದೃಢ ಸಂಕಲ್ಪದಿಂದ ಸಾಧಿಸಬಹುದು. ದಿನಕ್ಕೆ ಒಂದು ಪುಟವಾದರೂ ರಾಮಾಯಣದ ಕಥೆಗಳನ್ನು ಓದಬೇಕು ಎಂದು ಸಲಹೆ ನೀಡಿದರು.
ಪ್ರಮುಖರಾದ ಅವಿನಾಶ ಕುಲಕರ್ಣಿ, ವಿಶ್ವಾಸ ಮೋಕರ್​, ವಿನೂತ ಜೋಶಿ, ಋಷಿಕೇಶ ಚೌಡಾಪುರ, ಶೇಷಗಿರಿರಾವ್​ ಕುಲಕರ್ಣಿ, ಸಮೀರ್​ ಕುಲಕರ್ಣಿ, ಶಾಮಾಚಾರ್ಯ ಜೋಶಿ, ವಿನೋದ ಸಾಥಖೇಡ, ಸುರೇಶ ಕುಲಕರ್ಣಿ, ಗಿರೀಶ ಕುಲಕರ್ಣಿ, ರಾವೇಂದ್ರ ಕುಲಕರ್ಣಿ, ದತ್ತುರಾವ್​ ಕುಲಕರ್ಣಿ, ಪದ್ಮನಾಭ ಜೋಶಿ, ನರಸಿಂಗರಾವ್​ ಕುಲಕರ್ಣಿ, ಆರ್​.ಕೆ.ಕುಲಕರ್ಣಿ, ಶಶಿಧರ ಜೋಶಿ, ವಿಜಯ ಕುಲಕರ್ಣಿ ಇತರರಿದ್ದರು.
ಪ್ರಾಣದೇವರಿಗೆ ವಿಶೇಷ ಪೂಜೆ
ಶ್ರೀ ಜೈ ವೀರ ಹನುಮಾನ ಮಂದಿರದಲ್ಲಿ ಬೆಳಗ್ಗೆ ಪಂಚಾಮೃತ ಅಭಿಷೇಕ, ಅಲಂಕಾರ, ಎಲೆಪೂಜೆ, ತೊಟ್ಟಿಲು ಸೇವೆ, ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಶ್ರೀ ಹಂಸನಾಮಕ ಲ್ಮನಾರಾಯಣ, ಶ್ರೀ ಜಯವಿ ರಾಮನ ಪಾರಾಯಣ ಸಂಗಳಿಂದ ಶ್ರೀ ಹರಿ ವಾಯುಸ್ತುತಿ ಪುನಶ್ಚರಣ ಮತ್ತು ಮಧು ಅಭಿಷೇಕ, ಪಲ್ಲಕ್ಕಿ ಉತ್ಸವ ನಡೆಯಿತು. ಪವಮಾನ ಹೋಮ ಮತ್ತು ರಥಾಂಗ ಹೋಮ ಪ್ರವಚನ ಮಂಗಳ, ರಥೋತ್ಸವ, ಮಹಾಮಂಗಳಾರತಿ ಜರುಗಿದವು. ಸಂಜೆ ಹನುಮಾನ ಚಾಲೀಸಾ ಪಠಣ ಹಾಗೂ ಸಹಸ್ರ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net