ಕೌಶಲಾಭಿವೃದ್ಧಿ ಇಲಾಖೆಗೆ ಕಿರಿಯ ತಾಂತ್ರಿಕ ಶಾಲೆಗಳ ಹಸ್ತಾಂತರ

ಕೌಶಲಾಭಿವೃದ್ಧಿ ಇಲಾಖೆಗೆ ಕಿರಿಯ ತಾಂತ್ರಿಕ ಶಾಲೆಗಳ ಹಸ್ತಾಂತರ
ಕೌಶಲಾಭಿವೃದ್ಧಿ ಇಲಾಖೆಗೆ ಕಿರಿಯ ತಾಂತ್ರಿಕ ಶಾಲೆಗಳ ಹಸ್ತಾಂತರ
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯದ ಭದ್ರಾವತಿ, ಬಳ್ಳಾರಿ, ಕಲಬುರಗಿ, ಹುಬ್ಬಳ್ಳಿ, ಮಂಗಳೂರು ಮತ್ತು ಬಾಗಲಕೋಟೆಯಲ್ಲಿ ಶಾಲೆಗಳ ಹಸ್ತಾಂತರ
  • ಈ ಶಾಲೆಗಳಿಗೆ 225 ಹುದ್ದೆಗಳು ಮಂಜೂರಾಗಿದ್ದು, 171 ಹುದ್ದೆಗಳು ಖಾಲಿ ಇದ್ದು, 54 ಹುದ್ದೆಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ
  • ಈ ಶಾಲೆಗಳ ಸ್ಥಿರ ಹಾಗೂ ಚರಾಸ್ತಿಗಳನ್ನು ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಕೌಶಲಾಭಿವೃದ್ಧಿ ಇಲಾಖೆಗೆ ಹಸ್ತಾಂತರ
ಬೆಂಗಳೂರು: ತಾಂತ್ರಿಕ ಶಿಕ್ಷಣ ಇಲಾಖೆಯ ಅಡಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ 6 ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಗಳನ್ನು ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀಣವೋಪಾಯ ಇಲಾಖೆಯ ಆಡಳಿತ ವ್ಯಾಪ್ತಿಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ.
ಪ್ರಸ್ತುತ ರಾಜ್ಯದ ಭದ್ರಾವತಿ, ಬಳ್ಳಾರಿ, ಕಲಬುರಗಿ, ಹುಬ್ಬಳ್ಳಿ, ಮಂಗಳೂರು ಮತ್ತು ಬಾಗಲಕೋಟೆಯಲ್ಲಿ ಶಾಲೆಗಳನ್ನು ನಡೆಸಲಾಗುತ್ತಿದೆ. ಈ ಶಾಲೆಗಳಿಗೆ 225 ಹುದ್ದೆಗಳು ಮಂಜೂರಾಗಿದ್ದು, 171 ಹುದ್ದೆಗಳು ಖಾಲಿ ಇದ್ದು, 54 ಹುದ್ದೆಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಈ ಶಾಲೆಗಳ ಸ್ಥಿರ ಹಾಗೂ ಚರಾಸ್ತಿಗಳನ್ನು ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಕೌಶಲಾಭಿವೃದ್ಧಿ ಇಲಾಖೆಗೆ ಹಸ್ತಾಂತರಿಸುವಂತೆ ಉನ್ನತ ಶಿಕ್ಷಣ ಇಲಾಖೆಯ ಉಪ ಕಾರ್ಯದರ್ಶಿ (ತಾಂತ್ರಿಕ ಶಿಕ್ಷಣ ಮತ್ತು ಯೋಜನೆ) ಎನ್. ಕುಮಾರ್ ಆದೇಶ ಹೊರಡಿಸಿದ್ದಾರೆ.
ಕಿರಿಯ ತಾಂತ್ರಿಕ ಶಾಲೆಗಳು ಮೂಲತಃ ಪ್ರೌಢಶಾಲೆಗಳಾಗಿದ್ದು, ಇವುಗಳ ವಾರ್ಷಿಕ ವರದಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯೇ ನಡೆಸುತ್ತಿದೆ. ಹಾಗೆಯೇ, ವಿದ್ಯಾರ್ಥಿಗಳಿಗೆ 8, 9 ಮತ್ತು 10ನೇ ತರಗತಿಯಲ್ಲಿ ಮಂಡಳಿಯು ನಿಗದಿಮಾಡಿರುವ 625 ಅಂಕಗಳ ಜತೆಗೆ 200 ಅಂಕಗಳ ತಾಂತ್ರಿಕ ವಿಷಯಗಳು (ಮೆಕಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಕಂ್ಯೂಟರ್ ಸೈನ್ಸ್, ಫಿಟ್ಟರ್, ಕಾರ್ಪೆಂಟ್ರಿ, ಟರ್ನರ್) ಬೋಧಿಸಲಾಗುತ್ತಿದೆ.
ಈ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರೌಢಾವಸ್ಥೆಯಲ್ಲಿಯೇ ತಾಂತ್ರಿಕ ಕ್ಷೇತ್ರದ ಮೇಲೆ ಆಸಕ್ತಿ ಮೂಡಲಿ ಎಂಬ ಕಾರಣದಿಂದ ವೃತ್ತಿ ಶಿಕ್ಷಣ ತರಬೇತಿ ನೀಡಲಾಗುತ್ತಿದೆ.ಆದರೆ,  ‘ಕಲಿಕೆ ಜತೆ ಕೌಶಲ’ ಎಂಬ ತತ್ವವನ್ನು ಅನುಸರಿಸುವುದರಿಂದ ಇವುಗಳನ್ನು ಕೌಶಲಾಭಿವೃದ್ಧಿ ಇಲಾಖೆಗೆ ತರಬೇಕೆಂದು ಕರ್ನಾಟಕ ಕೌಶಲ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಕೌಶಲಾಭಿವೃದ್ಧಿ ಇಲಾಖೆಗೆ ಹಸ್ತಾಂತರಿಸುವುದರಿಂದ ಪ್ರಸ್ತುತ ಕಾಲಘಟ್ಟಕ್ಕೆ ಅನುಗುಣವಾಗಿ ಹೆಚ್ಚಿನ ಕೌಶಲಾಧಾರಿತ ವಿಷಯಗಳನ್ನು ಪರಿಚಯಿಸುವ ವ್ಯವಸ್ಥೆಯನ್ನು ಮಾಡಬಹುದಾಗಿದೆ ಎಂದು ತಿಳಿಸಿದ್ದರು. ಈ ಕಾರಣದಿಂದ ಹಸ್ತಾಂತರಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net