ಹನುಮೇಶ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಮಾದರಿ

ಕಲಬುರಗಿ ಜೆಸ್ಕಾಂನಲ್ಲಿ ನಿವೃತ್ತ ಇಂಜಿನಿಯರ್​ ಹನುಮೇಶ ದಂಪತಿಯನ್ನು ಶುಕ್ರವಾರ ಸತ್ಕರಿಸಲಾಯಿತು. ಜೆಸ್ಕಾಂ ಅಧ್ಯಕ್ಷ ಪ್ರವಿಣ್​ ಪಾಟೀಲ್​ ಹರವಾಳ, ಎಂಡಿ ಕೃಷ್ಣ ಬಾಜಪೇಯಿ, ಚಂದ್ರಕಾಂತ ಪಾಟೀಲ್​, ಡಿ.ಎಚ್​.ಶಿವಶಂಕರ, ಸಚಿನ್​ ಹುಂಡೇಕಾರ ಇತರರಿದ್ದರು.
ಕಲಬುರಗಿ ಜೆಸ್ಕಾಂನಲ್ಲಿ ನಿವೃತ್ತ ಇಂಜಿನಿಯರ್​ ಹನುಮೇಶ ದಂಪತಿಯನ್ನು ಶುಕ್ರವಾರ ಸತ್ಕರಿಸಲಾಯಿತು. ಜೆಸ್ಕಾಂ ಅಧ್ಯಕ್ಷ ಪ್ರವಿಣ್​ ಪಾಟೀಲ್​ ಹರವಾಳ, ಎಂಡಿ ಕೃಷ್ಣ ಬಾಜಪೇಯಿ, ಚಂದ್ರಕಾಂತ ಪಾಟೀಲ್​, ಡಿ.ಎಚ್​.ಶಿವಶಂಕರ, ಸಚಿನ್​ ಹುಂಡೇಕಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಂಡಿ ಕೃಷ್ಣ ಬಾಜಪೇಯಿ ಶ್ಲಾನೆ
  • ಜೆಸ್ಕಾಂನಲ್ಲಿ ಸೇವಾ ನಿವೃತ್ತ ಇಂಜಿನಿಯರ್​ಗೆ ಬೀಳ್ಕೊಡುಗೆ
ಕಲಬುರಗಿ: ಹನುಮೇಶ ಅವರ ಕರ್ತವ್ಯನಿಷ್ಠೆ, ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವ ಎಲ್ಲರಿಗೂ ಮಾದರಿಯಾಗಿದೆ ಎಂದು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಕೊಂಡಾಡಿದರು.
ಜೆಸ್ಕಾಂ ಆವರಣದ ಕೆಇಬಿ ಇಂಜಿನಿಯರ್ಸ್​ ಅಸೋಸಿಯೆಷನ್​ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ, ಕರ್ನಾಟಕ ವಿದ್ಯುತ್​ ಪ್ರಸರಣ ನಿಗಮ, ಗುಲ್ಬರ್ಗ ವಿದ್ಯುಚ್ಛಕ್ತಿ ಸರಬರಾಜು ಕಂಪನಿಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹನುಮೇಶ ಪ್ರಾಣೇಶಾಚಾರ್ಯ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಯಾವುದೇ ಸಮಸ್ಯೆ ಎದುರಾದರೂ ಹನುಮೇಶ ಸರಳ ಮತ್ತು ಪರಿಣಾಮಕಾರಿ ಪರಿಹಾರ ನೀಡುತ್ತಿದ್ದರು. ವಿದ್ಯುತ್​ ಇಲಾಖೆಯಲ್ಲಿ 34 ವರ್ಷ ಸೇವೆ ಸಲ್ಲಿಸುವುದು ಸುಲಭವಲ್ಲ. ಇದು ಕೇವಲ ವೃತ್ತಿಯಿಂದ ನಿವೃತ್ತಿ, ಪ್ರವೃತ್ತಿಯಿಂದಲ್ಲ. ವಿಶ್ರಾಂತ ಜೀವನ ಸಂತೋಷದಿಂದ ತುಂಬಿರಲಿ ಎಂದು ಹಾರೈಸಿದರು.
ಜೆಸ್ಕಾಂ ಅಧ್ಯ ಪ್ರವಿಣ್​ ಪಾಟೀಲ್​ ಹರವಾಳ ಮಾತನಾಡಿದರು. ಅಧ್ಯತೆ ವಹಿಸಿದ್ದ ಜೆಸ್ಕಾಂ ನಿರ್ದೇಶಕ (ತಾಂತ್ರಿಕ) ಚಂದ್ರಕಾಂತ ಪಾಟೀಲ್​ ಮಾತನಾಡಿ, ಹನುಮೇಶ ಸದಾ ನಗುಮೊಗದ ವ್ಯಕ್ತಿ. ಅವರು ಕಂಪನಿಯಲ್ಲಷ್ಟೇ ಅಲ್ಲ ಅನೇಕ ಸ್ನೇಹಿತರು ಹಾಗೂ ಬಂಧುಗಳ ಪ್ರೀತಿ ಗಳಿಸಿದ್ದಾರೆ ಎಂದರು.
ಅನಿಸಿಕೆ ಹಂಚಿಕೊಂಡ ಹನುಮೇಶ ಅವರು, ಸಿಟ್ಟು ಅಥವಾ ಅವಸರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು. ತಮ್ಮ ಸೇವಾ ಅವಧಿಯಲ್ಲಿ ಮಾರ್ಗದರ್ಶನ ನೀಡಿದ ಹಿರಿಯ ಅಧಿಕಾರಿಗಳು, ಶಿಕರು, ಸಹುದ್ಯೋಗಿಗಳು ಹಾಗೂ ಸಿಬ್ಬಂದಿ ಮತ್ತು ಕುಟುಂಬ ಸದಸ್ಯರಿಗೆ ಹೃತ್ಪೂರ್ವಕ ಧನ್ಯವಾದ ಹೇಳಿದರು.

ಹನುಮೇಶ ಅವರು ಸೌಮ್ಯ ಸ್ವಭಾವದ, ಸರಳ, ಸಜ್ಜನ ವ್ಯಕ್ತಿ. ಎಂತಹ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳುತ್ತಿರಲಿಲ್ಲ. ಯುವ ಇಂಜಿನಿಯರ್​ಗಳಿಗೆ ಮಾದರಿಯಾಗಿದ್ದಾರೆ. ನಿವೃತ್ತಿ ನಂತರವೂ ಸಂಸ್ಥೆ ಬಯಸಿದರೆ ಸಹಕಾರ ನೀಡಬೇಕು.

> ಪ್ರವಿಣ್​ ಪಾಟೀಲ್​ ಹರವಾಳ

ಜೆಸ್ಕಾಂ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net