ಹನುಮಾನ ದೇಗುಲ ಕಳಸಾರೋಹಣ 16ಕ್ಕೆ

 ಕಮಲಾಪುರ ತಾಲೂಕಿನ ಗೊಣಗಿಯಲ್ಲಿ ಹಮ್ಮಿಕೊಂಡಿದ್ದ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಪುರಾಣಕ್ಕೆ ಶ್ರೀ ಚಂದ್ರಗುಂಡ ಶಿವಾಚಾರ್ಯರು ಚಾಲನೆ ನೀಡಿದರು. ಶ್ರೀ ರೇವಣಸಿದ್ಧ ಶಿವಾಚಾರ್ಯ, ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯ ಇತರರಿದ್ದರು.
ಕಮಲಾಪುರ ತಾಲೂಕಿನ ಗೊಣಗಿಯಲ್ಲಿ ಹಮ್ಮಿಕೊಂಡಿದ್ದ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಪುರಾಣಕ್ಕೆ ಶ್ರೀ ಚಂದ್ರಗುಂಡ ಶಿವಾಚಾರ್ಯರು ಚಾಲನೆ ನೀಡಿದರು. ಶ್ರೀ ರೇವಣಸಿದ್ಧ ಶಿವಾಚಾರ್ಯ, ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗೊಣಗಿಯಲ್ಲಿ ಶ್ರೀ ಶರಣಬಸವೇಶ್ವರ ಪುರಾಣ ಶುರು
  • 15ರಂದು ಗಂಗಾಸ್ನಾನ
ಕಮಲಾಪುರ: ಗೊಣಗಿ ಗ್ರಾಮದಲ್ಲಿ ಶ್ರೀ ಹನುಮಾನ ದೇವಸ್ಥಾನ ಉದ್ಘಾಟನೆ ಹಾಗೂ ಕಳಸಾರೋಹಣ ನಿಮಿತ್ತ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಪುರಾಣ ಮಂಗಳವಾರದಿಂದ ಶುರುವಾಯಿತು.
ಹೊನ್ನಕಿರಣಗಿಯ ಶ್ರೀ ಚಂದ್ರಗುಂಡ ಶಿವಾಚಾರ್ಯರು ಪುರಾಣಕ್ಕೆ ಚಾಲನೆ ನೀಡಿ ಮಾತನಾಡಿ, ಭಕ್ತರೆಲ್ಲರೂ ಸೇರಿ ಭವ್ಯ ದೇಗುಲ ನಿರ್ಮಾಣ ಮಾಡಿದ್ದು ಖುಷಿ ತಂದಿದೆ. ಪುರಾಣ-ಪ್ರವಚನ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ದೊರಕುತ್ತದೆ. ಪ್ರತಿಯೊಬ್ಬರೂ ಧರ್ಮ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ಕರೆ ನೀಡಿದರು.
ಜೂ.15ರಂದು ಬೆಳಗ್ಗೆ ಕುಂಭ-ಕಳಸ ಮೆರವಣಿಗೆಯೊಂದಿಗೆ ಹೊನ್ನಕಿರಣಗಿಯ ಶ್ರೀ ರಾಜೋಟೆಶ್ವರ ಮಠದ ವೈದಿಕ ಬಳಕಗದಿಂದ ಮೂರ್ತಿ ಹಾಗೂ ಕಳಸದ ಗಂಗಾಸ್ನಾನ ನೆರವೇರಲಿದೆ. ಬಳಿಕ ದಂಪತಿಯಿಂದ ವಿವಿಧ ಪೂಜೆ ಕಾರ್ಯಕ್ರಮ ಜರುಗಲಿವೆ. ಜೂ.16ರಂದು ರೇವಗ್ಗಿಯ ಶ್ರೀ ರೇವಣಸಿದ್ಧೇಶ್ವರ ದೇಗುಲದಿಂದ ಗೊಣಗಿ ಗ್ರಾಮದವರೆಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ ಅದ್ದೂರಿ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಲಿದೆ. ಬಳಿಕ ಜಗದ್ಗುರುಗಳ ದಿವ್ಯ ಸಾನ್ನಿಧ್ಯದಲ್ಲಿ ಮಂದಿರ ಉದ್ಘಾಟನೆ, ಕಳಸಾರೋಹಣ ಹಾಗೂ ಧರ್ಮಸಭೆ ಜರುಗಲಿದೆ ಎಂದು ಮಾಹಿತಿ ನೀಡಿದರು.
ರಟಕಲ್​ನ ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net