ಹಲಕರ್ಟಿ ಶ್ರೀ ಪಾದಪೂಜೆ ಇಂದಿನಿಂದ

ಅಭಿನವ ಮುನೀಂದ್ರ ಶ್ರೀ
ಅಭಿನವ ಮುನೀಂದ್ರ ಶ್ರೀ
Published on

ಪ್ರಮುಖ ಮುಖ್ಯಾಂಶಗಳು

  • ಒಂದು ತಿಂಗಳು ವಿಶೇಷ ಕಾರ್ಯಕ್ರಮ
  • ಸೆ.16ರಂದು ಬೃಹತ್​ ಪಾದಯಾತ್ರೆ
ಚಿತ್ತಾಪುರ : ಹಲಕರ್ಟಿ ಕಟ್ಟಿಮನಿ ಮಹಾಸಂಸ್ಥಾನ ಹಿರೇಮಠದಲ್ಲಿ ಶ್ರಾವಣ ಪ್ರಯುಕ್ತ ಗುರುವಾರದಿಂದ ಸೆ.11ರವರೆಗೆ ಲೋಕಕಲ್ಯಾಣಕ್ಕಾಗಿ ಪೀಠಾಧಿಪತಿ ಶ್ರೀ ಅಭಿನವ ಮುನೀಂದ್ರ ಶಿವಾಚಾರ್ಯರಿಂದ ಉಪವಾಸ, ಇಷ್ಟಲಿಂಗ ಪೂಜೆ ಹಾಗೂ ಮಹಾಪಾದ ಪೂಜೆ ನಡೆಯಲಿದೆ.
ನಿತ್ಯ ಸಂಜೆ 6ರಿಂದ 8ರವರೆಗೆ ಪಾದಪೂಜೆ ಜರುಗಲಿದೆ. ಭಕ್ತರು ಪ್ರತಿದಿನ ಗುರುಗಳ ಪಾದಕ್ಕೆ ರುದ್ರಾಭಿಷೇಕ, ವಿಶೇಷವಾದ ಬಿಲ್ವಪತ್ರೆ, ಹೂವಿನ ಹಾರಗಳಿಂದ ಅಲಂಕಾರ ಹಾಗೂ ವಿವಿಧ ಬಗೆಯ ಆರತಿಗಳಿಂದ ಮಹಾಮಂಗಳಾರತಿ ನೆರವೇರಿಸುತ್ತಾರೆ. ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪ್ರತಿದಿನ ರಾತ್ರಿ 8ಕ್ಕೆ ಸಂತೆಕೆಲ್ಲೂರು ಶ್ರೀ ನಮಠೇಶ್ವರ ಪುರಾಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಚುರ್ಚಿಹಾಳದ ಪುಟ್ಟರಾಜ ಶಾಸ್ತ್ರಿ ಪುರಾಣ ನಡೆಸಿಕೊಡುವರು. ಕಲಾವಿದರಾದ ಪ್ರಭು ಕುಮಾರ ಗವಾಯಿ ಮದರಿ, ಲಕ್ಷ$್ಮಣ ಹೇರೂರು ಕಲಬುರಗಿ ಸಂಗೀತ ಸೇವೆ ಸಲ್ಲಿಸುವರು.
ಸೆ.16ರಿಂದ ಶ್ರೀ ಅಭಿನವ ಮುನೀಂದ್ರ ಶಿವಾಚಾರ್ಯರು ಹಲಕರ್ಟಿ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಕೋರವಾರದ ಶ್ರೀ ಅಣಿವೀರಭದ್ರೇಶ್ವರ ದೇವಸ್ಥಾನದವರೆಗೆ ಪಾದಯಾತ್ರೆ ನಡೆಸುವರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net